ಒಂದು ಕಡೆ ಕ್ರಿಕೆಟ್ ಜಗತ್ತಿನ ದೇವರು ಮತ್ತೊಂದು ಕಡೆ ಕ್ರಿಕೆಟ್ ನ ಕಿಂಗ್, ಇವರಿಬ್ಬರಲ್ಲಿ ಬೆಸ್ಟ್ ಯಾರು ಗೊತ್ತೇ?? ಕೊಹ್ಲಿ -ಸಚಿನ್ ನಡುವೆ ಯಾರಿಗೆ ಫುಲ್ ಮಾರ್ಕ್ಸ್!

ಯಾವ ಸಿನಿಮಾ ತಾರೆಯರಿಗೂ ಕಡಿಮೆ ಇಲ್ಲ ಕ್ರಿಕೆಟಿಗರು. ಅದರಲ್ಲೂ ಲಿಟಲ್ ಮಾಸ್ಟರ್ ಸಚಿನ್, ಕಿಂಗ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿ ಇವರುಗಳಿಗೆ ತುಸು ಹೆಚ್ಚಾಗಿಯೇ ಫ್ಯಾನ್ಸ್ ಇದ್ದಾರೆ. ಕ್ರಿಕೇಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಸದ್ಯ ನಿರ್ವತ್ತ ಜೀವನವನ್ನ ಅನುಭವಿಸುತ್ತಿದ್ದಾರೆ. ಕ್ರಿಕೆಟ್ ಆಡುವುದನ್ನು ಬಿಟ್ಟ ಲಿಟಲ್ ಮಾಸ್ಟರ್ ಕೋಚಿಂಗ್ ಕೊಡುವುದರಲ್ಲಿ ನಿರತರಾಗಿದ್ದಾರೆ.

ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಗೆ ಸರಿಸಾಟಿಯಾದವರು ಯಾರು ಇಲ್ಲ ಎನ್ನುವುದು ಅಭಿಮಾನಿಗಳು ನಂಬಿಕೊಂಡು ಬಂದ ಸತ್ಯ. ಅದರಲ್ಲೂ ಟೀಮ್ ಇಂಡಿಯಾದಲ್ಲಂತೂ ಸಚಿನ್ ಅವರೇ ಮೊದಲು ಅವರೇ ಕೊನೆ ಎಂದೇ ಭಾವಿಸಲಾಗುತ್ತದೆ. ಆದರೆ ಸಚಿನ್ ನಲ್ಲಿ ಇರುವ ಎಲ್ಲಾ ಕ್ವಾಲಿಟಿ ತನ್ನಲ್ಲಿ ಇದೆ ಎಂದು ತೋರಿಸಿದ್ದೇ ವಿರಾಟ್ ಕೊಹ್ಲಿ. ಸಚಿನ್ ಗೆ ಉತ್ತರಾಧಿಕಾರಿಯಾಗಿ ಎದುರು ನಿಂತವರೇ ವಿರಾಟ್ ಕೊಹ್ಲಿ! ಇನ್ನು ಸಚಿನ್ ಹಾಗೂ ಕೊಹ್ಲಿ ಇಬ್ಬರ ಸಡುವೆ ಇರುವ ಸಾಮತ್ಯೆಯನ್ನು ಅವರ ಅಭಿಮಾನಿಗಳು ಕಲೆ ಹಾಕಿದ್ದಾರೆ!

