Rishi Sunak: ಇಂಗ್ಲೆಂಡ್ ಪ್ರಧಾನಿ ಮಗಳ ಕುಚಿಪುಡಿ ನೃತ್ಯಕ್ಕೆ ಬೆರಗಾದ ವಿಶ್ವ; ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಎತ್ತಿಹಿಡಿದ ’ಮೂರ್ತಿ’ ಮೊಮ್ಮಗಳು!

Rishi Sunak: ಇಂಗ್ಲೆಂಡಿ(England)ನಲ್ಲಿ ನಡೆದ ರಾಜಕೀಯ ಬದಲಾವಣೆಯಿಂದ ರಿಷಿ ಸುನಕ್ ಅವರು ಅಲ್ಲಿನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಿಷಿ ಸುನಕ್ ಅವರು ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಅಷ್ಟು ಅಚ್ಚು ಮೆಚ್ಚು ಯಾಕೆಂದರೆ ಅವರು ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಗಳ ಅಳಿಯನಾಗಿದ್ದಾರೆ. ಈ ದಂಪತಿಯ ಪುತ್ರಿ ಅಕ್ಷತಾ ಅವರನ್ನು ರಿಷಿ ಸುನಕ್ ಅವರು ವರಿಸಿದ್ದಾರೆ. ಹಾಗಾಗಿ ರಿಷಿ ಸುನಕ್ ಅವರು ಕನ್ನಡಿಗರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ.

JYO 1 | Live Kannada News
Rishi Sunak: ಇಂಗ್ಲೆಂಡ್ ಪ್ರಧಾನಿ ಮಗಳ ಕುಚಿಪುಡಿ ನೃತ್ಯಕ್ಕೆ ಬೆರಗಾದ ವಿಶ್ವ; ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಎತ್ತಿಹಿಡಿದ ’ಮೂರ್ತಿ’ ಮೊಮ್ಮಗಳು! https://sihikahinews.com/2022/11/26/uk-pm-rishi-sunak-daughter-performance-for-kuchipudi-dance/

ಇದೀಗ ರಿಷಿ ಸುನಕ್ ಹಾಗೂ ಅಕ್ಷತಾ ಸುನಕ್ ಅವರ ಪುತ್ರಿ ಅನೌಷ್ಕಾ ಸುನಕ್ ಅವರು ಮೊನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಕುಚಿಪುಡಿ ನೃತ್ಯ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. 9 ವರ್ಷದ ಪುಟಾಣಿಯೊಂದು ಈ ನೃತ್ಯವನ್ನು ಅಷ್ಟು ಅಚ್ಚುಕಟ್ಟಾಗಿ, ಮುದ್ದುಮುದ್ದಾಗಿ ಮಾಡಿದರೆ ಯಾರು ತಾನೇ ಮೆಚ್ಚಿಕೊಳ್ಳದಿರಲು ಸಾಧ್ಯ ನೀವೇ ಹೇಳಿ. ಇದನ್ನೂ ಓದಿ:Business Idea: ಎಷ್ಟು ಕಡಿಮೆ ಹೂಡಿಕೆ ಮಾಡಿದ್ರೂ ಸರಿ; ಈ ಉದ್ಯೋಗ ಪ್ರಾರಂಭಿಸಿದರೆ ತಿಂಗಳಿಗೆ ಕನಿಷ್ಟ 4೦,೦೦೦ ರೂ. ಅಂತೂ ಎಣಿಸ್ತೀರಿ ಯಾವುದು ಗೊತ್ತೇ ಆ ಉದ್ಯೋಗ?

ಶುಕ್ರವಾರ ಲಂಡನ್ ನಲ್ಲಿ ಆಯೋಜಿಸಲಾಗಿದ್ದ  ರಂಗ್ – ಇಂಟರ್ ನ್ಯಾಶನಲ್ ಕುಚಿಪುಡಿ ಡಾನ್ಸ್ ಫೆಸ್ಟಿವಲ್-2022 ರಲ್ಲಿ ಅನೌಷ್ಕಾ ಸುನಕ್ ಅವರು ಐಗಿರಿ ನಂದಿನಿ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಸಂಗೀತಗಾರರು,  ಹಿರಿಯ, ಸಮಕಾಲಿನ ನೃತ್ಯ ಕಲಾವಿದರು, ಗಾಲಿಕುರ್ಚಿ ನೃತ್ಯಗಾರರು, ನಟರಾಂಗ್ನ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಸೇರಿದಂತೆ 4 ರಿಂದ 85 ವರ್ಷದ ಒಳಗಿನ ಸುಮಾರು 1೦೦ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದರು.

ಅನೌಷ್ಕಾ ಸುನಕ್ ಅವರ ನೃತ್ಯ ನೋಡಿದ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿದ್ದೂ ಭಾರತೀಯ ಕಲೆಯನ್ನು ಕರಗತ ಮಾಡಿಕೊಂಡು ಪ್ರದರ್ಶನ ನೀಡಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಿಷಿ ಸುನಕ್ ಅವರು ಇಂಗ್ಲೆಂಡ್ ದೇಶದ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿಗೆ ಪ್ರಧಾನಿ ಪಟ್ಟ ಏರಿದ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಯುಕೆಯ ಅತ್ಯುನ್ನತ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಹಿಂದೂ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ಮೇಜಿನ ಮೇಲೆ ಗಣಪತಿಯ ಮೂರ್ತಿಯನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಅಷ್ಟೇ ಅಲ್ಲದೆ ಭಾರತೀಯರ ಹೃದಯವನ್ನು ಇವರು ಗೆದ್ದಿದ್ದಾರೆ.

Comments are closed.