IPL 2023: ಆರ್‌ಸಿಬಿ ತಂಡ ಸೇರಿದ ಮೂರು ಸ್ಟಾರ್ ಪ್ಲೇಯರ್ಸ್; ಕನ್ನಡಿಗರನ್ನ ಸೈಡ್ ಲೈನ್ ಮಾಡಿದ್ಯಾ ಆರ್ಸಿಬಿ ತಂಡ?

IPL 2023: ಐಪಿಎಲ್ 2023 ಮಾರ್ಚ್ (March) ತಿಂಗಳಿನಲ್ಲಿ ಆರಂಭವಾಗಲಿದೆ ಹರಾಜು ಪ್ರಕ್ರಿಯೆ ಕಂಪ್ಲೀಟ್ ಆಗಿದ್ದು ಆಟಗಾರರನ್ನ ಕೋಟಿ ಕೋಟಿ ಬೆಲೆಗೆ ಖರೀದಿ ಮಾಡಲಾಗಿದೆ, ಈ ಬಾರಿ ಆರ್ಸಿಬಿ (RCB) ತನ್ನ 17 ಜನರ ತಂಡಕ್ಕೆ ಮತ್ತು ಮೂವರನ್ನು ಸೇರ್ಪಡೆ ಮಾಡಿಕೊಂಡಿದೆ. ಮೂರು ವಿದೇಶಿ ಆಟಗಾರರ ಮಿನಿ ಹರಾಜಿನಲ್ಲಿ ಖರೀದಿ ಮಾಡಲಾಗಿದೆ.

ಆರ್ಸಿಬಿ ತಂಡದ ಆಟಗಾರರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕೇವಲ ಎಂಟು ಕೋಟಿ ಅಷ್ಟು ಹಣ ಮಾತ್ರ ಹರಾಜಿನಲ್ಲಿ ವ್ಯಯಿಸಬಹುದಾಗಿದ್ದ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಗೆ ಸ್ಮಾರ್ಟ್ ಯೋಚನೆಯಿಂದಾಗಿ 21 ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ತಂಡಕ್ಕೆ ಸೇರ್ಪಡೆಯಾಗಿರುವ ಹೊಸ ಆಟಗಾರರು (New Players in RCB);

24 ವರ್ಷದ ಯುವ ಆಟಗಾರ ವಿಲ್ ಜಾಕ್ಸನ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಇವರನ್ನ 3.20 ಖರೀದಿ ಮಾಡಲಾಗಿದೆ. ಇವರಿಗೆ ಇದ್ದ ಮುಖಬೆಲೆ 1.50 ಕೋಟಿ ರೂಪಾಯಿಗಳು. ಇವರು ಇಂಗ್ಲೆಂಡ್ ಪರ ಎರಡು ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ರು.

ಐಪಿಎಲ್ ಸೀಸನ್ 16ರ ಮಿನಿ ಹರಾಜಿನಲ್ಲಿ ಹಿಮಾಂಶು ಶರ್ಮಾ ಅವರು ಆರ್‌ಸಿಬಿ ತಂಡ ಸೇರಿದ್ದಾರೆ ಅವರನ್ನು 1.9 ಕೋಟಿ ಬಿಡ್ ಮಾಡಿ ಖರೀದಿ ಮಾಡಲಾಗಿದೆ.

ಮೂರನೇ ಆಟಗಾರ ರೇಸ್ಲೆ ಟೋಪ್ಲೆ. ಇವರನ್ನು 1.90 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ. ಇನ್ನು ಆರ್‌ಸಿಬಿ ತನ್ನ ತಂಡಕ್ಕೆ ಮತ್ತೊಬ್ಬ ಕನ್ನಡಿಗನ ಸೇರಿಸಿಕೊಳ್ಳಲು ಹಿಂದೇಟು ಹಾಕಿದೆ. ಈಗ ಮತ್ತೆ ಆರ್‌ಸಿಬಿ ಕನ್ನಡಿಗರಿಗೆ ಅವಕಾಶ ಕೊಡಲು ಹಿಂಜರಿದಿದೆಯಾ ಎಂದು ಪ್ರಶ್ನೆ ಮೂಡಿದೆ. ಇನ್ನು ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜು ದಾಖಲೆಗಳನ್ನು ನಿರ್ಮಿಸಿದೆ ಈ ಬಾರಿ ಅತಿ ಹೆಚ್ಚು ಹಣ ಪಡೆದು ಖರೀದಿ ಆಗಿರುವ ಆಟಗಾರ ಸ್ಯಾಮ್.

 ಕೊಚ್ಚಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ದಾಖಲೆಗಳಲ್ಲಿ ದಾಖಲೆಗಳನ್ನು ನಿರ್ಮಿಸುತ್ತದೆ. ಹರಾಜಿಗೆ ಪ್ರವೇಶಿಸಿದ ಆಟಗಾರರು ಭಾರಿ ಬೆಲೆಯನ್ನು ಪಡೆಯುತ್ತಲೇ ಇದ್ದಾರೆ.

ಪಂಜಾಬ್ ಕಿಂಗ್ಸ್ ಅವರನ್ನು 18.50 ಕೋಟಿ ಗೆ ಸ್ಯಾಮ್ ಅವರನ್ನು ಖರೀದಿ ಮಾಡಿದ್ದು ಇದು ಐಪಿಎಲ್ ಇತಿಹಾಸದಲ್ಲಿಯೇ ಮೊದಲು. ಪ್ರಾಂಚೈಸಿಗಳು ತಮ್ಮ ಬಳಿ ಇರುವ, 95 ಕೋಟಿ ರೂಪಾಯಿ ನಿಗದಿಪಡಿಸಲಾಗಿರುವ ಹಣಕ್ಕಿಂತ ಹೆಚ್ಚು ಖರ್ಚು ಮಾಡುವಂತಿಲ್ಲ ಆದರೆ ಲಭ್ಯವಿರುವ ಶೇಕಡ 75 ರಷ್ಟು ಹಣವನ್ನು ಮಾತ್ರ ಬಳಸಬಹುದು. ಇದನ್ನೂ ಓದಿ:UPI Payment:ನಿಮ್ಮ ಫೋನ್ ಮಿಸ್ ಆಗಿ ಕಳೆದು ಹೋದರೇ, UPI ಅನ್ನು ಕೂಡ ಸೇಫ್ ಮಾಡಿ ಹಣ ಉಳಿಸಿಕೊಳ್ಳುವುದು ಹೇಗೆ ಗೊತ್ತೇ??

ಆರ್‌ಸಿಬಿ ತಂಡದ ಆಟಗಾರರ ಹೆಸರು ಇಂತಿವೆ.

ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್‌, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್.

Comments are closed.