ಇಡೀ ಜೀವನಪೂರ್ತಿ ಮಾತ್ರೆ ತೆಗೆದುಕೊಳ್ಳುವ ಬದಲು, ಮನೆಯಲ್ಲಿಯೇ ಶುಗರ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ??

ನಮ್ಮ ದೇಶದಲ್ಲಿ ಕೊಟ್ಯಂತರ ಮಂದಿ ಮಧುಮೇಹ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಶಿಸ್ತುಬದ್ಧವಾದ ಜೀವನ ಕ್ರಮ ಇಲ್ಲದಿರುವುದು ಮುಖ್ಯ ಕಾರಣ. ಇನ್ನೂ ಕೆಲವರು ಅನುವಂಶಿಕವಾಗಿಯೂ ಬಂದಿರುತ್ತದೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರವಿಲ್ಲ. ಜೀವ ಇರುವ ವರೆಗೂ ಔಷಧ ಸೇವನೆ ಮಾಡುವುದೇ ಪರಿಹಾರ. ಅಲ್ಲದೆ ಶಿಸ್ತುಬದ್ಧ ಜೀವನ ಕ್ರಮ ರೂಢಿಸಿಕೊಳ್ಳುವುದರಿಂದ ಹಾಗೂ ಕೆಲವೊಂದು ಪದಾರ್ಥಗಳನ್ನು ತ್ಯಜಿಸುವುದರಿಂದಲೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಒಂದು ವೇಳೆ ಬಿ.ಪಿ ಹೆಚ್ಚಾಗಿದ್ದಾಗ ಈಗ ನಾವು ಹೇಳುವ ಔಷಧಗಳನ್ನು ಬಳಕೆ ಮಾಡುವುದರಿಂದಲೂ ಬಿ.ಪಿ ಕಂಟ್ರೋಲ್ಗೆ ಬರುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಏಕೆಂದರೆ ನಾವು ಈಗ ಹೇಳುತ್ತಿರುವುದು ಆಯುರ್ವೇದ ಔಷಧಿಯ ಕುರಿತು.

ಮಧುಮೇಹ ನಿಯಂತ್ರಿಸುವಲ್ಲಿ ನೆರಳೆ ಬೀಜಗಳು ತುಂಬಾ ಪ್ರಯೋಜನೆ ಬೀರುತ್ತವೆ. ನಿಮಗೆ ಸಕ್ಕರೆ ಕಾಯಿಲೆ ನಿಯಂತ್ರಣ ತಪ್ಪಿದ ವೇಳೆ ಇದನ್ನು ಬಳಕೆ ಮಾಡಬಹುದು. ನೆರಳೆ ಬೀಜಗಳನ್ನು ಚೆನ್ನಗಿ ಒಣಗಿಸಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಕಾಲಿ ಹೊಟ್ಟೆಯಲ್ಲಿ ಈ ನೇರಳೆ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯತೊಡಗಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಶುಗರ್ ಇರುವವರಿಗೆ ನೆಲ್ಲಿಕಾಯಿ ಸೇವಿಸುವುದು ರಾಮಬಾಣವಿದ್ದಂತೆ. ನೆಲ್ಲಿಕಾಯಿಯಲ್ಲಿ ವಿಟಾಮಿನ್ ಸಿ ಅಂಶ ಸಿಕ್ಕಾಪಟ್ಟೆ ಇದೆ. ಹಾಗಾಗಿ ಇದನ್ನು ನಿತ್ಯವೂ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನೆಲ್ಲಿ ಕಾಯಿ ಬೀಜವನ್ನು ಸಹ ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮಧುಮೇಹ ಶೀಘ್ರವಾಗಿ ಕಂಟ್ರೋಲ್ಗೆ ಬರುತ್ತದೆ.

ಇಷ್ಟೆ ಅಲ್ಲದೆ ನಿಮ್ಮ ತೋಟದಲ್ಲಿ ಬೆಳೆಯುವ ಅಂಜುರದ ಎಲೆ ಸಹ ಮಧುಮೇಹವನ್ನು ನಿಯಂತ್ರಿಸುವ ಗುಣ ಹೊಂದಿದೆ. ಈ ಎಲೆಯಲ್ಲಿ ಮಧುಮೇಹವನ್ನು ವಿರೋಧಿಸುವ ಔಷಧಿಯ ಗುಣಗಳು ಹೇರಳವಾಗಿದೆ. ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ ಅಂಜುರದ ಎಲೆಗಳನ್ನು ತಿನ್ನುವುದರಿಂದ ಅಥವಾ ಆ ಎಲೆಯನ್ನು ನೀರಿನಲ್ಲಿ ಬೇಯಿಸಿ ಆ ನೀರನ್ನು ಕುಡಿಯುವುದರಿಂದಲೂ ಸಹ ನೀವು ಮಧು ಮೇಹ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Leave A Reply

Your email address will not be published.