Vastu Tips: ಮನೆಯಲ್ಲಿ ಹಾಲು ಉಕ್ಕಿದರೆ ಶುಭವೋ ಅಶುಭವೋ? ಏನನ್ನುತ್ತದೆ ವಾಸ್ತು ಶಾಸ್ತ್ರ ಗೊತ್ತೇ?

Vastu Tips: ಸ್ನೇಹಿತರೆ ಮನೆಯಲ್ಲಿ ಹಾಲು(Milk) ಉಕ್ಕಿಸಿದರೆ ನಮ್ಮ ಹಿರಿಯರು ಕೋಪಗೊಳ್ಳುತ್ತಾರೆ. ಬಯ್ಯುತ್ತಾರೆ. ಅಷ್ಟು ಗೊತ್ತಾಗಲ್ವಾ ಸ್ವಲ್ಪ ಹೊತ್ತು ಅಲ್ಲೇ ಇದ್ದು ಹಾಲು ಕಾಯಿಸಿ ಬರಬಹುದಲ್ಲ ಅಂತ ಬೈತಾರೆ. ಇದು ಹಾಲು ಚೆಲ್ಲಿದರೆ ಮತ್ತೆ ಒರೆಸಬೇಕು, ಸ್ವಚ್ಛಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಮಾತ್ರ ಅಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಾಲು ಉಕ್ಕಿಸುವುದು ಕೆಟ್ಟಕಾಲದ ಸೂಚನೆ.

ಹೊಸ ಮನೆ ಪ್ರವೇಶ ಮಾಡಿದಾಗ ಹಾಲು ಉಕ್ಕಿಸುವುದು ಶುಭ ಎಂದು ಹೇಳಲಾಗುತ್ತೆ. ಆದರೆ ಮನೆಯಲ್ಲಿ ಆಗಾಗ ಹಾಲು ಉಕ್ಕಿ ಚೆಲ್ಲುತ್ತಿದ್ದರೆ ಅದು ಖಂಡಿತವಾಗಿಯೂ ಶುಭ ಅಲ್ಲ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಹೌದು ಜ್ಯೋತಿಷ ಶಾಸ್ತ್ರವಾಗಲಿ ಅಥವಾ ವಾಸ್ತು ಶಾಸ್ತ್ರವಾಗಲಿ ಹಾಲು ಮನೆಯಲ್ಲಿ ಆಗಾಗ ಉಕ್ಕಿ ಚೆಲ್ಲಿದರೆ ಅದು ಅಶುಭ ಎಂಬುದನ್ನು ಹೇಳುತ್ತದೆ. ಇದನ್ನೂ ಓದಿ: Lifestyle: ತುಪ್ಪ ಮತ್ತು ತೆಂಗಿನೆಣ್ಣೆ ಇವೆರಡರಲ್ಲಿ ತೂಕ ಇಳಿಕೆಗೆ ಬೆಸ್ಟ್ ಯಾವುದು ಗೊತ್ತಾ?

ಹಾಲನ್ನ ಚಂದ್ರನ ಅಂಶ ಎಂದು ಹೇಳಲಾಗುತ್ತದೆ. ಹಾಲು ಉಕ್ಕಿದರೆ ಮನೆಯಲ್ಲಿ ಅಥವಾ ಮನೆಯವರಿಗೆ ಚಂದ್ರನ ದೋಷ ಉಂಟಾಗಬಹುದು ಇದರಿಂದ ಮನುಷ್ಯನ ಮೆದುಳು ಮನಸ್ಸಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಹಾಗಾಗಿ ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಇದನ್ನೂ ಓದಿ: Lifestyle: ಒತ್ತಡದ ಬದುಕು ನಡೆಸುತ್ತಿದ್ದೀರಾ? ಆಹಾರ ಸವಿಯೋದಕ್ಕೂ ಟೈಮ್ ಇಲ್ವಾ? ಹಾಗಾದ್ರೆ ಈ ರೀತಿ ಸಲಾಡ್ ಟ್ರೈ ಮಾಡಿ; ಆರೋಗ್ಯವಾಗಿಯಾದ್ರೂ ಇರಬಹುದು!

ಇನ್ನು ದಿನನಿತ್ಯ ಹಾಲು ಕುದಿಸಿದಾಗ ಅದು ಉಕ್ಕಿ ಬಂದು ಚೆಲ್ಲಿದರೆ ಆ ಮನೆಯಲ್ಲಿ ವಾಸ್ತುದೋಷ ಆರಂಭವಾಗಿದೆ ಎಂದು ಅರ್ಥ. ಜೊತೆಗೆ ಹಾಲು ಕುಡಿಯುವಾಗ ಕೈಯಿಂದ ಹಾಲು ಚೆಲ್ಲಿದರೆ ಅಥವಾ ಗ್ಲಾಸ್ ಒಡೆದರೆ ಅದು ಕೂಡ ಅಶುಭ ಎಂದು ಪರಿಗಣಿಸಲಾಗುತ್ತದೆ. ಆಗಾಗ ಹಾಲು ಉಕ್ಕಿದರೆ ಕುಟುಂಬದಲ್ಲಿ ಉಂಟಾಗಬಹುದು ಗಂಡ ಹೆಂಡತಿ ಕಲಹ ಹಾಗೂ ಮನೆಯಲ್ಲಿ ನಕಾರಾತ್ಮಕತೆ ತುಂಬಿಕೊಳ್ಳುತ್ತದೆ.

ಇನ್ನು ಬೆಳಿಗ್ಗೆ ಹಾಲು ಕೊಳ್ಳುವರು ಅಥವಾ ಹಾಲನ್ನು ಮಾರುವವರನ್ನು ನೋಡಿದರೆ ಅದು ಖಂಡಿತವಾಗಿಯೂ ಶುಭದ ಸಂಕೇತವಾಗಿದೆ ಹೀಗೆ ನೀವು ಹಾಲು ಕೊಳ್ಳುವುದನ್ನ ನೋಡಿದರೆ ಮುಂದಿನ ದಿನದಲ್ಲಿ ನಿಮಗೆ ಶುಭ ಸುದ್ದಿ ಸಿಗುತ್ತದೆ ಎಂದು ಅರ್ಥ. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಇದನ್ನೂ ಓದಿ: Vastu Tips: ಬೇರೆ ಏನು ಬೇಡ, ಜಸ್ಟ್ ಇವುಗಳಲ್ಲಿ ಒಂದನ್ನು ಮನೆಯಲ್ಲಿಡಿ ಸಾಕು; ಹಣ ಬೇಡ ಬೇಡ ಅಂದರು ಹುಡುಕಿಕೊಂಡು ಬರುತ್ತದೆ!

Comments are closed.