Cricket News: ಐಪಿಎಲ್ ಆಡದೆ ಇದ್ರೂ ತೊಂದರೆ ಇಲ್ಲಪ್ಪ ಉಳಿದೆಲ್ಲ ಆಟದಲ್ಲಿ ನೀನಿರಬೇಕು; ಎಂ ಎಸ್ ಧೋನಿ ಒಪ್ಪುತ್ತಾರಾ ಬಿಸಿಸಿಐ ಅಮಂತ್ರಣವನ್ನು?!

Cricket News: ಟೀಮ್ ಇಂಡಿಯಾ (Team India) ಇತ್ತೀಚಿಗೆ ಕ್ರಿಕೆಟ್ ನಲ್ಲಿ ಎಡವುತ್ತಿದೆ. ಇತ್ತೀಚಿಗೆ ನಡೆದ ಟಿ 20ಯಲ್ಲಿ ಸೆಮಿ ಫೈನಲ್ (Semi Final)  ಹಂತಕ್ಕೆ ತಲುಪಿದ  ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತ್ತು. ಇದರಿಂದ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಬಹಳ ಆಘಾತವಾಯಿತು. ಓಪನಿಂಗ್ ಬ್ಯಾಟ್ಸ್ ಮ್ಯಾನ್ (Batsman) ನಿಂದ ಹಿಡಿದು ಬೆಸ್ಟ್ ಬೌಲರ್ (Bowler) ಎನಿಸಿಕೊಂಡು ಬರಕ್ಕೆ ಎಲ್ಲರೂ ಕಳಪೆ ಆಟ ಪ್ರದರ್ಶನ ಮಾಡಿದ್ದಾರೆ,  ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯೂ ಸುಳ್ಳಾಗಿದೆ. ಹೀಗಾಗಿ ಈಗ ತಂಡದಲ್ಲಿರುವ ಕೆಲವು ಆಟಗಾರರನ್ನು ಕೈಬಿಡಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ.

JYO 1 | Live Kannada News
Cricket News: ಐಪಿಎಲ್ ಆಡದೆ ಇದ್ರೂ ತೊಂದರೆ ಇಲ್ಲಪ್ಪ ಉಳಿದೆಲ್ಲ ಆಟದಲ್ಲಿ ನೀನಿರಬೇಕು; ಎಂ ಎಸ್ ಧೋನಿ ಒಪ್ಪುತ್ತಾರಾ ಬಿಸಿಸಿಐ ಅಮಂತ್ರಣವನ್ನು?! https://sihikahinews.com/2022/11/20/is-ms-dhoni-coming-to-team-india-as-coach/

ಹೌದು, ಓಪನಿಂಗ್ ಬ್ಯಾಟ್ಸ್ ಮ್ಯಾನ್ ಗಳಾಗಿದ್ದ ಕೆ ಎಲ್ ರಾಹುಲ್ (K L Rahul) ಹಾಗೂ ರೋಹಿತ್ ಶರ್ಮಾ (Rohit Sharma) ಇಬ್ಬರೂ ತಮ್ಮ 100% ಎಫರ್ಟ್ ಹಾಕಿರಲಿಲ್ಲ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಕೆಟ್ಟದಾಗಿಯೇ ಸೋಲನ್ನ ಕಂಡರು. ಇವರನ್ನೂ ಸೇರಿಸಿ 5 ಜನರನ್ನ ತಂಡ ಕೈಬಿಡಬೇಕು ಎಂದು ನಿರ್ಧರಿಸಿರುವುದಾಗಿ ವರದಿಯಾಗಿದೆ. ಈ ಬೆನ್ನಲ್ಲೇ ಮುಂಬರುವ ಆಟಕ್ಕಾಗಿ ಬಿಸಿಸಿಐ ಎಚ್ಚೆತ್ತುಕೊಳ್ಳಲೆಬೇಕಿದೆ. 2023ರಲ್ಲಿ ಏಕದಿನ ವಿಶ್ವಕಪ್ ಮತ್ತು 2024ರಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡುವ ಅನಿವಾರ್ಯತೆಯು ಇದೆ. ಬಿಸಿಸಿಐ (BCCI) ಈಗಾಗಲೇ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಹೊಸದೊಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಅದೇನು ಗೊತ್ತಾ ?

