IPL 2023: ಆರ್ ಸಿ ಬಿ ತಂಡಕ್ಕೆ ಕಾಡುತ್ತಿರುವ ಪ್ರಮುಖ ಸಮಸ್ಯೆ ಇದೇ; ಪರಿಹಾರ ಇದೆ. ಇದರಲ್ಲಿ ಯಾವುದು ಬೆಸ್ಟ್; ನಿಮ್ಮ ಆಯ್ಕೆ ಯಾವುದು?

IPL 2023: ಐಪಿಎಲ್ ಟೂರ್ನಿ ಆರಂಭವಾದ ಸಮಯದಿಂದಲೂ ಒಮ್ಮೆಯೂ ಟ್ರೋಫಿ (Trophy) )ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore-RCB) ಒಂದು. ಟ್ರೋಫಿ ಗೆಲ್ಲುವ ಸಾಮರ್ಥ್ಯ ಇದ್ದರೂ ಅದೃಷ್ಟ (Luck) ಮಾತ್ರ ಆರ್ಸಿಬಿಗೆ ಸಾಥ್ ಕೊಡುತ್ತಿಲ್ಲ. ಕಳೆದ ವರ್ಚ ಎಲಿಮಿನೇಟರ್ ಹಂತಕ್ಕೂ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ವಿರುದ್ದ ಸೋತು ಮನೆಗೆ ಹಿಂದುರುಗಿತ್ತು. ಇದರಿಂದ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಆದರೆ ಈ ಬಾರಿ ತಂಡ (Team) ಬ್ಯಾಲೆನ್ಸ್ ಆಗಿ ಕಾಣುತ್ತಿದೆ. ಆದರೆ ಆರಂಬಿಕ ಆರಂಭಿಕ ಜೋಡಿಯ ಸಮಸ್ಯೆ ಮಾತ್ರ ತಂಡವನ್ನು ಕಾಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ:Cricket News: ರಾಹುಲ್ ವಿರುದ್ಧ ಟೀಕೆ ಮಾಡಿದ ನಂತರ ಸಂಜು ಸಾಮ್ಸನ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ವಾಸಿಂ; ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಾ?

ಆರ್ಸಿಬಿ ತಂಡದ ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ (Virat Kohli) ಕೂಡ ಒಬ್ಬರುಯ. ಸದ್ಯ ತಂಡದ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್ (Faf du Plessis) ಕೂಡ ಉತ್ತಮ ಆಟಗಾರರಾಗಿದ್ದಾರೆ. ಇಬ್ಬರು ಉತ್ತಮ ಫಾರ್ಮ್ ಒಂದಾದರೆ ಆ ಪಂದ್ಯದಲ್ಲಿ ತಂಡಕ್ಕೆ ಅತ್ಯುತ್ತಮ ಆರಂಭ ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಳೆದ ವರ್ಷ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿ ಇಲ್ಲದಿದ್ದರೂ ಇಬ್ಬರ ಜೋಡಿ ಉತ್ತಮ ಪ್ರದರ್ಶನ ನೀಡುವಲ್ಲಿ ಮಾತ್ರ ವಿಫಲವಾಗಿರಲಿಲ್ಲ. ಈ ಕಾರಣದಿಂದ ಮುಂದಿನ ವರ್ಷದಲ್ಲಿ ಈ ಜೋಡಿಯೇ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಏಕೆಂದರೆ ಕೊಹ್ಲಿ ಇತ್ತಿಚೆಗೆ ಉತ್ತ, ಫಾರ್ಮ್ಗೆ ಮರಳಿದ್ದು, ಡುಪ್ಲೆಸಿಸ್ ಕೂಡ ಫಾರ್ಮ್ನಲ್ಲಿ ಇದ್ದಂತೆ ಕಾಣುತ್ತಿದೆ.

ಆರ್ಸಿಬಿ ತಂಡದಲ್ಲಿ ಯುವ ವಿಕೆಟ್ ಕೀಪರ್, ಬ್ಯಾಟ್ಸಮನ್ ಅನೂಜ್ ರಾವತ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಆವೃತ್ತಿಯಲ್ಲಿ ಆರಂಭಿಕರಾಗಿ ರಾವತ್ಗೆ ಕೆಲ ಅವಕಾಶಗಳು ಸಿಕ್ಕಿದ್ದರೂ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಆ ಬಳಿಕ ವಿರಾಟ್ ಕೊಹ್ಲಿ ಅವರನ್ನು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಸಲಾಗಿತ್ತು
ಈ ಬಾರಿಯ ಆವೃತ್ತಿಯಲ್ಲೂ ಮೊದಲು ರಾವತ್ಗೆ ಕೆಲ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿರುವುದರಿಂದ ರಾವತ್ಗೆ ಅವಕಾಶ ಸಿಗುವುದು ಕಷ್ಟ.

ಕಳೆದ ಎರಡು ಆವೃತ್ತಿಯಲ್ಲಿ ಆರ್ಸಿಬಿ ತಂಡದಲ್ಲಿ ಇರುವ ಬ್ಯಾಟ್ಸಮನ್ ಅಂದೆ ಅಲೆನ್ ಕಿವೀಸ್. ಅಲೆನ್ಗೆ ಇದುವರೆಗೂ ಆರ್ಸಿಬಿ ಪರ ಆಟ ಆಡುವ ಚಾನ್ಸ್ ಸಿಕ್ಕಿಲ್ಲ. ಆದರೆ ನ್ಯೂಜಿಲೆಂಡ್ ಪರ ೧೬೦ ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಮಾಡಿರುವ ಅಲೆನ್ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದರೂ ಆರ್ಸಿಬಿ ಮ್ಯಾನೆಜ್ಮೆಂಟ್ ಸೀಮಿತ ಮಾಡಿದರೆ ಬಹುದೊಡ್ಡ ತಪ್ಪಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ತಂಡದ ಓಪನರ್ ಆಗಿ ಮಿಂಚುತ್ತಿರುವ ಅಲೆನ್ಗೆ ಆರ್ಸಿಬಿ ತಂಡದಲ್ಲಿಯೂ ಆರಂಭಿಕ ಆಟಗಾರನಾಗಿ ಅವಕಾಶ ನೀಡಿದರೆ ಡುಪ್ಲೆಸಿಸ್ಗೆ ಒಳ್ಳೆಯ ಜೋಡಿಯಾಗಬಹುದು. ಇದರಿಂದ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಟವಾಡಲು ಸಾಧ್ಯವಾಗಲಿದೆ. ಆದರೆ ಆರ್ಸಿಬಿ ಯಾರಿಗೆ ಅವಕಾಶ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments are closed.