Education: ಈಗ 9 ಹಾಗೂ 1೦ ನೇ ತರಗತಿ ಪ್ರೌಢಶಾಲೆಯಲ್ಲವಂತೆ; ಯಾವ ಕೆಟಗೆರಿಗೆ ಸೇರಿಸಲಿದೆ ಶಿಕ್ಷಣ ಇಲಾಖೆ ಗೊತ್ತಾ?

Education: ಶಿಕ್ಷಣ ನಮ್ಮ ಸಂವಿಧಾನ (Constitution) ನೀಡಿರುವ ಮೂಲಭೂತ ಹಕ್ಕು. ಹಾಗಾಗಿ ಸರ್ಕಾರಗಳು ಸಹ ಪ್ರೌಢ ಶಿಕ್ಷಣದವರೆಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿವೆ. ಶಿಕ್ಷಣ ಇಲಾಖೆಗೆ (Education Department) ಪ್ರತಿವರ್ಷ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತವೆ. ಎಲ್ಲ ಇಲಾಖೆಗಳಲ್ಲಿ ಬದಲಾವಣೆಗಳು ಆಗುವಂತೆ ಶಿಕ್ಷಣ ಇಲಾಖೆಯಲ್ಲೂ ಹಲವು ಬದಲಾವಣೆ (changes) ಗಳು ಆಗಿವೆ. ಈಗ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಅದರ ಪ್ರಕಾರ 9 ಹಾಗೂ 1೦ನೇ ತರಗತಿಯನ್ನು ಪ್ರೌಢಶಾಲಾ ವಿಭಾಗದಿಂದ ಬೇರ್ಪಡಿಸಲಾಗಿದೆ. 9 ಹಾಗೂ 1೦ನೇ ತರಗತಿಯನ್ನು ಪ್ರೌಢಶಾಲೆ (High School)ಯ ಮುಂದುವರಿದ ಭಾಗ ಎಂದು ಹೇಳಲಾಗಿದೆ.

JYO 1 | Live Kannada News
Education: ಈಗ 9 ಹಾಗೂ 1೦ ನೇ ತರಗತಿ ಪ್ರೌಢಶಾಲೆಯಲ್ಲವಂತೆ; ಯಾವ ಕೆಟಗೆರಿಗೆ ಸೇರಿಸಲಿದೆ ಶಿಕ್ಷಣ ಇಲಾಖೆ ಗೊತ್ತಾ? https://sihikahinews.com/2022/11/26/karnataka-education-dept-order-9th-and-10th-class-considered-as-primary-education/

ಇಷ್ಟು ವರ್ಷಗಳ ಕಾಲ 9 ಹಾಗೂ 1೦ ನೇ ತರಗತಿ ಅಥವಾ ಎಸ್ಎಸ್ಎಲ್ ಸಿ ಪ್ರೌಢಶಾಲೆಯ ವಿಭಾಗದಲ್ಲಿ ಬರುತ್ತಿತ್ತು. 1೦ನೇ ತರಗತಿಗೆ ಪಬ್ಲಿಕ್ ಎಕ್ಸಾಂ ಇರುತ್ತಿತ್ತು. ಇದನ್ನು ಶೈಕ್ಷಣಿಕ ಜೀವನದ ಪ್ರಮುಖ ಹಂತ ಎಂದೇ ಪರಿಗಣಿಸಲಾಗಿತ್ತು. ಆದರೆ ಇದೀಗ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ 9 ಹಾಗೂ 1೦ ನೇ ತರಗತಿಯನ್ನು ಪ್ರಾಥಮಿಕ ಶಾಲೆಯ ಮುಂದುವರಿದ ಭಾಗ ಎಂದು ತಿಳಿಸಿದೆ. ಇದನ್ನೂ ಓದಿ: Kannada Film; ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಯಾಕೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿಲ್ಲ? ಇದಕ್ಕೆ ಅವರೇ ಕೊಟ್ಟಿರುವ ಕಾರಣ ಏನು ಗೊತ್ತೇ?

ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ಏನಿದೆ?

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ 1995ರ ತಿದ್ದುಪಡಿ ನಿಯಮ -2022 ರ ಈ ನಿಯಮ(Ruls)ದ ಅನ್ವಯ ನೋಂದಣಿ ಮತ್ತು ಮಾನ್ಯತೆಗೆ 9 ಮತ್ತು 1೦ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರಿದ ಭಾಗ ಎಂದು ತಿದ್ದುಪಡಿ ತರಲಾಗಿದೆ. ಆದ್ದರಿಂದ ಇನ್ಮುಂದೆ 1ರಿಂದ 8 ಅಥವಾ 6-8 ತರಗತಿ ನಡೆಯುತ್ತಿರುವ ಶಾಲೆಗಳಲ್ಲಿ 9 ಮತ್ತು 1೦ನೇ ತರಗತಿ ಆರಂಭಿಸಲು ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಶಾಲೆಗಳನ್ನು ಮುಂದುವರಿದ ಶಾಲೆಗಳು ಎಂದು ಪರಿಗಣಿಸಬೇಕು. ಹಾಗೂ ಅದರ ಅನ್ವಯ ನೋಂದಣಿ ನಿಯಮಗಳ ಪ್ರಕಾರ ಕ್ರಮವಹಿಸಬೇಕು. ಇದನ್ನೂ ಓದಿ: Sandalwood: ಮದುವೆ ಆಗ್ದೆನೇ ಬಹಳ ಸಂತೋಷವಾಗಿದಿನಿ; ಮತ್ತೆ ಮದ್ವೆ ಮಾಡ್ಕೊಳ್ಳೊದು ಯಾಕೆ; ಮೋಹಕ ತಾರೆ ಸ್ಟಾಂಗ್ ಡಿಸಿಶನ್?!

ಪ್ರಾಥಮಿಕ ಶಾಲೆಗಳಿರುವಲ್ಲಿಯೇ 9 ಹಾಗೂ 1೦ ನೇ ತರಗತಿ ನಡೆಸುವುದಾದರೆ ಈ ಶಾಲೆಯನ್ನು ಹೊಸ ಶಾಲೆಗಳೆಂದು ಪರಿಗಣಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.  ಒಂದು ವೇಳೆ ಬೇರೆ ಆವರಣದಲ್ಲಿ 9 ಹಾಗೂ 1೦ನೇ ತರಗತಿ ಆರಂಭಿಸಿದ್ದಲ್ಲಿ ಮಾತ್ರ ಅಂತಹ ಶಾಲೆಯನ್ನು ಪ್ರೌಢಶಾಲೆ ಎಂದು ಪರಿಗಣಿಸಬೇಕು. ಎಲ್ಲ ಖಾಸಗಿ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ:Bangalore Food: ಬೆಂಗಳೂರಿನ ಸಹಕಾರ ನಗರಿಯಲ್ಲಿ ನಿರ್ಮಾಣವಾಯಿತು ನರಾಚಿ ಸಾಮ್ರಾಜ್ಯ. ಕೆಜಿಎಫ್ ಬದಲು ಕನ್ನಡಿಗಾಸ್ ಗೋಲ್ಡನ್ ಫೂಡ್ ರೆಸ್ಟೋರೆಂಟ್ ಗೆ ಒಮ್ಮೆ ಹೋಗಿ ಬನ್ನಿ!

Comments are closed.