ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ ಹಾಗೂ ಯಾವ್ಯಾವು ಚಾಲ್ತಿಯಲ್ಲಿವೆ ಎಂಬುದನ್ನು ತಿಳಿಯಬೇಕು ಎಂದರೆ ಜಸ್ಟ್ ಹೀಗೆ ಮಾಡಿ ಸಾಕು!

ಈಗ ಯಾರ ಕೈಯ್ಯಲ್ಲಿ ನೋಡಿದರೂ ಒಂದಾದರೂ ಎಂಡ್ರಾಯ್ಡ್ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರದ ನೀತಿಗಳಿಂದ ಈಗ ನಮ್ಮ ದೇಶದಲ್ಲೇ ಮೊಬೈಲ್ ತಯಾರಿಕೆ ಆರಂಭಗೊಂಡಿದೆ. ಈ ಮೊಬೈಲ್ ಕೆಲಸ ಮಾಡಬೇಕು. ನಮಗೆ ಬೇಕಾದ ಉಪಯೋಗ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಸಿಮ್ ಹಾಕಿಕೊಳ್ಳಲೇ ಬೇಕು. ಸಿಮ್ ಎನ್ನುವುದು ಮೊಬೈಲ್ಗೆ ಜೀವ ಇದ್ದ ಹಾಗೆ. ಅದು ಇಲ್ಲದಿದ್ದರೆ ಮೊಬೈಲ್ ಇದ್ದು ಇಲ್ಲದಂತೆಯೇ ಸರಿ. ಎಷ್ಟೋ ಜನರು ಒಂದು ಸಿಮ್ ವ್ಯಾಲಿಡಿಟಿ ಮುಗಿಯಿತು ಎಂದು ತೆಗೆದು ಬೇರೆ ಸಿಮ್ ತೆಗೆದುಕೊಳ್ಳುತ್ತಾರೆ. ಆದರೆ ಆ ಸಿಮ್ ಕಾರ್ಯಾಚರಣೆಯಲ್ಲಿ ಇರುತ್ತದೆ. ಅದನ್ನು ದೇಶವಿದ್ರೋಹದಂತಹ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮ ಹೆಸರನಲ್ಲಿರುವ ಸಿಮ್ ಬ್ಲಾಕ್ ಮಾಡುವುದು ಅಷ್ಟೇ ಅವಶ್ಯಕ. ಅದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ನಾವು ಹೇಳುವ ರೀತಿ ಮಾಡಿದರೆ ಸಾಕು. ನೀವು ಈಸಿಯಾಗಿ ಸಿಮ್ ಬ್ಲಾಕ್ ಮಾಡಬಹುದು.

sim card 1 | Live Kannada News
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ ಹಾಗೂ ಯಾವ್ಯಾವು ಚಾಲ್ತಿಯಲ್ಲಿವೆ ಎಂಬುದನ್ನು ತಿಳಿಯಬೇಕು ಎಂದರೆ ಜಸ್ಟ್ ಹೀಗೆ ಮಾಡಿ ಸಾಕು! https://sihikahinews.com/2022/08/20/how-to-know-how-many-sim-card-active-in-our-name/

