Tollywood News: ಹ್ಯಾಂಡ್ ಸಮ್ ಹಂಕ್ ಮಹೇಶ್ ಬಾಬು ಅವರ ಸುಂದರವಾದ ಕೂದಲು ರಿಯಲ್ ಅಲ್ವಂತೆ; ಹಾಗಂತ ರಹಸ್ಯ ಬಯಲು ಮಾಡಿದ್ದು ಯಾರು ಗೊತ್ತಾ?  

Tollywood News: ದಕ್ಷಿಣ ಭಾರತೀಯ ಚಿತ್ರರಂಗ (South Indian Film)ದಲ್ಲಿ ದೊಡ್ಡ ಬಜೆಟ್ ಚಿತ್ರಗಳನ್ನು ನಿರ್ಮಿಸುವಲ್ಲಿ ತೆಲುಗು ಚಿತ್ರರಂಗ ಮುಂದಿದೆ. ಮೊದಲಿನಿಂದಲೂ ತೆಲುಗು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನೆಮಾಗಳು ತಯಾರಾಗುತ್ತಿವೆ. ತೆಲುಗು (telugu) ಸಿನೆಮಾರಂಗದಲ್ಲಿ ಇರುವ ನಾಯಕ ನಟರದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh babu) ಅವರು ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಇವರು ತಮ್ಮ ನೇರ ನಡೆಯಿಂದ ಜನರಿಗೆ ಬಹಳ ಹತ್ತಿರವಾಗಿದ್ದಾರೆ. ಇಂತಹ ಮಹೇಶ್ ಬಾಬು ಅವರಿಗೆ ಕೂದಲುಗಳು ಚಿಕ್ಕ ವಯಸ್ಸಿಗೆ ಉದುರಿದ್ದು, ವಿಗ್ ತೊಟ್ಟುಕೊಂಡಿದ್ದಾರೆ ಎಂದು ಮೆಕಪ್ ಮ್ಯಾನ್ ಒಬ್ಬರು ಹೇಳಿರುವುದು ಇದೀಗ ವೈರಲ್ ಆಗಿದೆ.

JYO 1 | Live Kannada News
Tollywood News: ಹ್ಯಾಂಡ್ ಸಮ್ ಹಂಕ್ ಮಹೇಶ್ ಬಾಬು ಅವರ ಸುಂದರವಾದ ಕೂದಲು ರಿಯಲ್ ಅಲ್ವಂತೆ; ಹಾಗಂತ ರಹಸ್ಯ ಬಯಲು ಮಾಡಿದ್ದು ಯಾರು ಗೊತ್ತಾ?   https://sihikahinews.com/2022/11/26/actor-mahesh-babu-using-wig-in-film/

ಮಹೇಶ್ ಬಾಬು ಈ ವರ್ಷ ಆಘಾತದ ಮೇಲೆ ಆಘಾತ ಎದುರಿಸಿದ್ದಾರೆ. ಒಂದೂವರೆ ತಿಂಗಳ ಅವಧಿಯಲ್ಲಿ ತಮ್ಮ ತಂದೆ -ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ಕಳೆದ ತಿಂಗಳಷ್ಟೆ ನಿಧನರಾಗಿದ್ದರು. ಮೊನ್ನೆ ಮೊನ್ನೆಯಷ್ಟೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಅನಾರೋಗ್ಯದಿಂದ ನಿಧನರಾದರು. ತಾಯಿಯ ಅಗಲಿಕೆಯಿಂದ ಹೊರಬರುವ ಹೊತ್ತಿಗೆ ಮಹೇಶ್ ಬಾಬು ಅವರಿಗೆ ತಂದೆಯ ಅಗಲಿಕೆ ಎದುರಾಗಿದೆ. ಇದರಿಂದ ಮಹೇಶ್ ಬಾಬು ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ:Kannada Film: ಡಿಸೆಂಬರ್ 11ಕ್ಕೆ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ!? ನೀವೇ ಮದುವೆ ಮಾಡಿಸಿಬಿಡಿ ಎಂದು ಸುಮಲತಾ ಹೇಳಿದ್ಯಾಕೆ? ಯಾರಿಗೆ?

