ಆರೋಗ್ಯವಾಗಿರಲು ರಾತ್ರಿ ಹೊತ್ತು ಅನ್ನ ಬಿಟ್ಟು ಚಪಾತಿ ತಿನ್ನುತ್ತಿದ್ದೀರಾ?? ಹಾಗಾದರೆ ತಪ್ಪದೇ ನೀವು ಈ ವಿಚಾರವನ್ನು ತಿಳಿದಿರಲೇಬೇಕು!

ಮನುಷ್ಯನ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ನಮ್ಮ ಜೀವನ ಶೈಲಿಯಲ್ಲಿನ ಈ ರೀತಿ ಬದಲಾವಣೆಗಳು ಹಾಗೂ ಆಹಾರದಲ್ಲಿನ ವ್ಯತ್ಯಾಸಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ದುತ್ತವೆ. ಅದರಲ್ಲೂ ಇತ್ತೀಚಿಗೆ ಎಲ್ಲರನ್ನೂ ಕಾಡುತ್ತಿರುವ ಮುಖ್ಯ ಸಮಸ್ಯೆ ಅಂದ್ರೆ ಬೊಜ್ಜು ಅಥವಾ ಸ್ಥೂಲಕಾಯ!

ಸರಿಯಾದ ಆಹಾರ ಕ್ರಮ ಪಾಲಿಸದೇ ಇರುವುದು ಹಾಗೆಯೇ ಸರಿಯಾದ ವ್ಯಯಾಮ, ವಾಕ್. ಜಾಗಿಂಗ್ ಮೊದಲಾದವುಗಳನ್ನು ಮಾಡದೇ ಇರುವುದು ದೇಹದ ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ. ಆದರೆ ಇತ್ತಿಚಿಗೆ ಸಾಕಷ್ಟು ಜನರು ತಮ್ಮ ದೇಹದ ಆರೋಗ್ಯದ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ಡಯಟ್ ಹಾಗೂ ವರ್ಕೌಟ್ ಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ತೂಕ ಕಳೆದುಕೊಳ್ಳಲು ಸಾಕಷ್ಟು ಜನ ರಾತ್ರಿ ಊಟ ಬಿಡುತ್ತಾರೆ! ಊಟದ ಬದಲು ಚಪಾತಿ ಅಥವಾ ಇತರ ಆಹಾರಗಳನ್ನು ಸೇವಿಸುತ್ತಾರೆ. ಆದರೆ ಗೋಧಿ ಚಪಾತಿ ಇಷ್ಟಪಡುವವರೇ ಹೆಚ್ಚು. ಹೀಗೆ ದಿನವೂ ಚಪಾತಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ! ಬನ್ನಿ ನೋಡೋಣ!

ಚಪಾತಿಯನ್ನು ಗೋಧಿಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಬಿ, ಇ, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಅನ್ನ ತಿನ್ನುವುದರಿಂದ ಹೇಗೆ ಶಕ್ತಿ ಸಿಗುತ್ತದೆಯೋ, ಹಾಗೆ ಚಪಾತಿ ಕೂದ ಎನರ್ಜಿ ಕೊಡುತ್ತದೆ. ಇನ್ನು ಚಪಾತಿ ತಿಂದರೆ ಜೀರ್ಣವಾಗುವುದು ಬೇಗ. ನೀರು ರಾತ್ರಿ ಮೂರು ಚಪಾತಿ ತಿಂದರು ಅದು ಇತರ ಆಹಾರಗಳಿಗಿಂತ ಕಡಿಮೆ ಪ್ರಮಾಣವೇ ಆಗಿರುತ್ತದೆ. ಇನ್ನು ಅನ್ನಕ್ಕಿಂತ ಕಡಿಮೆ ಕ್ಯಾಲೋರಿ ಹೊಂದಿರುವ ಗೋಧಿ ಹಿಟ್ತಿನ ಚಪಾತಿ ಎಣ್ಣೆ ಬಳಸದೇ ಸಿದ್ಧಪಡಿಸಿಕೊಂಡು ತಿನ್ನುವುದು ಇನ್ನೂ ಒಳ್ಳೆಯದು. ಹಾಗಾಗಿ ಚಪಾತಿ ಸೇವನೆ ಬೇಗನೆ ತೂಕವನ್ನು ಕಳೆದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ!

ಇನ್ನು ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಆಹಾರವನ್ನು ಬಹಳ ತಡವಾಗಿ ಸೇವಿಸಬಾರದು. ನೀವು ಚಪಾತಿ ಸೇವಿಸುತ್ತಿದ್ದರೆ ರಾತ್ರಿ 7 ಗಂಟೆಗೇ ತಿನ್ನಬೇಕು. ಮಲಗುವ ಸಮಯದಲ್ಲಿ ಆಹಾರ ಸೇವಿಸಿದರೆ ಅದು ಜೀರ್ಣವಾಗುವುದು ನಿಧಾನ. ಇನ್ನು ಚಪಾತಿ ತ್ವಚೆಗೆ ಹಾಗೂ ಕೂದಲಿಗೂ ಒಳ್ಳೆಯದು. ರಕ್ತ ಹೀನತೆಯ ಸಮಸ್ಯೆಯನ್ನೂ ಕೂಡ ನಿವಾರಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಲುವುದು ಮಾತ್ರವಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೂ ಹೌದು. ಒಟ್ತಿನಲ್ಲಿ ಆರೊಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಹಾರ ಕ್ರಮ ಸರಿಯಾಗಿರುವುದು ಬಹಳ ಮುಖ್ಯ. ಅದರಲ್ಲೂ ನೀವು ರಾತ್ರಿ ಚಪಾತಿ ತಿನ್ನುವ ಅಭ್ಯಾಸ ಮಾಡುಕೊಂಡಿದ್ದರೆ ಅದು ಇನ್ನೂ ಉತ್ತಮ!

Leave A Reply

Your email address will not be published.