SBI Bank Loan: ಬ್ಯಾಂಕಿಗೆ ಹೋಗೋದು ಬೇಡ, ಸಾಲಕ್ಕಾಗಿ ತಿಂಗಳುಗಟ್ಟಲೆ ಕಾಯೋದು ಬೇಡ; ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ 8 ಲಕ್ಷರೂ. ಟ್ರಾನ್ಸ್ಫರ್; ಎಸ್ ಬಿ ಐ ಬ್ಯಾಂಕ್ ಆಫರ್ ಹೇಗಿದೆ ನೋಡಿ!

SBI Bank Loan: ಭಾರತದಲ್ಲಿ ಇಂದು ಬ್ಯಾಂಕಿಂಗ್ (Banking) ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿವೆ. ಸಣ್ಣ ಪುಟ್ಟ ಉದ್ಯಮ, ವ್ಯಾಪಾರ ನಡೆಸುವವರಿಂದ ಹಿಡಿದು ಜನಸಾಮಾನ್ಯನವರೆಗೆ ಎಲ್ಲರೂ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಡಿಜಿಟಲ್ (Digital) ವರ್ಗಾವಣೆ ಮಾಡುತ್ತಿದ್ದಾರೆ. ಭಾರತದಲ್ಲಿ ಬ್ಯಾಂಕುಗಳು ಇಷ್ಟು ಪ್ರಭಲವಾಗಿರುವುದರಿಂದಲೇ ಭಾರತದ (India) ಅರ್ಥ ವ್ಯವಸ್ಥೆ ಗಟ್ಟಿಯಾಗಿದೆ. ವಿಶ್ವದಲ್ಲಿ ಎಂತಹ ಕಷ್ಟಗಳು ಬಂದವು. ಇದರಿಂದ ಹಲವಾರು ದೇಶಗಳು ದಿವಾಳಿಯಾದವು. ಆದರೆ ಭಾರತದಲ್ಲಿ ಮಾತ್ರ ಇದರ ಒಂದು ಸಣ್ಣ ಪರಿಣಾಮ ಕೂಡ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಭಾರತದ ಅರ್ಥ ವ್ಯವಸ್ಥೆ ಹಾಗೂ ಬ್ಯಾಂಕ್ ಗಳು ಅಷ್ಟು ಸದೃಢವಾಗಿವೆ. ಬ್ಯಾಂಕ್ಗಳು ಹಲವು ರೀತಿಯ ಕೊಡುಗೆಗಳನ್ನು ಘೋಷಿಸುತ್ತ ಇರುತ್ತವೆ. ಈಗ ಎಸ್ ಬಿ ಐ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಆಫರ್ ಬಿಟ್ಟಿದೆ.

ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿರುವ ಎಸ್ ಬಿ ಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಆಫರ್ ಘೋಷಿಸಿದೆ. ಹಣದ ಅವಶ್ಯಕತೆ ಇರುವವರು ಈ ಆಫರ್ ಬಳಕೆ ಮಾಡಿಕೊಳ್ಳಬಹುದು. ಎಸ್ ಬಿ ಐ ತನ್ನ ಗ್ರಾಹಕರಿಗೆ ಪೂರ್ವ ಅನುಮೋದಿತ ಸಾಲಗಳನ್ನು ನೀಡುತ್ತದೆ. ಇದಕ್ಕಾಗಿ ನೀವು ಬ್ಯಾಂಕ್ಗೆ ಹೋಗಬೇಕಾಗಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಅದು ನಿಮ್ಮ ಖಾತೆಗೆ ಬರುತ್ತದೆ. ಇದರ ಜೊತೆ ಎಸ್ ಬಿ ಐ ವಿಶೇಷ ಸೇವೆಗಳನ್ನು ಒದಗಿಸುತ್ತಿದೆ. ಸಂಸ್ಕರಣಾ ಶುಲ್ಕವನ್ನು ಸಹ ವಿಧಿಸುತ್ತಿಲ್ಲ. ಅರ್ಹ ಬ್ಯಾಂಕ್ ಗ್ರಾಹಕರು 35 ಲಕ್ಷ ರೂ. ವರೆಗೆ ಸಾಲಗಳನ್ನು ಪಡೆಯಬಹುದು.

ಇದನ್ನೂ ಓದಿ: ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಇಲ್ಲದಿದ್ದರೆ ಬ್ಯಾಂಕ್ ಅರ್ಹ ಬ್ಯಾಂಕ್ ಗ್ರಾಹಕರಿಗೆ ಪೂರ್ವ ಅನುಮೋದಿತ ಸಾಲ ನೀಡುತ್ತಿದೆ. ಪೂರ್ವ ಅನುಮೋದಿತ ಸಾಲದ ಆಫರ್ ಪಡೆಯುವವರು 8 ಲಕ್ಷ ರೂ. ವರೆಗೆ ಸಾಲ ಪಡೆಯಬಹುದು. ಎಸ್ ಬಿ ಐ ಯೋನೊ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಬಹುದು. ಕೂಡಲೇ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ.

ಅಂದರೆ ನೀವು ಬ್ಯಾಂಕ್ಗೆ ಹೋಗದೆ 8 ಲಕ್ಷ ರೂ. ವರೆಗೆ ಸಾಲ ಪಡೆಬಹುದು. ಈ ಕುರಿತು ಎಸ್ ಬಿ ಐ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದೆ. ಇದಕ್ಕಾಗಿ ಗ್ರಾಹಕರು  PAPL  ಎಂದು ನಮ್ಮ ಮೊಬೈಲ್ನಲ್ಲಿ ಟೈಪ್ ಮಾಡಿ ತಮ್ಮ ಖಾತೆ ಸಂಖ್ಯೆಯ ನಾಲ್ಕು ಅಂಕಿಯನ್ನು ನಮೂದಿಸಿ 567676 ಕ್ಕೆ ಸಂದೇಶ ಕಳುಹಿಸಬೇಕು. ಕೂಡಲೇ ನೀವು ಸಾಲ ಪಡೆಯಲು ಅರ್ಹರು  ಹೌದೊ ಅಲ್ಲವೋ ಎನ್ನುವುದು ತಿಳಿಯುತ್ತದೆ. ಪೂರ್ವ ಅನುಮೋದಿತ ಸಾಲದ ಕೊಡುಗೆ ಇದೆಯೇ? ಇಲ್ಲವೇ ಎನ್ನುವುದನ್ನು ಎಸ್ ಬಿ ಐ ಯೋನೊ ಬ್ಯಾಂಕಿಂಗ್ ಮೂಲಕವೂ ತಿಳಿದುಕೊಳ್ಳಬಹುದು.

ಪೂರ್ವ ಅನುಮೋದಿತ ಸಾಲದ ಆಫರ್ ಇದ್ದರೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಎಷ್ಟು ಸಾಲ ಬೇಕು ಎನ್ನುವುದನ್ನು ನಮೂದಿಸಬೇಕು. ಬಡ್ಡಿದರ, ಇಎಂಐಗಳನ್ನು ಪರಿಶೀಲನೆ ಮಾಡಬೇಕು. ಇದಾದ ಬಳಿಕ ಒಂದು ಓಟಿಪಿ ನಿಮ್ಮ ಮೊಬೈಲ್ಗೆ ಬರುತ್ತದೆ. ಅದನ್ನು ಬ್ಯಾಂಕ್ಗೆ ತಿಳಿಸಿದರೆ ಸಾಕು. ತಕ್ಷಣ ಹಣ ನಿಮ್ಮ ಖಾತೆಗೆ ಬರುತ್ತದೆ.  

Comments are closed.