ಅಪ್ಪು ಬಿಟ್ಟರೆ ನನಗಿರುವುದು ಒಬ್ಬನೇ ತಮ್ಮ, ಶಿವಣ್ಣ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಆ ಖ್ಯಾತ ನಟ ಯಾರು ಗೊತ್ತೇ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪು ನಮ್ಮೊಂದಿಗೆ ಸದಾ ಶಾಶ್ವತವಾಗಿ ಇರುತ್ತೆ. ಅಷ್ಟೇ ಅಲ್ಲ ಪುನೀತ್ ರಾಜಕುಮಾರ್ ಅವರ ಕುಟುಂಬದವರಾಗಲಿ ಅಥವಾ ಅವರ ಅಭಿಮಾನಿಗಳಾಗಲಿ ಅವರು ಮಾಡಿದ ಕೆಲಸಗಳನ್ನು ಯಾರು ಮರೆತಿಲ್ಲ, ಮಾತ್ರವಲ್ಲ ಪುನೀತ್ ರಾಜಕುಮಾರ್ ಅವರು ನಡೆದ ದಾರಿಯಲ್ಲಿಯೇ ಅವರ ಅಭಿಮಾನಿಗಳು ಇಂದು ನಡೆಯುತ್ತಿದ್ದಾರೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಪ್ಪು ನಿ-ಧನದ ನಂತರ ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗಿತ್ತು. ಈ ಚಿತ್ರ ಅಪ್ಪು ಇರುವಾಗ ಸಂಪೂರ್ಣವಾಗಿ ಇರಲಿಲ್ಲ ಹಾಗಾಗಿ ಅಪ್ಪು ಚಿತ್ರಕ್ಕೆ ಶಿವಣ್ಣ ಅವರು ವಾಯ್ಸ್ ನೀಡಿದ್ರು. ಆದರೂ ಈ ಸಿನೆಮಾ ಗೆದ್ದಿತ್ತು. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ದೇಶದ ಮೂಲೆ ಮೂಲೆಯಲ್ಲಿಯೂ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಗ್ರ್ಯಾಂಡ್ ಸಕ್ಸಸ್ ಕಂಡಿದೆ.

ಪುನೀತ್ ರಾಜಕುಮಾರ್ ಒಬ್ಬ ನಟ ಮಾತ್ರವಲ್ಲ ಉತ್ತಮ ಡ್ಯಾನ್ಸರ್ ಹಾಗೆಯೇ ಉತ್ತಮ ವ್ಯಕ್ತಿತ್ವವನ್ನು ಕೂಡ ಹೊಂದಿದ್ದವರು. ಹಾಗಾಗಿ ಅವರು ಇತರರಿಗೆ ನಿದರ್ಶನವೂ ಕೂಡ ಹೌದು. ಇಂದು ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಯಾವುದೇ ಕಾರ್ಯಕ್ರಮವಾದರೂ ಹಬ್ಬವನ್ನು ನೆನೆಸಿಕೊಳ್ಳದೆ ಇರುವುದಿಲ್ಲ. ಅಪ್ಪು ಎಲ್ಲರನ್ನ ಬಹಳ ಪ್ರೀತಿಯಿಂದ ನೋಡುತ್ತಿದ್ದರು ಅವರಿಗೆ ಮೇಲೆ ಕೇಳು ಎನ್ನುವ ಭೇದ ಭಾವವೇ ಇರಲಿಲ್ಲ ಅಭಿಮಾನಿಗಳನ್ನ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಅಪ್ಪು ತೀರಿಕೊಂಡ ನಂತರ ಅವರ ಬಗ್ಗೆ ಶಿವಣ್ಣ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದಾರೆ ತನ್ನ ತಮ್ಮನನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ.

ಇನ್ನು ಶಿವಣ್ಣ ಅಪ್ಪು ವಿನಂತಿಯೇ ಈತನು ಕೂಡ ನನಗೆ ತಮ್ಮ ಅಂತ ಒಬ್ಬ ಖ್ಯಾತ ನಟನ ಹೆಸರನ್ನ ಹೇಳಿದ್ದಾರೆ. ಹೌದು ಶಿವಣ್ಣ ಅವರ ಬಾಯಲ್ಲಿ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೂ ಪುಣ್ಯ ಬೇಕು. ಯಾಕಂದ್ರೆ ತನ್ನ ಸ್ವಂತ ತಮ್ಮನ ಹಾಗೆ ಅಂತ ಇನ್ನೊಬ್ಬರಿಗೆ ಆ ಪಟ್ಟವನ ಕೊಡೋದಕ್ಕೆ ನಿಜವಾಗಿಯೂ ಆ ವ್ಯಕ್ತಿಯು ಕೂಡ ಹಾಗೆ ಇರಬೇಕು ಅಂತಹ ವ್ಯಕ್ತಿ ಅಂದ್ರೆ ಅದು ಚಿಕ್ಕಣ್ಣ. ಹೌದು ಶಿವಣ್ಣ ಅವರು ಜೇಮ್ಸ್ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡುತ್ತಾ ಈ ಮಾತನ್ನು ಹೇಳಿದರು. ರಾಜಕುಮಾರ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಅಪ್ಪು ಇಬ್ಬರನ್ನ ನೋಡಿದಾಗ ನಿಜಕ್ಕೂ ಸಂತೋಷವೂ ಆಗುತ್ತೆ ಬೇಸರವಾಗುತ್ತದೆ ಚಿಕ್ಕಣ್ಣ ನನಗೆ ಅಪ್ಪುವಿನ ಹಾಗೆ ಒಬ್ಬ ತಮ್ಮ ಅಂತ ವೇದಿಕೆಯ ಮೇಲೆ ಹೇಳಿದ್ದಾರೆ. ಈ ಕ್ಷಣ ಚಿಕ್ಕಣ್ಣ ಅವರ ಪಾಲಿಗೆ ನಿಜಕ್ಕೂ ಸುಮಧುರವಾಗಿತ್ತು. ಸ್ನೇಹಿತರ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ನೀವು ಇಷ್ಟಪಡುವವರಾಗಿದ್ದರೆ ಖಂಡಿತ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.