ಬಿಗ್ ನ್ಯೂಸ್: ಕಡಿಮೆ ಬೆಳೆಗೆ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ: ಎಷ್ಟು ಗೊತ್ತೇ?? ಇಂದೇ ಹೋಗಿ ಬುಕ್ ಮಾಡಿ

ಈಗ ಕೆಲಸಕ್ಕೆ ಹೋಗುವ ಪ್ರತಿಯೊಬ್ಬರ ಬಳಿಯೂ ಸಾಮಾನ್ಯವಾಗಿ ಬೈಕ್ ಇರುತ್ತದೆ. ಕಾರಣ ಕಚೇರಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು. ಅಲ್ಲದೆ ಬಸ್ ಅಥವಾ ಖಾಸಗಿ ಸಾರಿಗೆಗಳನ್ನು ನೆಚ್ಚಿಕೊಂಡರೆ ಕಚೇರಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲ. ಇಲ್ಲದೆ ಹೋದರೆ ಗಡಿಬಿಡಿಯಲ್ಲಿ ತಯಾರಾಗಿ ಹೋಗಬೇಕಾಗುತ್ತದೆ. ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ಬೈಕ್ ಬಳಸಲು ಇಷ್ಟಪಡುತ್ತಾರೆ. ಈಗ ಪೆಟ್ರೋಲ್ ಬೈಕ್ಗಳ ಕಾಲ ಮುಗಿದು ವಿದ್ಯುತ್ ಚಾಲಿತ ಬೈಕ್ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಮುಂದೆ ವಿದ್ಯುತ್ ಚಾಲಿತ ಬೈಕ್ಗಳ ಸಂಖ್ಯೆ ಏರಿಕೆ ಆಗಲಿದೆ.

ಇನ್ಮುಂದೆ ವಿದ್ಯುತ್ ಚಾಲಿತ ಬೈಕ್ ಗಳದ್ದೇ ಯುಗ ಎಂದರೆ ತಪ್ಪಾಗಲಾರದು. ಆದರೆ ಇದರ ಬೆಲೆ ೧.೫ ಲಕ್ಷ ರೂ.ಗೂ ಹೆಚ್ಚಿಗೆ ಇರುವುದರಿಂದ ಇದನ್ನು ಮಧ್ಯಮ ವರ್ಗದವರು ಹಾಗೂ ಕೆಳ ಮಧ್ಯಮ ವರ್ಗದ ಜನರ ಬಳಿ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಓಲಾ ಸಂಸ್ಥೆಯು ತನ್ನ ಬಳಕೆದಾರರಿಗೆ ವಿಶೇಷ ಆಫರ್ ನೀಡಿದೆ. ಹಾಗೂ ಹಲವಾರು ವಿಶೇಷ ಫಿಚರ್ ಗಳನ್ನು ನೀಡುವ ಭರವಸೆ ನೀಡಿದೆ.

ಎಲಿಕ್ಟ್ರಿಕ್ ಬೈಕ್ ತಯಾರಿಕಾ ಸಂಸ್ಥೆಯಾದ ಓಲಾ ಭಾರತದಲ್ಲಿ ಹೊಸ ಎಸ್ 1 ಇವಿ ಎನ್ನುವ ಬೈಕ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋರೂಂ ಬೆಲೆ ಕೇವಲ ತೊಂಬತ್ತೊಬ್ಬತ್ತು ಸಾವಿರದ ತೊಂಬತ್ತೊಂಬತ್ತು ರೂ.ಗಳು ಮಾತ್ರ. ಈ ಬೈಕ್ ಹೊಸ ಎಸ್1 ಇಲೆಕ್ಟ್ರಿಕಲ್ ಬೈಕ್ ಎಸ್ 1 ಪ್ರೋ ಮಾದರಿಯನ್ನೇ ಹೊಂದಿದೆ. ಆ.೧೫ ರಿಂದ ೩೧ವರೆಗೆ ಕೇವಲ ನಾಲ್ಕು ನೂರಾ ತೊಂಬತ್ತೊಂಬತ್ತು ರೂ. ಪಾವತಿಸಿ ನೀವು ಬೈಕ್ ಬುಕ್ ಮಾಡಬಹುದಾಗಿದೆ. ಹೊಸ ಒಲಾ ಎಸ್ 1 ಖರೀದಿಯು ಸಪ್ಟೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ಈ ಬೈಕ್ ಗಳ ವಿತರಣೆಯೂ ಸೆ. 7ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಹೊಸ ಬೈಕ್ 2.98 ಕೆಡಬ್ಲ್ಯೂ ಕೆಎಚ್ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು ಗಂಟೆಗೆ 90 ಕೀಮೀ ವೇಗದಲ್ಲಿ ಓಡಿಸಬಹುದು. ಹೊಸ ಒಲಾ ಎಸ್ ಒಂದೇ ಚಾರ್ಜ್ ನಲ್ಲಿ 140 ಕೀಮಿ ಓಡಲಿದೆ. ಇದರಲ್ಲಿ ಮ್ಯೂಸಿಕ್ ಪ್ಲೇ ಬ್ಯಾಕ್, ನ್ಯಾವಿಗೇಶನ್ ಕಂಪೆನಿಯನ್ ಅಪ್ಲಿಕೇಶನ್, ರಿವರ್ಸ್ ಮೋಡ್ ಸೇರಿದಂತೆ ವಿವಿಧ ಫಿಚರ್ ಹೊಂದಿದೆ. ಈ ಹೊಸ ಒಲಾ ಎಸ್1 ಬೈಕ್ ಎಸ್1 ಪ್ರೋ ನಂತೆಯೇ ಕಾಣುತ್ತಿದೆ. ಇದು ಜೆಟ್ ಬ್ಲ್ಯಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್ ಎಂಬ ಬಣ್ಣಗಳಲ್ಲಿ ನಿಮಗೆ ಸಿಗಲಿದೆ. ನಿಮಗೆ ಯಾವ ಬಣ್ಣ ಇಷ್ಟವೋ ಆ ಬಣ್ಣದ ಬೈಕ್ ನೀವು ಖರೀದಿಸಬಹುದು.

Leave A Reply

Your email address will not be published.