Vastu tips; ಮಕ್ಕಳ ಸ್ಟಡಿ ರೂಂನಲ್ಲಿ ಇದೊಂದು ಚಿತ್ರ ಇಟ್ಟು ನೋಡಿ, ಓದದೆ ಇರುವ ಮಕ್ಕಳು ಏಕಾಗ್ರತೆಯಿಂದ ಓದಲು ಶುರು ಮಾಡುತ್ತಾರೆ!

Vastu tips:ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ವಸ್ತುವನ್ನು ಇಂತಹದ್ದೇ ದಿಕ್ಕಿಗೆ ಇಡಬೇಕು ಎನ್ನುವ ನಿಯಮ ಇದೆ. ಅದರಲ್ಲೂ ಯಾವ ಕೋಣೆ (room) ಯಾವ ದಿಕ್ಕಿಗೆ (direction) ಇರಬೇಕು ಎಂಬುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ನಿರ್ಧರಿಸಲಾಗುತ್ತದೆ. ಮಕ್ಕಳು ಓದುವ ಕೋಣೆ (study room) ವಾಸ್ತು ಪ್ರಕಾರವೇ ಇರಬೇಕು ಆಗ ಮಾತ್ರ ಮಕ್ಕಳಿ (children)ಗೆ ಓದಿನಲ್ಲಿ ಹೆಚ್ಚು ಆಸಕ್ತಿ ಬರುವುದಕ್ಕೆ ಸಾಧ್ಯ.

JYO 1 | Live Kannada News
Vastu tips; ಮಕ್ಕಳ ಸ್ಟಡಿ ರೂಂನಲ್ಲಿ ಇದೊಂದು ಚಿತ್ರ ಇಟ್ಟು ನೋಡಿ, ಓದದೆ ಇರುವ ಮಕ್ಕಳು ಏಕಾಗ್ರತೆಯಿಂದ ಓದಲು ಶುರು ಮಾಡುತ್ತಾರೆ! https://sihikahinews.com/2022/11/30/vastu-tips-keep-these-things-in-study-room/

ಮಕ್ಕಳ ರೂಮಿನಲ್ಲಿ ಒಂದು ಸ್ಟಡಿ ಟೇಬಲ್ (study table) ಇರುವುದು ಸಹಜ. ಮಕ್ಕಳು ಆ ಟೇಬಲ್ ನಲ್ಲಿಯೇ ತಮ್ಮ ಓದು ಬರಹ ಮಾಡಿಕೊಳ್ಳುತ್ತಾರೆ. ಆದರೆ ಈ ಟೇಬಲ್ ಸುತ್ತ ಹೀಗಿರಬೇಕು, ಟೇಬಲ್ ಮೇಲೆ ಏನು ಇಡಬೇಕು ಎನ್ನುವುದರ ಬಗ್ಗೆ ಕೂಡ ವಾಸ್ತು ಶಾಸ್ತ್ರ ಹಲವು ಟಿಪ್ಸ್ (tips) ನೀಡುತ್ತದೆ. ಮಕ್ಕಳು ಪುಸ್ತಕದಲ್ಲಿ ಓದಿ ಕಲಿಯುವುದಕ್ಕಿಂತ ತಮ್ಮ ಸುತ್ತಲಿನ ಪರಿಸರದ ಮೇಲೆ ಹೆಚ್ಚು ಪ್ರಭಾವಿತರಾಗುತ್ತಾರೆ ಹಾಗಾಗಿ ಅವರು ಓದುವ ಪರಿಸರ ಬಹಳ ಸ್ವಚ್ಛವಾಗಿ ಆಕರ್ಷಕವಾಗಿ ಇರಬೇಕು. ಹಾಗಾಗಿ ಮಕ್ಕಳು ಓದುವ ಟೇಬಲ್ ನಲ್ಲಿ ಈ ವಸ್ತುಗಳು ಇದ್ರೆ ಖಂಡಿತವಾಗಿ ಓದಿನ ಬಗ್ಗೆ ಅವರನ್ನು ಹೆಚ್ಚಿನ ಆಸಕ್ತಿ ಮೂಡುತ್ತದೆ. ಇದನ್ನೂ ಓದಿ:Siddaramaiah Biopic: ಇನ್ನು ಬೆಳ್ಳಿ ತೆರೆಯ ಮೇಲೂ ಸಿದ್ದರಾಮಯ್ಯ ಮಿಂಚಿಂಗ್; ನಿರ್ಮಾಣವಾಗ್ತಾ ಇರೋ ಬಯೋಪಿಕ್ ನಲ್ಲಿ ನಾಯಕ ಯಾರು ಗೊತ್ತೇ?