ಎಷ್ಟೋ ಸಲ ನಾವು ಒಂದು ಕಂಪನಿಯ ಸಿಮ್ ಬಳಕೆಯನ್ನು ನಿಲ್ಲಿಸಿದಾಗ ಅದು ಕೆಲಸ ನಿರ್ವಹಿಸುವುದಿಲ್ಲ ಎಂದುಕೊಂಡುಬಿಡುತ್ತೇವೆ. ಆದರೆ ಅದು ನಿಜವಲ್ಲ. ಅಲ್ಲದೆ ಎಷ್ಟೋ ಜನರು ಸಿಮ್ ತೆಗೆದುಕೊಂಡು ಮರೆತು ಬಿಟ್ಟಿರುತ್ತಾರೆ. ಹೀಗೆಲ್ಲ ಆದ ಸಿಮ್ಗಳನ್ನು ಉಗ್ರಗಾಮಿ ಸಂಘಟನೆಗಳು ಸಹ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಿಮ್ನ ಸ್ಥಿತಿಗತಿ ನೀವು ತಿಳಿದುಕೊಳ್ಳಲೇ ಬೇಕು. ಇಲ್ಲದೆ ಹೋದರೆ ವಿನಾಕಾರಣ ಸಮಸ್ಯೆಗೆ ಸಿಲುಕುತ್ತೀರಿ. ಅದಕ್ಕಾಗಿಯೇ ಟೆಲಿಕಾಂ ಇಲಾಖೆಯು ನಿಮ್ಮ ಸ್ಥಿತಿಗತಿ ತಿಳಿದುಕೊಳ್ಳಲು ವೆಬ್ಸೈಟ್ ಆರಂಭಿಸಿದೆ. ಅಲ್ಲಿ ಹೋದರೆ ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ನೀವು ಕೇಂದ್ರ ಸರ್ಕಾರದ ಟೆಲಿಕಾಂ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಇದೆ ಎಂದು ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಹೆಸರಲ್ಲಿ ಯಾರಾದರೂ ನಕಲಿ ದಾಖಲೆ ಸೃಷ್ಟಿಸಿ ಸಿಮ್ ಪಡೆದುಕೊಂಡಿದ್ದರೆ ಅದನ್ನು ನೀವು ಕಂಡುಕೊಳ್ಳಬಹುದು ಹಾಗೂ ನಿರ್ಬಂದಿಸಬಹುದು. ಇದಕ್ಕಾಗಿಯೇ ಟೆಲಿಕಾಂ ಇಲಾಖೆ ಒಂದು ಪೋರ್ಟಲ್ ಆರಂಭಿಸಿದೆ. ಅದರ ಹೆಸರು ಟೆಲಿಕಾಂ ಅನಾಲಿಟಿಕ್ಸ್ ಫಾರ್ ವಂಚನೆ ನಿರ್ವಹಣೆ ಹಾಗೂ ಗ್ರಾಹಕ ರಕ್ಷಣೆ.

ನೀವು ಪೋರ್ಟಲ್ ಗೆ ಭೇಟಿ ನೀಡಿದರೆ ನಿಮ್ಮ ಸಿಮ್ ಮಾಹಿತಿ ಪಡೆದುಕೊಳ್ಳಬಹುದು. ಅದು ಹೇಗೆ ಅಂತಿರಾ?

ಮೊದಲಿಗೆ ನೀವು ಇದರಲ್ಲಿನ ವೆಬ್ಸೈಟ್ ಓಪನ್ ಮಾಡಬೇಕು. ಓಪನ್ ಮಾಡಿದ ನಂತರ ನೀವು ಬಳಸುತ್ತಿರುವ ಮೊಬೈಲ್ಗೆ ಒಂದು ಒಟಿಪಿ ಬರುತ್ತದೆ. ಅದನ್ನು ಅಲ್ಲಿ ಅಪ್ಲೋಡ್ ಮಾಡಬೇಕು. ನೀವು ಒಟಿಪಿ ಭರ್ತಿ ಮಾಡಿದ ನಂತರ ಅಲ್ಲಿ ನೀವು ಬಳಸುತ್ತಿರುವ ಸಿಮ್ಗಳ ವಿವರ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ನೀವು ಬಳಸದೆ ಇರುವ ಸಿಮ್ಗಳಿದ್ದರೆ ಅಲ್ಲಿ ನೀವು ಬ್ಲಾಕ್ ಮಾಡಲು ಅವಕಾಶ ನೀಡಲಾಗಿರುತ್ತದೆ. ಇಷ್ಟೇ ಅಲ್ಲದೆ ಟ್ರ್ಯಾಕಿಂಗ್ ಐಡಿಯನ್ನು ಸಹ ನೀಡಲಾಗುತ್ತದೆ. ಇದರಿಂದ ನೀವು ಬಳಸದಿರುವ ಸಿಮ್ ಬಳಕೆ ಮಾಡುತ್ತಿರುವವರ ಮೇಲೆ ಯಾವ ರೀತಿ ಕ್ರಮ ಜರುಗಿಸಲಾಗಿದೆ ಎಂದು ಸಹ ನೀವು ತಿಳಿದುಕೊಳ್ಳಬಹುದು.

Leave A Reply

Your email address will not be published.