ಮಹೇಶ್ ಬಾಬು ಅವರು ಸ್ಟೈಲಿಶ್ ಆಗಿ ಹೇರ್ ಸ್ಟೈಲ್ ಮಾಡಿಸಿಕೊಂಡು ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಆದರೆ ಮಹೇಶ್ ಬಾಬು ಅವರು ಸುಂದರ ಹೇರ್ ಸ್ಟೈಲ್ ಗಾಗಿ ವಿಗ್ ಧರಿಸುತ್ತಾರೆ ಎನ್ನುವುದು ಕೆಲವರ ವಾದವಾಗಿದೆ. ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರಿಗೂ ಕೂದಲು ಇರಲಿಲ್ಲ. ಅವರು ಸಹ ವಿಗ್ ಧರಿಸುತ್ತಿದ್ದರು. ತಂದೆಯಂತೆ ಮಗ ಕೂಡ ವಿಗ್ ಧರಿಸುತ್ತಾರೆ ಎನ್ನುವ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ಮಹೇಶ್ ಬಾಬು ಅವರ ಮೇಕಪ್ ಮ್ಯಾನ್ ಬೇಚ್ರೋಲು ಮಾಧವ ರಾವ್ ಅವರು ಬಹಿರಂಗಪಡಿಸಿದ್ದಾರೆ.

ಮಾಧವ್ ರಾವ್ ಅವರು ಅನೇಕ ವರ್ಷಗಳಿಂದ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆಗೆ ಕೆಲಸ ಮಾಡಿದ್ದಾರೆ. ಕೃಷ್ಣ ಅವರು ಸಿನೆಮಾ ರಂಗಕ್ಕೆ ಬಂದಾಗಿನಿಂದಲೂ ಅವರ ಜೊತೆಯೇ ಇದ್ದಾರೆ. ಹಾಗಾಗಿ ಕೃಷ್ಣ ಅವರ ಸಾಕಷ್ಟು ಸಿನೆಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಮಾಧವ್ ರಾವ್ ಅವರು ಸಂದರ್ಶನವೊಂದರಲ್ಲಿ ಕೃಷ್ಣ ಅವರಿಗೆ ಮೊದಲು ದಟ್ಟವಾದ ಕೂದಲು ಇತ್ತು. ಜುಟ್ಟು ಬಿಟ್ಟುಕೊಂಡೆ ಸಿನೆಮಾದಲ್ಲಿ ಅಭಿನಯಿಸುತ್ತಿದ್ದರು. ಬಳಿಕ ಕೂದಲು ಉದುರಲು ಆರಂಭಿಸಿತು. ಕೂದಲು ತೆಳ್ಳಗಾದಾಗ ಬೇರೆ ದಾರಿಯಿಲ್ಲದೆ ಕೃಷ್ಣ ಅವರು ವಿಗ್ನ ಮೊರೆ ಹೋದರು ಎಂದಿದ್ದಾರೆ.

ಹೀಗೆ ಮುಂದುರಿದ ಮಾಧವ್ ರಾವ್ ಅವರು ತಂದೆಯಂತೆಯೇ ಮಗ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಕೂಡ ವಿಗ್ ಧರಿಸುತ್ತಾರೆ.  ಮಹೇಶ್ ಬಾಬು ಅವರು ಬಾಲನಟನಾಗಿದ್ದಾಗ ನಾನು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದೆ. ನಂತರ ನನ್ನ ಸೋದರಳಿಯ ಪಟ್ಟಭಿ ಅವರು ಮಹೇಶ್ ಬಾಬು ಅವರಿಗೆ ಮೇಕಪ್ ಮಾಡಲು ಶುರು ಮಾಡಿದ. ಮಹೇಶ್ ಬಾಬು ಅವರು ಕೂಡ ಮೊದಲು ವಿಗ್ ಧರಿಸುತ್ತಿರಲಿಲ್ಲ. ನಂತರ ಕೂದಲು ಸಿಕ್ಕಾಪಟ್ಟೆ ಉದುರಿದ ನಂತರ ವಿಗ್ ಧರಿಸಲು ಆರಂಭಿಸಿದರು.

ಮಾಧವ್ ರಾವ್ ಅವರ ಈ ಹೇಳಿಕೆಯನ್ನು ಮಹೇಶ್ ಬಾಬು ಅವರ ಅಭಿಮಾನಿಗಳು ತಳ್ಳಿ ಹಾಕಿದ್ದಾರೆ. ಮಹೇಶ್ ಬಾಬು ಅವರು ಹೇರ್ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಅವರ ಒರಿಜನಲ್ ಕೂದಲು ಹಾಗೆ ಇದೆ.  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮಹೇಶ್ ಬಾಬು ಅವರ ಫೋಟೊ ಫೇಕ್ ಎಂದು ಅಭಿಮಾನಿಗಳು ಹೇಳಿದ್ದಾರೆ.

Comments are closed.