ಸ್ವಿಗಿಯಲ್ಲಿ ಪುಡ್ ಆರ್ಡರ್ ಮಾಡಿ ಎಷ್ಟು ಸಮಯ ಆದರೂ ಫುಡ್ ಬರದೇ ಇದ್ದಿದ್ದಕ್ಕೆ ಆ ವ್ಯಕ್ತಿ ಡೆಲಿವರಿ ಬಾಯ್ ಗೆ ಮಾಡಿದ್ದೇನು ಗೊತ್ತಾ!

ಇದು ಇಂಟರ್ನೆಟ್ ಯುಗ. ನಮ್ಮ ಕೈಯಲ್ಲಿ ಮೊಬೈಲ್ ಅದಕ್ಕೊಂದು ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು ನಮಗೆ ಬೇಕಾದ ನಮ್ಮ ಎದುರೇ ಇರುತ್ತೆ. ಇತ್ತೀಚಿಗೆ ಹೆಚ್ಚಿನವರು ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತ ಸ್ವಿಗ್ಗಿ ಅಥವಾ ಝೋಮ್ಯಾಟೋ ದಂತಹ ಅಪ್ಲಿಕೇಶನ್ ಗಳ ಮೂಲಕ ಆಹಾರ ಆರ್ಡರ್ ಮಾಡಿ ತರಿಸಿಕೊಳ್ಳುವುದೇ ಹೆಚ್ಚು. ಇನ್ನು ಪೈಪೋಟಿಗೆ ಬಿದ್ದಿರುವ ಇಂತಹ ಅಪ್ಲಿಕೇಶನ್ ಗಳು 30 ನಿಮಿಷದ ಒಳಗೆ ಡೆಲಿವರಿ ಕೊಡುವುದಾಗಿ ಒಪ್ಪಿಕೊಂಡಿರುತ್ತವೆ. ಅವರ ನಿಗದಿತ ಸಮಯದ ಒಳಗೆ ನಮ್ಮ ಫುಡ್ ತಲುಪದೇ ಇದ್ದರೆ ಹಣ ಹಿಂತಿರುಗಿಸುವ ಕಮಿಟ್ಮೆಂಟ್ ಕೊಟ್ಟಿರುತ್ತಾರೆ. ಅದೇನೇ ಇರಲಿ ಹಸಿವಾದಾಗ ಫುಡ್ ಆರ್ಡರ್ ಮಾಡಿದ ಸ್ವಲ್ಪ ಸಮಯದಲ್ಲಿ ಆಹಾರ ನಮ್ಮ ಕೈ ಸೇರದೆ ಇದ್ರೆ ಕೋಪಗೊಳ್ಳೋದು ಸಹಜ ತಾನೇ! ಹೀಗೆ ಕೋಪಗೊಂಡ ವ್ಯಕ್ತಿ ಡೆಲಿವರಿ ಬಾಯ್ ಮನೆಯ ಒತ್ತಿದಾಗ ಮಾಡಿದ್ದೇನು ಗೊತ್ತಾ?

swiggy | Live Kannada News
ಸ್ವಿಗಿಯಲ್ಲಿ ಪುಡ್ ಆರ್ಡರ್ ಮಾಡಿ ಎಷ್ಟು ಸಮಯ ಆದರೂ ಫುಡ್ ಬರದೇ ಇದ್ದಿದ್ದಕ್ಕೆ ಆ ವ್ಯಕ್ತಿ ಡೆಲಿವರಿ ಬಾಯ್ ಗೆ ಮಾಡಿದ್ದೇನು ಗೊತ್ತಾ! https://sihikahinews.com/2022/08/22/delivry-boy-delivers-food-very-late-to-customer-then-what-happens/

