Chamrajanagara: ಹಣವಿಲ್ಲದೇ ಪ್ಲಾಸ್ಟಿಕ್ ಕವರ್ ನಲ್ಲಿಯೇ  ಪತ್ನಿಯ ಶವ ಸಾಗಿಸಿದ ಪತಿ; ಚಾಮರಾಜನಗರದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ!

Chamrajanagara: ಕರ್ನಾಟಕದಲ್ಲಿ ಆರೋಗ್ಯ ವ್ಯವಸ್ಥೆ ಬಹಳ ಚೆನ್ನಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ ವ್ಯವಸ್ಥೆ ಒದಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ತಂದಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದಾಗ ಹಣದ ಕೊರತೆ ಆಗಬಾರದು ಎನ್ನುವ ಕಾರಣ ಹಲವು ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಈ ಮೂಲಕ ಜನರ ಆರೋಗ್ಯದತ್ತ ಸರ್ಕಾರ ಗರಿಷ್ಟ ಆದ್ಯತೆ ನೀಡುತ್ತದೆ. ಆದರೂ ಚಾಮರಾಜನಗರದಲ್ಲಿ ಒಂದು ಹೃದಯ ವಿದ್ರಾವಕ ನಡೆದಿದೆ. ಇದನ್ನೂ ಓದಿ:SBI Bank Loan: ಬ್ಯಾಂಕಿಗೆ ಹೋಗೋದು ಬೇಡ, ಸಾಲಕ್ಕಾಗಿ ತಿಂಗಳುಗಟ್ಟಲೆ ಕಾಯೋದು ಬೇಡ; ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ 8 ಲಕ್ಷರೂ. ಟ್ರಾನ್ಸ್ಫರ್; ಎಸ್ ಬಿ ಐ ಬ್ಯಾಂಕ್ ಆಫರ್ ಹೇಗಿದೆ ನೋಡಿ!

JYO 1 | Live Kannada News
Chamrajanagara: ಹಣವಿಲ್ಲದೇ ಪ್ಲಾಸ್ಟಿಕ್ ಕವರ್ ನಲ್ಲಿಯೇ  ಪತ್ನಿಯ ಶವ ಸಾಗಿಸಿದ ಪತಿ; ಚಾಮರಾಜನಗರದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ! https://sihikahinews.com/2022/12/08/chamrajnagar-man-carry-his-wife-body-in-plastic-cover/

ಶವ ಸಾಗಿಸಲು ಹಣವಿಲ್ಲದ ಕಾರಣ ಪತಿಯೊಬ್ಬ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಕೊಂಡು ಸಾಗಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕಾಗೆಪುರ ಗ್ರಾಮದ ಕಾಳಮ್ಮ (೨೬) ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಂದಹಳ್ಳಿ ಸಮೀಪ ವಾಸವಿರುವ ಮೃತ ಕಾಳಮ್ಮ ಮತ್ತು ಆಕೆಯ ಪತಿ ರವಿ ವಾಸವಾಗಿದ್ದರು. ಇವರು ಪ್ಲಾಸ್ಟಿಕ್ ಆಯುವ ಕಾಯಕದಲ್ಲಿ ತೊಡಗಿದ್ದರು. ಈ ವೇಳೆ ಕಾಳಮ್ಮ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದನ್ನೂ ಓದಿ:Jio Recharge Plan: 129 ರೂ. ರೀಚಾರ್ಜ್ ಮಾಡಿದ್ರೆ ಒಂದು ವರ್ಷದ ವರೆಗೆ ಎಲ್ಲಾ ಸೌಲಭ್ಯ  ಫ್ರೀ.. ಫ್ರೀ.. ಫ್ರೀ.. ಏನೆಲ್ಲಾ ಸಿಗಲಿದೆ ಗೊತ್ತೇ?

ಪತ್ನಿಯ ಮೃತಪಟ್ಟ ಹಿನ್ನೆಲೆಯಲ್ಲಿ ಶವ ಸಾಗಿಸಲು ವಾಹನದ ಅಗತ್ಯತೆ ಇತ್ತು. ಆದರೆ ಪತಿ ರವಿ ಕೈಯ್ಯಲ್ಲಿ ಹಣವಿಲ್ಲದ ಕಾರಣ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಕೊಂಡು ಸಾಗಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾಹನದಲ್ಲಿ ಶವವನ್ನು ಸಾಗಿಸಲು ಅನುವು ಮಾಡಿಕೊಟ್ಟಿದ್ದಾರೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.