Pawan Kalyan: ಪವನ್ ಕಲ್ಯಾಣ್ ರವರ ಜೊತೆ ನಟಿಸಿ ತಮ್ಮ ಸಿನಿಮಾ ಜೀವನವನ್ನು ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೆ?

Pawan Kalyan: ತೆಲುಗು ಚಿತ್ರರಂಗದಲ್ಲಿ (Telugu Film Industry) ಪವರ್ ಸ್ಟಾರ್ ಪವನ್ ಕಲ್ಯಾಣ್  (Pavan Kalyan) ಎಷ್ಟು ಕ್ರೇಜ್ (Craze)  ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಸಾಕಷ್ಟು ಸಿನಿಮಾ ಮೂಲಕ ಹಿಟ್ ಸಾಧಿಸಿದ ನಟ ಪವನ್ ಕಲ್ಯಾಣ್ ಚಿತ್ರರಂಗದಿಂದ ಹಿಡಿದು ರಾಜಕೀಯ (Politics) ದವರೆಗೂ ವಿಭಿನ್ನ ಚಿಂತನೆಯನ್ನು ಹೊಂದಿರುವುದಾಗಿ ಸಾಬೀತಾಗಿದೆ.  ಪವನ್ ಕಲ್ಯಾಣ್ ಅವರಂತೆ ಅವರ ಅಭಿಮಾನಿಗಳು ಕೂಡ ವಿಭಿನ್ನವಾಗಿ ಯೋಚಿಸುತ್ತಾರೆ. ಇಂತಿಪ್ಪ ಪವನ್ ಸಿನಿಮಾದಲ್ಲಿ ನಟಿಸಿ ತಮ್ಮ ಕೆರಿಯರ್ ನ್ನೇ ಕೆಲವು ತಾರೆಯರು ಹಾಳು ಮಾಡಿಕೊಂಡಿದ್ದಾರೆ ಎಂದರೆ ನಂಬುತ್ತೀರಾ? ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೋಡೋಣ.

ದೇವಯಾನಿ: 1998 ರಲ್ಲಿ, ಪವನ್ ಕಲ್ಯಾಣ್ ಅವರ ಸೂಪರ್ ಹಿಟ್ ಚಲನಚಿತ್ರ ಸುಸ್ವಾಗತಂ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿದ್ದ ದೇವಯಾನಿ ಆ ನಂತರ ಎರಡ್ಮೂರು ಚಿತ್ರಗಳಿಗನ್ನಷ್ಟೇ ಮಾಡಲು ಸಾಧ್ಯವಾಯಿತು. ಸುಸ್ವಾಗತಂ ಚಿತ್ರವನ್ನುಭೀಮನೇನಿ ಶ್ರೀನಿವಾಸ ರಾವ್ ನಿರ್ದೇಶಿಸಿದರು.

ಪ್ರೀತಿ ಜಿಂಗಾನಿಯಾ: ಸೂಪರ್ ಹಿಟ್ ಸಿನಿಮಾ ತಮ್ಮುಡು ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಪ್ರೀತಿ ಜಿಂಗಾನಿಯಾ ನಾಯಕಿಯಾಗಿ ನಟಿಸಿದ್ದರು. ನಂತರ ನರಸಿಂಹನಾಯ್ಡು, ಅಧಿಪತಿ ಸಿನಿಮಾಗಳಲ್ಲಿ ನಟಿಸಿದ್ದು ನಂತರ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಸುಪ್ರಿಯಾ ಯರ್ಲಗಡ್ಡ: ಪವನ್ ಕಲ್ಯಾಣ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಉಕ್ತ ತರಿ ಆಕ್ತಾ ಬೋಯಾ. ಈ ಚಿತ್ರದಲ್ಲಿ ನಾಯಕಿಯಾಗಿ  ಸುಪ್ರಿಯಾ ನಟಿಸಿದ್ದಾರೆ. ಈ ಚಿತ್ರದ ನಂತರ ಸುಪ್ರಿಯಾ ಗುಡಚಾರಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರ ನಂತರ ಸುಪ್ರಿಯಾ ಅವರು ಎಡ್ರೆಸ್ ಇಲ್ಲದಂತೆ ಕಳೆದುಹೋದರು.

9 | Live Kannada News

ಕೀರ್ತಿ ರೆಡ್ಡಿ: ಹೀರೋ ಸುಮಂತ್ ಮಾಜಿ ಪತ್ನಿ ಕೀರ್ತಿ ರೆಡ್ಡಿ. ಅವರು ತೊಲಿಪ್ರೇಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿದ್ದಾರೆ ಮತ್ತು ಅರ್ಜುನ್ ಅವರ ಚಿತ್ರದಲ್ಲಿ ಮಹೇಶ್ ಬಾಬು ಅವರ ಸಹೋದರಿಯ ಪಾತ್ರವನ್ನೂ ನಿಭಾಯಿಸಿದ್ದರು. ಆ ನಂತರ ತೆಲುಗು ಸಿನಿಮಾದಲ್ಲಿ ನಟಿಸಿರಲಿಲ್ಲ.

ಅದಿತಿ ಗೋವಿತ್ರಿಕರ್: ತಮ್ಮುಡು ಸಿನಿಮಾದಲ್ಲಿ ಪವನ್ ಕಲ್ಯಾಣ್  ಜೊತೆ ತೆರೆ ಹಂಚಿಕೊಂಡಿದ್ದರು ಅದಿತಿ. ಲವ್ಲಿ ಪಾತ್ರದ ಮೂಲಕ ಫೇಮಸ್ ಆಗಿದ್ದ ಅದಿತಿ ಆ ನಂತರ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ.

ರೇಣು ದೇಸಾಯಿ: ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಬದ್ರಿ ಮತ್ತು ಜಾನಿ ಚಿತ್ರಗಳಲ್ಲಿ ಪವನ್ ಜೊತೆಗೆ ನಟಿಸಿದ್ದಾರೆ. ಆ ನಂತರ ಅವರು ಯಾವುದೇ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ನೇಹಾ ಒಬೆರಾಯ್: ಬಾಲು ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸಿದ್ದ ನೇಹಾ ಒಬೆರಾಯ್ ನಂತರ ಜಗಪತಿ ಬಾಬು ಜೊತೆ ಒಂದು ಸಿನಿಮಾ ಮಾಡುತ್ತಾರೆ. ಮತ್ತೆ ಅವರ ಸುದ್ದಿಯೇ ಇಲ್ಲ.

ಮೀರಾ ಚೋಪ್ರಾ: ಪವನ್ ಕಲ್ಯಾಣ್ ಅಭಿನಯದ ಬಂಗಾರಂ ಚಿತ್ರದಲ್ಲಿ ನಟಿಸಿದ್ದ ಮೀರಾ ಚೋಪ್ರಾ ಆ ನಂತರ ಎರಡ್ಮೂರು ಚಿತ್ರಗಳಲ್ಲಿ ಅಷ್ಟೇ ನಟಿಸಿ ಮತ್ತೆ ಹೇಳಹೆಸರಿಲ್ಲದಂತೇ ಮಾಯವಾದರು.

Comments are closed.