ಚೈತನ್ಯ ಕಳೆದುಕೊಂಡ ಸೂಪರ್ ಸ್ಟಾರ್ ವಂಶದ ಕುಡಿ!  ಸತತ ಸೋಲಿನ ನಂತರ ಸ್ಟಾರ್ ನಟನ ಮುಂದಿನ ಹೆಜ್ಜೆಯೇನು?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತೆಲುಗು ಸಿನೆಮಾರಂಗಕ್ಕೆ ಪ್ರಮುಖ ಸ್ಥಾನವಿದೆ. ಮೊದಲಿನಿಂದಲೂ ತೆಲುಗು ಸಿನೆಮಾ ರಂಗ ಅದ್ಧೂರಿ ಚಿತ್ರಗಳನ್ನು ನಿರ್ಮಾಣ ಮಾಡುತ್ತ ಬರಲಾಗಿದೆ. ಅಲ್ಲಿಯ ಜನರು ಅಷ್ಟೆ. ತಮ್ಮ ನೆಚ್ಚಿನ ನಟನನ್ನು ದೇವರಂತೆ ಆರಾಧಿಸುತ್ತಾರೆ. ತೆಲುಗು ಸಿನೆಮಾ ರಂಗ ಆರಂಭವಾದಗಿನಿಂದಲೂ ೨-೩ ಮನೆತನಗಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿವೆ. ಅದರಲ್ಲಿ ಅಕ್ಕಿನೇನಿ ಕುಟುಂಬವೂ ಒಂದು. ಈಗ ಅಕ್ಕಿನೇನಿ ಕುಟುಂಬದ ಮೂರನೇ ತಲೆಮಾರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಅಕ್ಕಿನೇನಿ ನಾಗೇಶ್ವರ ರಾವ್ ತರುವಾತ ಅವರ ಮಗ ಅಕ್ಕಿನೇನಿ ನಾರ್ಗಾರ್ಜುನ ಸಿನೆಮಾ ರಂಗ ಪ್ರವೇಶ ಮಾಡಿ ಸಿನೆಮಾ ರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದರು. ಈಗ ಅವರ ಇಬ್ಬರು ಪುತ್ರರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲಿ ಅಕ್ಕಿನೇನಿ ನಾಗಚೈತನ್ಯ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೂ ಹುಟ್ಟಿಕೊಂಡಿದೆ. ಆದರೂ ಸತತ ಸೋಲು ಅವರನ್ನು ಕಂಗೆಡಿಸಿದೆ.

ಹೌದು.. ಅಕ್ಕಿನೇನಿ ನಾಗಚೈತನ್ಯ ಅಕ್ಕಿನೇನಿ ಕುಟುಂಬದ ಮೂರನೇ ತಲೆಮಾರು. ಇವರು ೨೩ ನವೆಂಬರ್ ೧೦೮೬ರಲ್ಲಿ ಹೈದ್ರಾಬಾದ್ನಲ್ಲಿ ಜನಿಸಿದರು. ಇವರು ಅಕ್ಕಿನೇನಿ ನಾಗಾರ್ಜುನ ಹಾಗೂ ಲಕ್ಷ್ಮಿ ದಗ್ಗುಬಾಟಿ ಅವರ ಹಿರಿಯ ಪುತ್ರ. ಇವರು ಸಹ ತಮ್ಮ ವಿದ್ಯಾಭ್ಯಾಸದ ನಂತರ ಸಿನೆಮಾರಂಗದ ಕಡೆ ಮುಖ ಮಾಡಿದರು. ಇವರು ೨೦೦೯ರಲ್ಲಿ ಜೋಶ್ ಸಿನೆಮಾ ಮೂಲಕ ತೆಲುಗು ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನೆಮಾ ಹೇಳಿಕೊಳ್ಳುವಷ್ಟು ಹಿಟ್ ಆಗದೇ ಇದ್ದರೂ ಇವರ ಅಭಿನಯಕ್ಕೆ ಜನರು ಫಿದಾ ಆಗಿದ್ದರು. ಇದಾದ ಬಳಿಕ ಗೌತಮ್ ವಾಸುದೇವ ಮೆನನ್ ನಿರ್ದೇಶನದ ಯೇ ಮಾಯ ಚೇಸಾವೆ ಸಿನೆಮಾದಲ್ಲಿ ಅಭಿನಯಿಸಿದರು. ಈ ಸಿನೆಮಾದಲ್ಲಿ ನಾಯಕಿಯಾಗಿ ಸಮಂತಾ ಅವರು ಅಭಿನಯಿಸಿದ್ದರು. ಈ ಸಿನೆಮಾ ಸೂಪರ್ ಡೂಪರ್ ಹಿಟ್ ಆಯಿತು. ಸಮಂತಾ- ನಾಗಚೈತನ್ಯ ಅವರ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದರು. ಈ ಸಿನೆಮಾ ನಂತರ ಅವರು ತೆಲುಗು ಸಿನೆಮಾ ರಂಗದ ಭರವಸೆಯ ನಟರಾದರು. ಇದಾದ ಬಳಿಕ ಹಲವು ಸಿನೆಮಾಗಳಲ್ಲಿ ನಾಗಚೈತನ್ಯ ಅವರು ಅಭಿನಯಿಸಿದ್ದಾರೆ.