ಇದು ಬೆಂಗಳೂರಿನಲ್ಲಿಯೇ ನಡೆದ ಘಟನೆ. ರೋಹಿತ್ ಕುಮಾರ್ ಎನ್ನುವ ವ್ಯಕ್ತಿ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಲಿಂಕ್ ಡಿನ್ ನಲ್ಲಿ ಹಂಚಿಕೊಂಡಿದ್ದಾರೆ. ಆ ದಿನ ರೋಹಿತ್ ಕುಮಾರ್ ಸಿಂಗ್ ಅವರಿಗೆ ಬಹಳ ಹಸಿವಾಗಿತ್ತು. ಕೂಡಲೇ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡುತ್ತಾರೆ. ಫುಡ್ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಆದರೆ ಸಮಯ ಮೀರಿದರೂ ಫುಡ್ ಮಾತ್ರ ಬರುವುದೇ ಇಲ್ಲ ಆಗ ಡೆಲಿವರಿ ಬಾಯ್ ಗೆ ಕರೆ ಮಾಡುತ್ತಾರೆ ರೋಹಿತ್. ಎಲ್ಲಿದ್ದೀರಿ ಅಂತ ಕೇಳಿದ್ದಕ್ಕೆ ಡೆಲಿವರಿ ಬಾಯ್ ಆಗಿದ್ದ ಕೃಷ್ಣಪ್ಪ ರಾಥೋಡ್ ಇನ್ನು ಸ್ವಲ್ಪ ಸಮಯದಲ್ಲಿ ನಿಮ್ಮ ಮನೆಯ ಎದುರು ಇರುತ್ತೇನೆ ಸರ್ ಅಂತ ಬಹಳ ಧನ್ಯತಾಭಾವದಿಂದ ಹೇಳುತ್ತಾರೆ. ಮತ್ತೆ ಕಾದ ರೋಹಿತಿಗೆ ನಿರಾಸೆ ಆಗುತ್ತೆ. ಮತ್ತೊಮ್ಮೆ ಕೃಷ್ಣಪ್ಪ ಅವರಿಗೆ ಕಾಲ್ ಮಾಡುತ್ತಾರೆ ರೋಹಿತ್. ‘ಅಣ್ಣ ಎಷ್ಟು ಹೊತ್ತಿಗೆ ಬರುತ್ತೀರಿ ನನಗೆ ತುಂಬಾ ಹಸಿವಾಗುತ್ತಿದೆ’ ಅಂತ ರೋಹಿತ್ ಕೇಳುತ್ತಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಅಷ್ಟೇ ತಾಳ್ಮೆಯಿಂದ ಸರ್ ನನಗೆ ಐದರಿಂದ 10 ನಿಮಿಷ ಸಮಯ ಕೊಡಿ ಅಷ್ಟರಲ್ಲಿ ನಿಮ್ಮ ಮನೆಗೆ ಬಂದಿರುತ್ತೇನೆ’ ಅಂತ ಹೇಳುತ್ತಾನೆ.

ಮುಂದಿನ ಐದು ನಿಮಿಷ ಕಳೆಯುತ್ತಿದ್ದ ಹಾಗೆ ರೋಹಿತ್ ಕುಮಾರ್ ಮನೆಯ ಬಾಗಿಲ ಬೆಲ್ ಆಗುತ್ತೆ. ಡೆಲಿವರಿ ಕೊಡುವುದಕ್ಕೆ ತಡವಾಗಿದ್ದಕ್ಕೆ ಬಾಗಿಲು ತೆಗೆದು ಚೆನ್ನಾಗಿ ಬಯ್ಯಬೇಕು ನನ್ನಲ್ಲಿ ಇರುವ ಸಿಟ್ಟನೆಲ್ಲ ಹೊರಹಾಕಬೇಕು ಅಂದುಕೊಂಡಿದ್ದ ರೋಹಿತ್ ಕುಮಾರ್ ಬಾಗಿಲು ತೆಗೆದಾಗ ಅಲ್ಲಿ ನಡೆದಿದ್ದೇ ಬೇರೆ!

