ವರ್ಷಗಳಿಂದ ಅಪ್ಪು ಸ್ಮಾರಕದ ಬಳಿಯೇ ವ್ಯಾಪಾರ ಮಾಡುತ್ತಿರುವ ಈ ವ್ಯಕ್ತಿ ದಿನಕ್ಕೆ ದುಡಿಯುವ ಹಣ ಎಷ್ಟು ಗೊತ್ತಾ? ಇದೆಲ್ಲವೂ ಅಪ್ಪು ಅವರ ಕೃಪೆ ಎಂದ ವ್ಯಾಪಾರಿ!

ಪವರ್ ಸ್ಟಾರ್  ಪುನೀತ್ ರಾಜಕುಮಾರ್ ಕನ್ನಡಿಗರ ಮನಸ್ಸಿನಲ್ಲಿ ಅಜರಾಮರ. ಆನೆ ಇದ್ದರೂ ಸಾವಿರ ಸತ್ತರೂ ಸಾವಿರ ಅಂತಾರೆ, ಹಾಗೆಯೇ ನಮ್ಮ ಅಪ್ಪು ಕೂಡ. ಪುನೀತ್ ಅವರು ಬದುಕಿದ್ದಾಗ, ಬದುಕಿನುದ್ದಕ್ಕೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಈಗಲೂ ಅವರ ಹೆಸರು ಸ್ಮರಿಸಿಕೊಂಡು ದಿನಕಳೆಯುವ ಸಾಕಷ್ಟು ಜನರಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರ ವರೆಗೀಲ್ಲರನ್ನೂ ಬಹಳ ಪ್ರೀತಿಯಿಂದ ನೋಡುತ್ತಿದ್ದ ಅಪ್ಪು, ತಾವು ಸಹಾಯ ಮಾಡಿ ಒಮ್ಮೆಯೂ ಅದನ್ನ ಎಲ್ಲಿಯೂ ಹೇಳಿಕೊಂಡಿಲ್ಲ.

ಹೌದು, ಒಂದು ಒಂದು ಲೋಟ ಚಹಾ ಕುಡಿಸಿದರೂ ನಾನು ಕೊಡಿಸಿದ್ದೇ ಎಂದು ಹೇಳಿಕೊಳ್ಳುವ ಜನರ ಮಧ್ಯೆ ಪುನೀತ್ ಬಹಳ ವಿಭಿನ್ನವಾಗಿ ನಿಲ್ಲುವುದು ಇಂಥದ್ದೇ ಕಾರಣಕ್ಕೆ ಪುನೀತ್ ಒಬ್ಬ ಮಾನವತಾವಾದಿ. ತಮಮ್ ಮುಗುಳ್ನಗೆಯಿಂದಲೇ ಎದುರಿಗಿದ್ದವರ ನೋವನ್ನು ಮರೆಸುವ ತಾಕತ್ತು ಇದ್ದಂಥವರು. ಇಂದಿಗೂ ಹಲವರಿಗೆ ಮಾದರಿ ಆಗಿರುವ ಪುನೀತ್, ಇಂದು ಹಲವು ವ್ಯಾಪಾರಿಗಳಿಗೆ ವ್ಯಾಪಾರಕ್ಕೂ ಕೂಡ ದಾರಿಯಾಗಿದ್ಡಾರೆ. ಹೇಗೆ ಅಂತೀರಾ? ಮುಂದೆ ಓದಿ.

ಪುನೀತ್ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಳ್ಳದವರೇ ಇಲ್ಲ. ಅದೆಷ್ಟೋ ಜನರಿಗೆ ದೇವರಾಗಿರುವ ಪುನೀತ್ ಗಂಧದ ಗುಡಿ ಮೂಲಕ ಮತ್ತೆ ಜೀವಂತವಾಗಿ ಇಂದು ನಮ್ಮ ಕಣ್ಮುಂದೆ ಇದ್ದಾರೆ. ಪುನೀತ್ ಅವರ ಗಂಧದ ಗುಡಿ ರಿಲೀಸ್ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಪುನೀತ್ ಅವರ ಸಮಾಧಿಯ ಬಳಿ ಯಾಆಗಲೂ ಅವರ ಸಹಸ್ರಾರು ಅಭಿಮಾನಿಗಳು ಒಂದು ಹೋಗುತ್ತಾರೆ. ಅಪ್ಪು ನಮ್ಮನ್ನಗಲಿ ವರ್ಷವಾಗುತ್ತಾ ಬಂದರೂ ಅವರ ಸಮಾಧಿ ಬಳಿ ಅಭಿಮಾನಿಗಳು ಬರುವುದು ಮಾತ್ರ ಕಡಿಮೆ ಆಗಿಲ್ಲ. ಇನ್ನು ಇಲ್ಲಿಯೇ ಕೆಲವು ವ್ಯಾಪಾರಿಗಳು ಪುನೀತ್ ಅವರ ಮುಖವನ್ನೇ ಬಂಡವಾಳವಾಗಿಟ್ಟುಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ.

