ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ನ ಹುಂಡಿಯಲ್ಲಿ ಸಂಗ್ರಹವಾಗಿದೆ ನೋಡಿ ಎಷ್ಟು ಹಣ! ಅಬ್ಬಾ ನಿಜಕ್ಕೂ ಇದು ಮಾದಪ್ಪನ ಆಶೀರ್ವಾದವೇ ಸರಿ!

ಸಂಕಟ ಬಂದಾಗ ವೆಂಕಟರಮಣ ಅಂತ ದೇವರ ಮೊರೆ ಹೋಗ್ತೇವೆ ಆದರೆ ಕೆಲವರು ದೇವರಿಂದ ಯಾವುದೇ ನಿರೀಕ್ಷೆಯು ಇಲ್ಲದೆ ಬಹಳ ಭಕ್ತಿ ಹಾಗೂ ಶ್ರದ್ಧೆಯಿಂದ ದೇವರನ್ನು ಪೂಜಿಸುತ್ತಾರೆ. ಇನ್ನು ದೇವರಿಗೆ ನಮ್ಮ ಸಂಕಷ್ಟಗಳು ದೂರವಾಗಲಿ ಅಂತ ಹರಕೆ ಹೊತ್ತುಕೊಳ್ಳುವುದು ಸಹಜ ಪ್ರತಿಯೊಂದು ಕಷ್ಟಗಳಿಗೂ ಪರಿಹಾರಾರ್ಥವಾಗಿ ದೇವರ ಮೊರೆ ಹೋಗುವುದು ಮಾತ್ರವಲ್ಲದೆ ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಕಟ್ಟಿಕೊಳ್ಳಲಾಗುತ್ತೆ.

ಇನ್ನು ಒಂದೊಂದು ಪುಣ್ಯ ಸ್ಥಳದ ಮಹಿಮೆ ಒಂದೊಂದು ರೀತಿ ಹಾಗಾಗಿ ಆಯಾ ಸ್ಥಳದ ಭಕ್ತಾದಿಗಳು ದೇವರಿಗೆ ಅಲ್ಲಿಯ ಪದ್ಧತಿಯಂತೆ ಹರಕೆ ಹೋರುತ್ತಾರೆ. ಇನ್ನೂ ಕೆಲವು ದೇವರ ಮಹಿಮೆ ಎಲ್ಲಿವರೆಗೂ ಹಬ್ಬಿರುತ್ತೆ ಅಂದ್ರೆ ದೇಶವಿದೇಶಗಳಿಂದಲೂ ಕೂಡ ದರ್ಶನಕ್ಕಾಗಿ ಜನ ಬರುತ್ತಾರೆ. ಹೀಗೆ ಬಹಳ ಪ್ರಖ್ಯಾತಿಯನ್ನು ಪಡೆದಿರುವ ದೇವಾಲಯ ಅಂದ್ರೆ ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪ. ಮಾದಪ್ಪನಿಗೆ ಉಘೇ ಉಘೇ ಅಂತ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಸಹಸ್ರಾರು. ಅದರಲ್ಲೂ ಇಲ್ಲಿ ಅಮಾವಾಸ್ಯೆ, ಸೋಮವಾರ, ಶುಕ್ರವಾರ ಹೀಗೆ ಕೆಲವು ಪ್ರಮುಖ ದಿನಗಳಂದು ಮಹದೇಶ್ವರನಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಆ ಸಮಯದಲ್ಲಿ ಇಲ್ಲಿಗೆ ಬರುವ ಸಂಖ್ಯೆ ಅಪಾರ.

ಮಹದೇಶ್ವರನ ಬೆಟ್ಟ ಹತ್ತಿ ಬಂದು ಮಾದಪ್ಪನನ್ನು ಜನ ತಮ್ಮ ಸಂಕಷ್ಟಗಳಿಂದ ದೂರ ಮಾಡುವಂತೆ ಬೇಡಿಕೊಳ್ಳುತ್ತಾರೆ ಜನರ ಸಂಕಷ್ಟ ನಿವಾರಣೆಗಾಗಿಯೇ ಇಲ್ಲಿಗೆ ಬಂದು ತಳ ಊರಿರುವ ಆ ಶಿವಪ್ಪ ತನ್ನನ್ನ ನಂಬಿ ಬಂದವರ ಕೈಬಿಡುವುದಿಲ್ಲ. ಇನ್ನು ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಜುಲೈ ತಿಂಗಳಿನಲ್ಲಿ ಬಹಳ ವಿಶೇಷವಾದ ಪೂಜೆ ಪುನಸ್ಕಾರಗಳನ್ನ ಮಾಡಲಾಗುತ್ತೆ.

