ಮೊಸರನ್ನು ಈ ಪದಾರ್ಥದೊಂದಿಗೆ ಮಾತ್ರ ಮಿಶ್ರಣ ಮಾಡುವ ತಪ್ಪು ಮಾಡದಿರಿ!

ಭಾರತೀಯ ಆಹಾರ ಪದ್ದತಿಯಲ್ಲಿ ಮೊಸರು ಅಗ್ರಗಣ್ಯ. ಎಷ್ಟೋ ಜನರಿಗೆ ಕೇವಲ ಮೊಸರೊಂದು ಇದ್ದರೆ ಸಾಕು ಊಟ ಮುಗಿದು ಬಿಡುತ್ತದೆ. ಹಾಗಾಗಿ ಮೊಸರಿಗೆ ದೇಶದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮೊಸರನ್ನು ಬಳಸಿಕೊಂಡು ಹಲವು ರೀತಿಯ ಅಡುಗೆಗಳನ್ನು ಮಾಡಲಾಗುತ್ತದೆ. ಆದರೆ ಮೊಸರನ್ನು ಕೆಲವೊಂದು ಪದಾರ್ಥಗಳೊಂದಿಗೆ ಸೇರಿಸಿದರೆ ಮೊಸರು ಶೀಘ್ರವಾಗಿ ಕೆಟ್ಟು ಹೋಗಿ ಬಿಡುತ್ತದೆ. ಆದ್ದರಿಂದ ಮೊಸರನ್ನು ಕೆಲವು ಪದಾರ್ಥಗಳ ಜೊತೆ ಮಿಶ್ರಣ ಮಾಡದಿರುವುದೇ ಒಳಿತು.

ಮೊಸರು ವೈಜ್ಞಾನಿಕವಾಗಿಯೂ, ಆರೋಗ್ಯ ಪದ್ಧತಿಗಳಲ್ಲಿಯೂ ಮಹತ್ವ ಪಡೆದಿದೆ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೊಸರಿನಲ್ಲಿ ಕಾಲ್ಸಿಯಂ ಅಂಶ ಹೇರಳವಾಗಿ ಇರುತ್ತದೆ. ಈ ಕ್ಯಾಲ್ಸಿಯಂ ಅಂಶವು ದೇಹದ ಮೂಳೆಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ವಿಟಾಮಿನ್ ಬಿ೨, ವಿಟಾಮಿನ್ ಬಿ ೧೨, ಮೆಗ್ನೇಷಿಯಂ, ಪೊಟ್ಯಾಶಿಯಂ, ಪ್ರೋಟಿನ್ ಕೂಡ ತುಂಬಿಕೊಂಡಿರುವುದರಿಂದ ಆರೋಗ್ಯದ ಆಗರವಾಗಿದೆ. ಆದ್ದರಿಂದಲೇ ಮೊಸರನ್ನು ಸೂಪರ್ ಫುಡ್ ಎಂದೂ ಕರೆಯಲಾಗುತ್ತದೆ.

ಎಷ್ಟೋ ಜನರಿಗೆ ಎಷ್ಟೇ ರುಚಿಯಾದ ಪದಾರ್ಥಗಳನ್ನು  ಊಟ ಮಾಡಿದರೂ ಕೊನೆಯಲ್ಲಿ ಒಂದು ಸ್ವಲ್ಪ ಮೊಸರನ್ನು ಹಾಕಿಕೊಂಡು ಊಟ ಮಾಡದಿದ್ದರೆ ಸಮಾಧಾನ ಇರುವುದಿಲ್ಲ. ಕೆಲವು ಪದಾರ್ಥಗಳನ್ನು ಮೊಸರಿನೊಂದಿಗೆ ಸೇರಿಸುವುದರಿಂದ ಮೊಸರು ಕೆಡುತ್ತದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ.

ಮೊಸರಿನೊಂದಿಗೆ ಈರುಳ್ಳಿ ತಿನ್ನುವ ಹವ್ಯಾಸನ್ನು ಎಷ್ಟೋ ಜನರು ಬೆಳೆಸಿಕೊಂಡಿರುತ್ತಾರೆ. ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕರ. ಆಯುರ್ವೇದ ಶಾಸ್ತ್ರದ ಪ್ರಕಾರ ಮೊಸರಿನಲ್ಲಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಈರುಳ್ಳಿಯ ಗುಣ ಉಷ್ಣ. ಹೀಗಾಗಿ ಇವೆರಡನ್ನು ಸೇರಿಸಿ ತಿನ್ನುವುದರಿಂದ ಆರೋಗ್ಯ ಬೇಗ ಕೆಡುತ್ತದೆ.

ಈರುಳ್ಳಿ ಹಾಗೂ ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ಅಲರ್ಜಿ, ದದ್ದು, ಎಸ್ಜಿಮಾ, ಸೋರಿಯಾಸಿಸ್, ಗ್ಯಾಸ್, ವಾಂತಿ ಸಹ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈರುಳ್ಳಿಯೊಂದಿಗೆ ಮೊಸರನ್ನು ಸೇವಿಸುವ ಹವ್ಯಾಸ ಬೆಳೆಸಿಕೊಂಡರೆ ನೀವು ಆದಷ್ಟು ಬೇಗ ಅದನ್ನು ಬಿಟ್ಟುಬಿಡುವುದು ನಿಮ್ಮ ಆರೋಗ್ಯ ದೃಷ್ಟಿಯಿಂದ ಒಳಿತು.

ಇನ್ನು ಮೊಸರಿನೊಟ್ಟಿಗೆ ಹಾಲನ್ನು ಸೇವಿಸಬಾರದು. ಮೊಸರು ತಯಾರಾಗುವುದು ಹಾಲಿನಿಂದಲೇ. ಆದರೆ ಹಾಲು ಹಾಗೂ ಮೊಸರನ್ನು ಒಟ್ಟಿಗೆ ಸೇವಿಸಬಾರದು ಎಂದು ಆರೋಗ್ಯ ಶಾಸ್ತ್ರ ಹೇಳುತ್ತದೆ. ಹಾಲು ಹಾಗೂ ಮೊಸರನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ, ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇನ್ನು ಹಣ್ಣಿನ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣನ್ನು ತಿಂದ ತಕ್ಷಣ ಮೊಸರನ್ನು ಸೇವಿಸಬಾರದು. ಹೀಗೆ ಸೇವನೆ ಮಾಡಿದಲ್ಲಿ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ.

Leave A Reply

Your email address will not be published.