ಸದ್ಯ ನಾಗಚೈತನ್ಯ ಅವರು ಅಭಿನಯಿಸಿದ ಎರಡು ಸಿನೆಮಾಗಳು ತೆರೆಕಂಡಿವೆ. ಒಂದು ಲಾಲ್ ಸಿಂಗ್ ಛೆಡ್ಡಾ, ಇನ್ನೊಂದು ಹಲೋ. ಈ ಎರಡು ಸಿನೆಮಾಗಳು ಹೇಳ ಹೆಸರಿಲ್ಲಂತೆ ಸೋಲುಂಡಿವೆ. ಇದರಿಂದ ನಾಗಚೈತನ್ಯ ಅವರು ಬಹಳ ಚಿಂತೆಗೆ ಒಳಗಾಗಿದ್ದಾರೆ ಎನ್ನುವ ಗುಸುಗುಸು ತೆಲುಗು ಸಿನೆಮಾ ರಂಗದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಹೆಸರುವಾಸಿಯಾಗಿರುವ ಅಮೀರ್ ಖಾನ್ ಅವರ ಜೊತೆ ನಾಗಚೈತನ್ಯ ಲಾಲ್ ಸಿಂಗ್ ಛೆಡ್ಡಾ ಸಿನೆಮಾದಲ್ಲಿ ಅಭಿನಯಿಸಿದ್ದರು. ಈ ಸಿನೆಮಾ ಮೇಲೆ ಆಕಾಶದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದು ನಾಗಚೈತನ್ಯ ಅವರು ಅಭಿನಯಿಸಿದ ಮೊದಲ ಬಾಲಿವುಡ್ ಸಿನೆಮಾ. ಅಲ್ಲದೆ ಅಮೀರ್ ಖಾನ್ ಅವರ ಜೊತೆ ಅಭಿನಯಿಸಿದ್ದರಿಂದ ಗ್ಯಾರೆಂಟಿ ಬ್ರೇಕ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಈ ಸಿನೆಮಾ ಹಾಕಿದ ಬಂಡವಾಳವನ್ನು ದುಡಿಯುವಲ್ಲೂ ವಿಫಲವಾಯಿತು. ಇದಕ್ಕೆ ಹಲವಾರು ಕಾರಣಗಳಿವೆ. ಇದರ ಜೊತೆ ತೆಲುಗಿನಲ್ಲಿ ಅಭಿನಯಿಸಿದ ಹಲೋ ಸಿನೆಮಾ ಸಹ ಪ್ಲಾಪ್ ಆಗಿದೆ. ಇದನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲೂ ಸಹ ಯಾರೂ ನೋಡಲು ಇಷ್ಟಪಡುತ್ತಿಲ್ಲ.

ಈ ಎಲ್ಲ ಕಾರಣಗಳಿಂದ ನಾಗಚೈತನ್ಯ ಅವರು ಬಹಳ ಚಿಂತೆಗೆ ಒಳಗಾಗಿದ್ದಾರೆ. ಇನ್ನು ಮುಂದೆ ವೃತ್ತಿ ಜೀವನದಲ್ಲಿ ಹೇಗೆ ಮುಂದುವರಿಯುವುದು, ಯಾವ ರೀತಿ ಸಿನೆಮಾ ಮಾಡಿದರೆ ಜನರು ಇಷ್ಟಪಡಬಹುದು ಎನ್ನುವ ಚಿಂತೆ ಅವರನ್ನು ಸಿಕ್ಕಾಪಟ್ಟೆ ಕಾಡುತ್ತಿದೆ ಎಂದು ತೆಲುಗು ಸಿನೆಮಾ ರಂಗದಲ್ಲಿ ಚರ್ಚೆ ಆಗುತ್ತಿದೆ.

Leave A Reply

Your email address will not be published.