ಮಕ್ಕಳು ಓದುವ ಕೊಠಡಿಯಲ್ಲಿ ಉದಯಿಸುತ್ತಿರುವ ಸೂರ್ಯನ ಫೋಟೋವನ್ನು ಇಡಬೇಕು. ಈ ಚಿತ್ರ ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ಓಡುವ 7 ಕುದುರೆಗಳ ಚಿತ್ರ ಇದ್ದರೆ ಬಹಳ ಉತ್ತಮ. ಓಡುವ ಕುದುರೆಗಳು ವೇಗವಾದ ಜೀವನ, ಹೆಚ್ಚು ಸಾಧನೆ ಮಾಡಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತವೆ. ಹಾಗಾಗಿ ಈ ಸಿಂಬೋಲಿಕ್ ಆಗಿರುವ ಓಡುವ ಕುದುರೆಗಳು ಮಕ್ಕಳಿಗೆ ಇನ್ನಷ್ಟು ಓದಲು ಉತ್ಸಾಹ ನೀಡುತ್ತವೆ.

ಅದೇ ರೀತಿ ಹಾರಾಡುವ ಹಕ್ಕಿಯ ಫೋಟೋಗಳನ್ನು ಇದ್ದರೂ ಒಳ್ಳೆಯದೇ. ಇನ್ನು ಜೀವನದಲ್ಲಿ ಹೆಚ್ಚು ಸಾಧನೆ ಮಾಡಿರುವ ಕಷ್ಟದಿಂದ ಮೇಲೆ ಬಂದ ಸಾಧಕರ ಫೋಟೋಗಳನ್ನು ಮಕ್ಕಳು ಓದುವ ಕೋಣೆಯಲ್ಲಿ ಇಡಬೇಕು ಇದರಿಂದ ಅವರು ಪ್ರೇರಿತರಾಗಿ ಓದುವುದಕ್ಕೆ ಸಹಾಯಕವಾಗುತ್ತದೆ. ಇದನ್ನೂ ಓದಿ: Astrology: ಡಿಸೆಂಬರ್ 3ರಿಂದ ಆರಂಭವಾಗಲಿದೆ ಭದ್ರ ರಾಜಯೋಗ; ಇದರಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಯಾವ ರಾಶಿಗಳು ಗೊತ್ತೇ?

ಇನ್ನು ಮಕ್ಕಳಲ್ಲಿ ಏಕಾಗ್ರತೆಯನ್ನು ಮೂಡಿಸಲು ಧ್ಯಾನದ ಪ್ರಕ್ರಿಯೆಯಲ್ಲಿ ಇರುವಂತಹ ಹೆರಾನ್ ಹಕ್ಕಿಯ ಫೋಟೋವನ್ನು ಕೂಡ ಮಕ್ಕಳು ಓದುವ ಕೋಣೆಯಲ್ಲಿ ಇಡಿ.

ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿ ಮಕ್ಕಳಿಗೆ ಓದಲು ಪ್ರೇರಣೆ ಶಕ್ತಿ ಆಗಿರುವ ತಾಯಿ ಸರಸ್ವತಿಯ ಒಂದು ಚಿಕ್ಕ ಮೂರ್ತಿ ಅಥವಾ ಫೋಟೋವನ್ನು ಮಕ್ಕಳಿಗೆ ನೀಡಿ ಅವರು ಅದನ್ನು ಕೈ ಮುಗಿದು ತಮ್ಮ ಅಭ್ಯಾಸವನ್ನು ಆರಂಭಿಸಿದರೆ, ತಾಯಿ ಸರಸ್ವತಿಯ ಕೃಪೆ ಅವರ ಮೇಲೆ ಇರುತ್ತದೆ ಮಕ್ಕಳು ಸರಿಯಾದ ರೀತಿಯಲ್ಲಿ ಓದಲು ಸಹಾಯಕವಾಗುತ್ತದೆ.

Comments are closed.