ಟೀಮ್ ಇಂಡಿಯಾದಲ್ಲಿ ಸಚಿನ್ ಪರ್ವ ಆರಂಭವಾಗಿ ಹದಿನಾಲ್ಕು ವರ್ಷಗಳಲ್ಲಿ ಅವರು ಮಾಡಿರುವ ಸಾಧನೆಯೂ ಅಪಾರ. ಈವರೆಗೆ 284 ಇನ್ನಿಂಗ್ಸ್ ಆಡಿರುವ ಸಚಿನ್ 21522 ರನ್ ಗಳಿಸಿದ್ದಾರೆ. ಅವುಗಳಲ್ಲಿ ನೂರು ಅರ್ಧ ಶತಕ 67 ಶತಕ ಹಾಗೂ ಏಳು ದ್ವಿಶತಕ. ಇನ್ನು ಕೊಹ್ಲಿ ಆಟದ ಬಗ್ಗೆ ನೋಡುವುದಾದರೆ, ಈವರೆಗೆ 463 ಇನ್ನಿಂಗ್ಸ್ ಗಳಲ್ಲಿ 23726 ರನ್ ಗಳಿಸಿದ್ದಾರೆ. ಅವುಗಳಲ್ಲಿ ನೂರಾಇಪ್ಪತ್ತೆರಡು ಅರ್ಧ ಶತಕವಾದ್ರೆ 70 ಶತಕ ಹಾಗೂ 7 ದ್ವಿಶತಕಗಳು. ಇಲ್ಲಿ ಸಚಿನ್ ಹಾಗೂ ಕೊಹ್ಲಿಯನ್ನ ತುಲನೆ ಮಾಡುವುದಾದರೆ ಸಚಿನ್ ಗಿಂತ 21 ಇನ್ನಿಂಗ್ಸ್ ಕಡಿಮೆ ಆಡಿರುವ ಕೊಹ್ಲಿ 2204 ರನ್ ಹೆಚ್ಚು ಗಳಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೇ 22 ಅರ್ಧಶತಕ, ಮೂರು ಶತಕಗಳನ್ನು ಬಾರಿಸ್ ರೇಸ್ ನಲ್ಲಿ ಮುಂದಿದ್ದಾರೆ. ಇಬ್ಬರ ದ್ವಿಶತಕದ ಕೌಂಟಿಂಗ್ ಒಂದೇ ತೆರನಾಗಿದೆ.

ಕಳೆದ ಮೂರು ವರ್ಷಗಳಿಂದ ಕೊಹ್ಲಿ ಕೊಡುಗೆ ಸ್ವಲ್ಪ ಕಡಿಮೆ ಎನ್ನಬಹುದು. ಮೊದಲಿನಂತೆಯೇ ಕೊಯ್ಲಿ ಆಟವಾಡುತ್ತಿದ್ದರೆ, ಬಹುಶಃ ಸಚಿನ್ ಅವರ ಅಂಕಿಅಂಶಗಳನ್ನ ಹಿಂದಿಕ್ಕುತ್ತಿದ್ದರೋ ಏನೋ! ಇನ್ನು ಸಚಿನ್ ತಮ್ಮ ವೃತ್ತಿ ಬದುಕಿನಲ್ಲಿ ಆಡಿದ್ದು ಕೇವಲ ಒಂದು ಟೀ 20 ಮಾತ್ರ. ಅವರ ಸಮಯದಲ್ಲಿ ಆಧುನಿಕ ಆಟಗಳ ನಿಯಮಗಳ ಪರಿಚಯವೇ ಆಗಿರಲಿಲ್ಲ. ಅಂಪೈರ್ ಗಳ ತೀರ್ಮಾನವೇ ಅಂತಿಮವಾಗಿರುತ್ತಿತ್ತು ಅಲ್ಲದೇ ಬೌಲರ್ ಗಳ ಪರವಾಗಿಯೇ ಅಂಪೈರ್ ಗಳ ತೀರ್ಮಾನವೂ ಇರುತ್ತಿತ್ತು. ಆದರೆ ಟಿ 20  ಬಂದ ಮೇಲೆ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಗಳೂ ಅಗಿವೆ!

ಹಾಗಾದರೆ ಇವರಿಬ್ಬರಲ್ಲಿ ಉತ್ತಮ ಆಟಗಾರ ಯಾರು? ಖಂಡಿತವಾಗಿ ಈ ಪ್ರಶ್ನೆಗೆ ಉತ್ತರವೇ ಇಲ್ಲ! ಕ್ರಿಕೆಟ್ ಲೋಕ ಕಂಡ ದಿಗ್ಗಜ ನಟರಾದ ಸಚಿನ್ ಹಾಗೂ ಕೊಹ್ಲಿ ಇಬ್ಬರೂ ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಆಡಿದ್ದಾರೆ. ಹಲವು ಕ್ರಿಕೆಟಿಗರಿಗೆ ಸ್ಪೂರ್ತಿಯೂ ಆಗಿದ್ದಾರೆ. ಹಾಗಾಗಿ ಈ ಇಬ್ಬರು ಅದ್ಭುತ ಆಟಗಾರರು ಅಷ್ಟೇ! ಇವರ ನಡುವೆ ಹೊಲಿಕೆ ಮಾಡುವುದು ತಪ್ಪು ಏನಂತೀರಿ!

Leave A Reply

Your email address will not be published.