ಒಂದು ಕೈನಲ್ಲಿ ರೋಹಿತ್ ಆರ್ಡರ್ ಮಾಡಿದ ಫುಡ್ ಹಿಡಿದು ಮುಖದಲ್ಲಿ ಸಣ್ಣ ನಗುವನ್ನು ಹೊತ್ತು ನಿಂತಿದ್ದ ಆ ವ್ಯಕ್ತಿ 40 ವರ್ಷದ ಪ್ರಾಯದ ಕೃಷ್ಣಪ್ಪ. ಇನ್ನೊಂದು ಕೈಯಲ್ಲಿ ತಮ್ಮ ಊರುಗೋಲನ್ನ ಹಿಡಿದು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದ. ಹೀಗೆ ಅಂಗವಕಲ್ಯಾ ಹೊಂದಿರುವ ವ್ಯಕ್ತಿ ನನಗೆ ಊಟ ತಲುಪಿಸಲು ಎಷ್ಟು ಕಷ್ಟಪಟ್ಟಿರಬಹುದು ಅಂತ ರೋಹಿತ್ ಕುಮಾರ್ ಗೆ ಬಹಳ ಬೇಸರವಾಗುತ್ತೆ ನಂತರ ಕೃಷ್ಣಪ್ಪ ಅವರ ಬಳಿ ಕ್ಷಮೆಯನ್ನು ಕೇಳುತ್ತಾರೆ ರೋಹಿತ್. ಕೋವಿಡ್ ಸಮಯದಲ್ಲಿ ತಾವು ಕೆಲಸ ಮಾಡುತ್ತಿದ್ದ ಕೆಫೆಯಲ್ಲಿ ಕೆಲಸವನ್ನ ಕಳೆದುಕೊಂಡ ನಂತರ ಹೀಗೆ ಫುಡ್ ಡೆಲಿವರಿ ಮಾಡುವ ಕಾಯಕವನ್ನು ಆರಂಭಿಸಿರುವುದಾಗಿ ಕೃಷ್ಣಪ್ಪ ಹೇಳುತ್ತಾರೆ ಒಂದೆರಡು ನಿಮಿಷ ಮಾತನಾಡಿ ಸರ್ ನನ್ನ ಮುಂದಿನ ಡೆಲಿವರಿ ಕೊಡಲು ತಡವಾಗುತ್ತೆ ಬರುತ್ತೇನೆ ಅಂತ ಕೃಷ್ಣಪ್ಪ ಹೊರಟು ಹೋಗುತ್ತಾರೆ. ಆದರೆ ಅವರ ಚರ್ಯೆ ಮಾತ್ರ ರೋಹಿತ್ ಅವರ ಕಣ್ಣಿನಲ್ಲಿ ಹಾಗೆಯೇ ಉಳಿದುಬಿಡುತ್ತದೆ.

ಈ ಘಟನೆಯ ಬಗ್ಗೆ ರೋಹಿತ್ ಕುಮಾರ್ ಸಿಂಗ್ ಬಹಳ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಫುಡ್ ಡೆಲಿವರಿ ಲೇಟ್ ಆದರೆ ಎಲ್ಲರೂ ಅವರಿಗೆ ಬೈಯುತ್ತಾರೆ ಆದರೆ ನಿಜಕ್ಕೂ ಫುಡ್ ತಲುಪಿಸಲು ತಡವಾದ ಕಾರಣವನ್ನು ಕೇಳುವವರು ಕಡಿಮೆ. ಕೆಲವರು ನಿಜಕ್ಕೂ ಬಹಳ ಕಷ್ಟಪಟ್ಟು ಫುಡ್ ಡೆಲಿವರಿ ನೀಡುತ್ತಾರೆ ಅಂಥವರ ಬಗ್ಗೆ ನಮ್ಮಲ್ಲಿ ಗೌರವ ಬೆಳೆಸಿಕೊಳ್ಳಬೇಕು. ಇಂತಹ ಹೃದಯಸ್ಪರ್ಶಿ ಘಟನೆಯನ್ನು ಕೇಳಿದ ಮೇಲೆ ನಿಮಗೆ ಏನು ಅನಿಸುತ್ತೆ! ಅಭಿಪ್ರಾಯ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.