ಹೌದು ಸ್ನೆಹಿತರೆ, ಪುನೀತ್ ಅವರ ಫೋಟೊಗಳನ್ನು ಮೊಬೈಲ್ ಕವರ್ ಮೇಲ್ ಹಾಕಿಕೊಡುವ ಕೆಲಸವನ್ನು ಸಯ್ಯದ್ ಎನ್ನುವ ವ್ಯಾಪಾರಿ ಮಾಡುತ್ತಿದ್ಡಾರೆ. ಕಳೆದ ಒಂಂದು ವರ್ಷಗಳಿಂದಲೂ ಇವರು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಮೊಬೈಲ್ ಕವರ್ ಗಳಿಗೆ ಪುನೀತ್ ಅವರ ಫೋಟೋ ಹಾಕಿಕೊಡುವುದು, ವಾಹನಗಳಿಗೆ ಅಪ್ಪು ಪೋಟೋ ಅಂಟಿಸಿಕೊಡುವುದು, ಹೀಗೆ ಅಪ್ಪುವಿನ ಬೇರೆ ಬೇರೆ ಸಾಕಷ್ಟು ಫೋಟೋಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಪುನೀತ್ ಸಮಾಧಿಗೆ ಬರುವ ಅಭಿಮಾನಿಗಳು ಇವರ ಬಳಿ ಫೋಟೋಗಳನ್ನು ಹಾಕಿಸಿಕೊಳ್ಳುತ್ತಾರೆ. 50-100ರೂಪಾಯಿಗೆ ಪೋಟೋ ಹಾಕಿಕೊಡುತ್ತಾರೆ ಸಯ್ಯದ್. ಆದರೆ ದೂರದಿಂದ ಬಂದ ಅಭಿಮಾನಿಗಳು ಎಷ್ಟು ಕೊಡುತ್ತಾರೋ ಅಷ್ಟು ತೆಗೆದುಕೊಳ್ಳುತ್ತೇನೆ. ಕೆಲವರು 20 ರೂಪಾಯಿ ಕೊಡುತ್ತಾರೆ. ಇನ್ನೂ ಕೆಲವರು 50 ರೂಪಾಯಿ ಎಕ್ಸ್ಟ್ರಾ ಕೊಟ್ಟು ಹೋಗುತ್ತಾರೆ. ಒಟ್ಟಿನಲ್ಲಿ ದಿನಕ್ಕೆ 700-800ರೂ. ಸಂಪಾದನೆಯಾಗುತ್ತೆ ಎನ್ನುತ್ತಾರೆ ಸಯ್ಯದ್.

ಅಣ್ನಾವ್ರು ನಮಗೆ ಯಾವಾಗಲು ಮಾದರಿ. ಅವರು ಬದುಕಿದ್ದಾಗ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವರು ಇದ್ಡಾಗಲೂ ಇಲ್ಲದಿದ್ದಾಗಲೂ ಕೂಡ ನಮಗೆ ಅವರಿಂದ ಸಹಾಯವಾಗುತ್ತಿದೆ ಎನ್ನುವ ಸಯ್ಯದ್ ತಮ್ಮ ಇಡೀ ಸ್ಲಂನವರನ್ನೇಲ್ಲಾ ಕರೆದುಕೊಂಡು ಗಂಧದ ಗುಡಿ ಸಿನಿಮಾ ನೋಡಲು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡಿರುವುದು ವಿಶೇಷ!

Leave A Reply

Your email address will not be published.