ಹಸು ಎದುರು ನೃತ್ಯ ಮಾಡಲು ಹೋಗಿ ಗುದ್ಧಿಸಿಕೊಂಡ ಯುವತಿಯ ಕಥೆ ಏನಾಯ್ತು ನೋಡಿ!

ಹಸು ಒಂದು ಮುಗ್ಧ ಪ್ರಾಣಿ. ಅದು ತಾನಾಗಿಯೇ ಯಾರ ಸುದ್ದಿಗೂ ಹೋಗುವುದಿಲ್ಲ. ಹಸುವಾಗಲಿ ಅಥವಾ ಸೈಲೆಂಟ್ ಆಗಿರುವ ಮನುಷ್ಯರೇ ಆಗಲಿ. ಅವರನ್ನ ಸುಮ್ಮನೇ ಕೆಣಕಲು ಹೋಗಬಾರದು. ಸೈಲೆಂಟ್ ಆಗಿದ್ದವರು ಯಾವಾಗ ವೈಲೆಂಟ್ ಆಗ್ತಾರೋ ಹೇಳೋಕ್ಕಾಗಲ್ಲ ಅಲ್ವಾ! ಎಲ್ಲರ ತಾಳ್ಮೆಗೂ ಒಂದು ಮಿತಿ ಇರುತ್ತೆ. ಇಲ್ಲೊಬ್ಬ ಹುಡುಗಿ ಸುಮ್ಮನೆ ಇದ್ದ ಹಸುವಿನ ತಾಳ್ಮೆ ಪರೀಕ್ಷಿಸಲು ಹೋಗಬೇಕಿತ್ತೇ! ಹಾಗೆ ಮಾಡಿದ್ದಕ್ಕೆ ಅವಳ ಸ್ಥಿತಿ ಏನಾಯ್ತು ನೋಡಿ!

ಸುಮ್ಮನಿದ್ದು, ನೋಡುವಷ್ಟು ನೋಡಿ ಕೊನೆಗೆ ತನಗೆ ತೊಂದರೆ ಕೊಟ್ಟ ಹುಡುಗಿಯನ್ನ ಹಸು ಏನು ಮಾಡಿದೆ ಗೊತ್ತೇ! ಹಸುವೊಂದನ್ನು ಹಗ್ಗದಿಂದ ಕಟ್ಟಿ ಹಾಕಲಾಗಿತ್ತು. ಇದರಿಂದ ಅದು ಯಾರದ್ದೋ ಮನೆಯಲ್ಲಿ ಸಾಕಲಾಗಿದ್ದ ಹಸು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇನ್ನು ಆ ಹಸುವೂ ಹಸಿದಿತ್ತು. ಹಸುವಿಗೆ ಒಬ್ಬಳು ಹುಡುಗಿ ಆಹಾರವನ್ನು ಹಾಕಿದ್ದಾಳೆ. ಆಹಾರ ಕೊಟ್ಟ ಮೇಲೆ ಅದನ್ನು ತಿನ್ನಲು ಬಿಡಬೇಕು ತಾನೇ!

ಪಿಂಕ್ ಕುರ್ತಾ ಧರಿಸಿ, ಹಸಿರು ಬಣ್ಣದ ಲೆಗ್ಗಿನ್ಸ್ ಧರಿಸಿದ್ದ ಹುಡುಗಿಯೊಬ್ಬಳು ಹಸುವಿಗೆ ಆಗಾರವನ್ನು ಕೊಟ್ತು ಅದರ ಮುಂದೆ ವಿಲಕ್ಷಣವಾಗಿ ಕುಣಿದಿದ್ದಾಳೆ. ಹಾಕಿದ ಆಹಾರವನ್ನು ತಿನ್ನಲು ಬಿಡದೇ ತನ್ನ ಮುಂದೆ ಹೀಗೆ ಮಂಗನಂತೆ ಕುಣಿಯುತ್ತಿರುವ ಹುಡುಗಿಯನ್ನು ನೋಡಿ ಬಹುಶಃ ಆ ಹಸುವಿಗೂ ತಾಳ್ಮೆ ಕೆಟ್ಟಿರಬೇಕು.  ಹಸಿದಿತ್ತು ಬೇರೆ! ನೃತ್ಯ ಮಾಡುತ್ತಿದ್ದ ಹುಡುಗಿಯನ್ನು ಎತ್ತಿ ಬಿಸಾಡಿತ್ತು ಆ ಹಸು. ಹಸು ಗುಮ್ಮುತ್ತಿದ್ದಂತೆ ಹುಡುಗಿ ಅಲ್ಲಿಯೇ ಇದ್ದ ಬುಟ್ಟಿಯಲ್ಲಿ ಬಿದ್ದಿದ್ದಾಳೆ. ಕೊನೆಗೆ ಹೇಗೋ ಕಷ್ಟಪಟ್ಟು ಎದ್ದಳು. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ psycho_biihari ಎನ್ನುವ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸ್ನೇಹಿತರೆ ಇದು ಫನ್ನಿ ವಿಡಿಯೋವೇ ಇರಬಹುದು. ಆದರೆ ಹೀಗೆ ಮೂಕ ಪ್ರಾಣಿಗೆ ತೊಂದರೆ ಕೊಡುವ ಮನುಷ್ಯನ ಮನಸ್ಥಿತಿ ನಿಜಕ್ಕೂ ಸರಿಹೋಗಬೇಕು. ನಾಯಿಗಳಿಗೆ ಕಲ್ಲಿನಿಂದ ಹೊಡೆಯುವುದು, ಪಟಾಕಿ ಇಟ್ಟು ಸಿಡಿಸುವುದು ಹೀಗೆ ಹಲವು ಕಿಡಿಗೇಡಿ ಕೆಲಸವನ್ನು ನಿಲ್ಲಿಸಿ, ಮೂಕಪ್ರಾಣಿಗಳು ಅವರಷ್ಟಕ್ಕೆ ಅವರು ಬದುಕಲು ಬಿದಬೇಕು. ಆಗ ಮಾತ್ರ ನಾವೂ ಮಾನವೀಯತೆ ಇರುವ ಮನುಷ್ಯರು ಎನಿಸಿಕೊಳ್ಳುತ್ತೇವೆ ಅಲ್ವಾ! ಸ್ನೇಹಿತರೆ ಈ ವಿಡಿಯೋ ಹಾಗೂ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ!

Leave A Reply

Your email address will not be published.