ಹೌದು, ಜುಲೈ ತಿಂಗಳಿನಲ್ಲಿ ಮಹದೇಶ್ವರ ಬೆಟ್ಟದ ಮಾದಪ್ಪನನ್ನು ನೋಡಲು ಎರಡು ಕಣ್ಣುಗಳು ಸಾಲದು ಅಷ್ಟು ಅದ್ಭುತವಾಗಿ ಅಲಂಕಾರ ಮಾಡಿ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಲಾಗುತ್ತದೆ. ಈ ಸಂಭ್ರಮವನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇನ್ನು ಹೀಗೆ ಗುಡಿಗೆ ಬಂದವರು ದೇವರ ಹುಂಡಿಗೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸಿ ಹೋಗುವುದು ವಾಡಿಕೆ. ಅದರಲ್ಲೂ ತಮ್ಮ ಯಾವುದಾದರೂ ಬೇಡಿಕೆ ಈಡೇರಿದೆ ಎಂದರೆ ತುಸು ಹೆಚ್ಚಾಗಿಯೇ ಹುಂಡಿಗೆ ಹಣವನ್ನ ಹಾಕುತ್ತಾರೆ. ಇದೀಗ ಮಹದೇಶ್ವರನ ಬೆಟ್ಟದ ಮಾದಪ್ಪನ ಗುಂಡಿಯಲ್ಲಿ ಸಂಗ್ರಹವಾಗಿರುವ ಹಣ ಎಷ್ಟು ಗೊತ್ತಾ?

ಇತ್ತೀಚಿಗೆ ಮಾದಪ್ಪನ ಗುಂಡಿಗೆ ಬಂದು ಸಲ್ಲಿರುವ ಹುಂಡಿಯ ಹಣ ಎಷ್ಟು ಎಂಬುದನ್ನು ಎಣಿಕೆ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು ಒಂದು ಕೋಟಿ 35 ಸಾವಿರಕ್ಕೂ ಹೆಚ್ಚು ರೂಪಾಯಿ ಹಣವನ್ನು ಭಕ್ತಾದಿಗಳು ದೇವರ ಗುಂಡಿಗೆ ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಇನ್ನು ಹಣದ ಜೊತೆಗೆ ಈ ಹುಂಡಿಯಲ್ಲಿ 36 ಗ್ರಾಂ ಚಿನ್ನ ಹಾಗೂ 485 ಗ್ರಾಂ ಬೆಳ್ಳಿ ವಸ್ತುಗಳು ಕೂಡ ಲಭಿಸಿವೆ. ದೇವರು ದೊಡ್ಡವನು ಆತನಿಗೆ ಹುಂಡಿಗೆ ಹಣ ಹಾಕಿ ಮೆಚ್ಚಿಸಬೇಕಾದ ಅಗತ್ಯವಿಲ್ಲ ಆದರೆ ನಾವು ಆತನಿಂದ ಒಳ್ಳೆಯದನ್ನು ಪಡೆದುಕೊಂಡಿದ್ದರೆ ನಮ್ಮ ಕೈಲಾದಷ್ಟು ಹಣವನ್ನ ಕಾಣಿಕೆಯಾಗಿ ನೀಡಿದ್ರೆ ಅದು ಇತರರಿಗೆ ಸಹಾಯವಾಗಬಹುದು ಎನ್ನುವ ನಂಬಿಕೆಯಲ್ಲಿ ಜನರು ಈ ಪದ್ಧತಿಯನ್ನು ಮಾಡುತ್ತಾರೆ. ನೀವು ಮಹದೇಶ್ವರ ಬೆಟ್ಟದ ಮಾದಪ್ಪನ ಭಕ್ತರಾಗಿದ್ದರೆ ಮಾದಪ್ಪನಿಗೆ ಒಂದು ಉಘೇ ಉಘೇ ಎನ್ನಿ.

Leave A Reply

Your email address will not be published.