ಇದನ್ನೂ ಓದಿ: Cricket News:ಟಿ20 ವಿಶ್ವಕಪ್ ನಲ್ಲಿ ಸೋಲು ಕಂಡ ಬಳಿಕ ಈಗಲಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡ್ರಲ್ಲ; ಟಾಪ್ 5 ಆಟಗಾರರು ತಂಡದಿಂದ ಹೊರಕ್ಕೆ ಯಾರ್ಯಾರು ಗೊತ್ತೇ??

ಟೀಮ್ ಇಂಡಿಯಾ ದ ಬೆಸ್ಟ್ ಪ್ಲೇಯರ್,  ಕ್ಯಾಪ್ಟನ್ (Captain) ಆಗಿದ್ದ ಮಹೇಂದ್ರ ಸಿಂಗ್ ಧೋನಿ ಇಂದು ಕೆಲವು ಪಂದ್ಯಗಳಿಂದ ದೂರ ಉಳಿದಿದ್ದು, ಟೀಮ್ ಇಂಡಿಯಾ ಸ್ವಲ್ಪ ಮಟ್ಟಿಗೆ ಬಿಕ್ಕಟ್ಟು ಎದುರಿಸಿದ್ದಂತು ಸತ್ಯ. ವಿಶ್ವ ಕಪ್ ಗೆಲ್ಲಿಸಿಕೊಟ್ಟಿದ್ದು ಎಲ್ಲರಿಗೂ ನೆನಪಿದೆ. ಆದರೆ ಈಗಾಗಲೇ ಧೋನಿ ಐಪಿಎಲ್ ಬಿಟ್ಟು ಬೇರೆ ಎಲ್ಲಾ ಗೇಮ್ ನಿಂದ ರಿಟೈರ್ಮೆಂಟ್ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಧೋನಿಯಾ ಅಗತ್ಯತೆ ಟೀಮ್ ಇಂಡಿಯಾಗೆ ಇದೆ ಎಂಬುದನ್ನು ಬಿಸಿಸಿಐ ಅರಿತಿದೆ ರಾಹುಲ್ ದ್ರಾವಿಡ್ ಅವರಿಗೆ ಎಲ್ಲಾ ಗೇಮ್ ಗಳಿಗೂ ಆಟಗಾರರನ್ನು ರೆಡಿ ಮಾಡುವುದಕ್ಕೆ ಒತ್ತಡ ಹೆಚ್ಚಾಗಿದೆ ಹಾಗಾಗಿ ಧೋನಿ ಟೀಮ್ ಇಂಡಿಯಾದ ಕೋಚ್ ಆಗಿ ಬರಬೇಕು ಎಂಬುದು ಬಿಸಿಸಿಐ ಅಭಿಪ್ರಾಯ.

ಬಿಸಿಸಿಐ ಹೇಳಿದಂತೆ ಧೋನಿ ಟೀಮ್ ಇಂಡಿಯಾದ ಕೋಚ್ (Coach) ಆಗಿ ಬಂದ್ರೆ ಅವರು ಐಪಿಎಲ್ ಆಡುವಂತಿಲ್ಲ. ಹಾಗಾಗಿ ಧೋನಿ ಐಪಿಎಲ್ ಕೊಡಲು ಸಿದ್ದರಿದ್ದು ಕೋಚ್ ಆಗಲು ರೆಡಿ ಇದ್ದಾರಾ ಇಲ್ವಾ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ.  ಟಿ ಟ್ವೆಂಟಿ (T20) ಮಾದರಿಯ ಕೋಚ್ ನ್ನು ನೇಮಿಸಲು ಬಿಸಿಸಿಐ ನಿರ್ಧರಿಸಿದೆ ಹಾಗಾಗಿ ಧೋನಿ ಕೋಚ್ ಆಗಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Comments are closed.