ದೋಸೆ ಮಾಡೋ ತವಾ ಹಳೆಯದಾಗಿದೆಯಾ; ದೋಸೆ ಸರಿಯಾಗಿ ಏಳುತ್ತಿಲ್ವಾ? ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿ !

ಹೆಣ್ಣುಮಕ್ಕಳಿಗೆ ಅಡುಗೆ ಮನೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದ್ರೂ, ಯಾವುದೇ ಸಾಮಾನು ಇಲ್ಲದಿದ್ರೂ ಅಡುಗೆ ಮಾಡಿ ಬಿಡುತ್ತಾರೆ. ಆ ಚಾಕಚಕ್ಯತೆ ಅವರಲ್ಲಿದೆ. ಮನೆಗೆ ಅತಿಥಿಗಳು ಬಂದು, ತಕ್ಷಣಕ್ಕೆ ಏನನ್ನೋ ಸಿದ್ದಪಡಿಸಬೇಕು ಅಂದ್ರೂ ನಮ್ಮ ಹೆಣ್ಣುಮಕ್ಕಳು ಅದಕ್ಕೆ ರೆಡಿ. ಆದರೆ ಅವರು ಅಡುಗೆ ಮನೆಯಲ್ಲಿ ಎದುರಿಸುವ ಸಮಾಲುಗಳು ಸಾಕಷ್ಟು! ಉದಾಹರಣೆಗೆ ನಮಗೆ ಬಿಸಿ ಬಿಸಿ ದೋಸೆಯನ್ನ ತಿಂದು ಗೊತ್ತು. ಆದರೆ ಅದರ ಹಿಂದೆ ಮನೆಯಲ್ಲಿ ಹೆಂಗಸರು ಎದುರಿಸುವ ಸವಾಲು ಎಷ್ಟು ಗೊತ್ತಾ? ಒಮ್ಮೊಮ್ಮೆ ತವಾದಿಂದ ಮಾಡಿದ ದೋಸೆಯೋ ಚಪಾತಿಯೋ ಸರಿಯಾಗಿ ಏಳುವುದೇ ಇಲ್ಲ. ಆದರೂ ಮನೆಯವರಿಗೆ ದೋಸೆ ಸರಿಯಾಗಿ ಮಾಡಿಕೊಡಬೇಕು. ಕಷ್ಟ ಅಲ್ವಾ! ಹೆಣ್ಣುಮಕ್ಕಳೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ತವಾ ವನ್ನು ಸರಿಯಾಗಿ ಹೇಗೆ ಪಳಗಿಸಬೇಕು ಎನ್ನುವುದನ್ನ ನಾವು ಹೇಳಿ ಕೊಡ್ತೇವೆ. ನೀವು ಈ ಟಿಪ್ಸ್ ಫಾಲೋ ಮಾಡಿದರೆ ತವಾ ಎಷ್ಟೇ ಕರಟಿಹೋಗಿದ್ದರೂ ಮೊದಲಿನ ರೂಪಕ್ಕೆ ಬರುತ್ತದೆ.

ದೋಸೆ ಮಾಡಿದ ನಂತರ ತವಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಪಾತ್ರೆ ತೊಳೆಯುವ ಸಾಬೂನು ಬಳಸಿ ತೊಳೆಯಿರಿ. ನಂತರ ಒಂದು ಹಳೆಯ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಒರೆಸಿರಿ. ತವಾದ ಮೇಲೆ ನೀರು ಇಲ್ಲದಂತೆ ಒರೆಸಿರಿ. ನಂತರ ಅದನ್ನು ಗ್ಯಾಸಿನ ಮೇಲಿಟ್ಟು ಒಂದು ಚಮಚ ಅಡುಗೆ ಎಣ್ಣೆಯನ್ನು ಹಾಕಿ. ಸ್ವಲ್ಪ ಬಿಸಿ ಬಂದ ನಂತರ ಒಂದು ಚಿಟಿಕೆ ಪುಡಿ ಉಪ್ಪನ್ನು ಹಾಕಿರಿ. ನಂತರ ಅದು ಇಡಿ ತವಾ ಪೂರ್ತಿ ಹರಡುವಂತೆ ಮಾಡಿ. ನಂತರ ಎರಡು ನಿಮಿಷ ಬಿಟ್ಟು ಗ್ಯಾಸ್ ಬಂದ್ ಮಾಡಿ ಒಂದು ಹಳೆಯ ಬಟ್ಟೆ ತೆಗೆದುಕೊಂಡು ತವಾವನ್ನು ಸ್ವಚ್ಛವಾಗಿ ಒರೆಸಿರಿ. ನಂತರ ಮತ್ತೊಂದು ಬಟ್ಟೆಯನ್ನು ತೆಗೆದುಕೊಂಡು ಮತ್ತೊಮ್ಮೆ ಸ್ವಚ್ಛವಾಗಿ ಒರೆಸಿರಿ. ಈಗ ನಿಮ್ಮ ತವಾ ಹಳೆಯ ರೂಪಕ್ಕೆ ಬರಲಿದೆ. ನೀವು ಆರಾಮವಾಗಿ ದೋಸೆಯನ್ನು ಎರೆದುಕೊಂಡು ತಿನ್ನಬಹುದು.

ಇದಲ್ಲದೆ ಇನ್ನೊಂದು ಟಿಪ್ಸ್ ಸಹ ಇದೆ. ಅದೆನೆಂದರೆ ತವಾವನ್ನು ಗ್ಯಾಸಿನ ಮೇಲಿಟ್ಟು ಎರಡು ಚಮಚ ಅಡುಗೆ ಎಣ್ಣೆಯನ್ನು ಹಾಕಿ. ನಂತರ ಸಾಸಿವೆ, ಉದ್ದಿನಬೇಳೆ ಹಾಕಬೇಕು. ಅದು ಸಿಡಿಯುವಷ್ಟು ಆದಾಗ ಗ್ಯಾಸ್ ಬಂದ್ ಮಾಡಿ ತೆಗೆದು ತವಾವನ್ನು ಹಳೆಯ ಬಟ್ಟೆಯನ್ನು ಬಳಸಿ ಸ್ವಚ್ಛವಾಗಿ ಒರೆಸಬೇಕು. ಹೀಗೆ ಮಾಡಿದರೂ ಸಹ ತವಾ ಫಳಫಳ ಹೊಳೆಯುತ್ತದೆ. ನಿಮಗೆ ಈ ಟಿಪ್ಸ್ ಗೊತ್ತಿಲ್ಲದಿದ್ದರೆ ಈಗಲೇ ಇದನ್ನು ತಿಳಿದು ಮಾಡಿ ನೋಡಿ. ಮನೆಯವರಿಗೆಲ್ಲ ರುಚಿ ರುಚಿಯಾದ ದೋಸೆಯನ್ನು ಈಸಿಯಾಗಿ ಮಾಡಿಕೊಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ!

Leave A Reply

Your email address will not be published.