Garbha Samskara: ನಿಮ್ಮ ಮಕ್ಕಳು ಜನ್ಮತಃ ಸಂಸ್ಕಾರದಿಂದ ಕೂಡಿರಬೇಕು ಅಂದ್ರೆ  ಗಂಡ ಹೆಂಡತಿ ಈ ದಿನದಲ್ಲಿ ಒಂದಾಗಲೇಬಾರದು ಯಾವ ದಿನ ಶುಭ ಯಾವ ದಿನ ಅಶುಭ ಗೊತ್ತೇ?

Garbha Samskara: ಸನಾತನ ಧರ್ಮ (Sanatana Dharma) ದಲ್ಲಿ ಮಕ್ಕಳ (Children) ನ್ನ ಯೋಗ್ಯ ರೀತಿಯಲ್ಲಿ ಪಡೆಯುವುದರ ಬಗ್ಗೆ ಹಾಗೂ ಮಕ್ಕಳಲ್ಲಿ ಸನ್ನಡತೆ ಬೆಳೆಸುವುದರ ಬಗ್ಗೆ ಹೇಳಲಾಗಿದೆ ಪೋಷಕರು ಮಗು ಹುಟ್ಟಿದ ಮೇಲೆ ಅವರಿಗೆ ಸನ್ನಡತೆಯನ್ನು ಕಲಿಸಬೇಕು ಆದರೆ ಪೋಷಕರು ಯಾವ ಸಮಯದಲ್ಲಿ ಒಂದಾದರೆ ಆಗ ಉತ್ತಮ ಮಕ್ಕಳು ಹುಟ್ಟುತ್ತಾರೆ ಎಂಬುದರ ಬಗ್ಗೆ ಹೇಳಲಾಗಿದೆ. ಇದನ್ನೂ ಓದಿ: Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತಿದ್ದ ಈ ರಾಶಿಗಳಿಗೆ ಶನಿ ದೇವನ ಕೃಪೆ: ಇನ್ನು ಕೆಲವೇ ದಿನಗಳಲ್ಲಿ ಅದೃಷ್ಟ ಬದಲು. ಯಾರ್ಯಾರಿಗೆ ಗೊತ್ತೇ?

ಗರ್ಭ ಸಂಸ್ಕಾರದಲ್ಲಿ ಯೋಗ್ಯ ಗುಣ ಇರುವ ಮಕ್ಕಳನ್ನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಉಲ್ಲೇಖವಿದೆ. ಮಕ್ಕಳು ಗುಣ ಆಸೆ ಮೊದಲಾದವುಗಳನ್ನು ಗರ್ಭದಲ್ಲಿದ್ದಾಗಲೇ ಕಲಿಯುತ್ತಾರಂತೆ. ಆದ್ದರಿಂದ ಗರ್ಭಿಣಿ ಮಹಿಳೆ (pregnant women) ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಎಂದು ಹೇಳಲಾಗುತ್ತೆ. ಒಂದು ಜೀವವನ್ನು ಸೃಷ್ಟಿಸುವುದಕ್ಕಿಂತ ಮೊದಲು ತಾವು ಎಂತಹ ಮಗುವಿಗೆ ಜನ್ಮ ನೀಡಬೇಕು ಎಂದು ದಂಪತಿ ತಿಳಿದುಕೊಳ್ಳಬೇಕು. ಕೆಲವು ಒಳ್ಳೆಯ ದಿನ ಉತ್ತಮ ಸಮಯದಲ್ಲಿ ದಂಪತಿಗಳು ಒಂದಾದರೆ ಖಂಡಿತವಾಗಿಯೂ ಸನ್ನಡತೆಯ ಮಕ್ಕಳು ಜನಿಸುತ್ತಾರೆ ಎಂದು ಶಾಸ್ತ್ರವು ಹೇಳುತ್ತೆ. ಇದನ್ನೂ ಓದಿ:Bank Account:ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆ ಇದೆಯೇ?? RBI ನೀಡಿರುವ ಹೊಸ ಮಾರ್ಗಸೂಚಿ ನೋಡಿದರೆ, ಇಂದೇ ಅಕೌಂಟ್ ಕ್ಲೋಸ್ ಮಾಡ್ತೀರಾ!

ಶುಭ ಘಳಿಗೆ:

ಸಾಮಾನ್ಯವಾಗಿ ಮಗು ಜನಿಸುವಾಗ ಶುಭ ಗಳಿಗೆಯಲ್ಲಿ ಜನಿಸಬೇಕು ಆ ಮಗುವಿನ ನಕ್ಷತ್ರ ರಾಶಿ ಎಲ್ಲವೂ ಚೆನ್ನಾಗಿರಬೇಕು ಎಂದು ಬಯಸುತ್ತೇವೆ. ಆದರೆ ಗರ್ಭಧಾರಣೆ ಯಾಗುವ ಸಮಯ ಕೂಡ ಶುಭ ಘಳಿಗೆಯಲ್ಲಿ ಆಗಬೇಕು ಎಂಬುದು ನಿಮಗೆ ಗೊತ್ತೇ? ಸಂತಾನೋತ್ಪತ್ತಿಗಾಗಿ ಗಂಡ ಹೆಂಡತಿ ಒಳ್ಳೆಯ ದಿನ ಒಂದಾದರೆ ಮಗು ಕೂಡ ಶುಭ ಗಳಿಗೆ ರೂಪಗೊಳ್ಳುತ್ತೆ.

ಸಮಯದಲ್ಲಿ ಗರ್ಭಧಾರಣೆ ಬೇಡ

ಗರ್ಭ ಸಂಸ್ಕಾರ ಹೇಳುವಂತೆ ಗರ್ಭಧಾರಣೆ, ಆ ಮಕ್ಕಳು ಗುಣ ನಡತೆಯನ್ನ ಹೇಳುತ್ತೆ ಹಾಗಾಗಿ ಅಶುಭ ಸಮಯದಲ್ಲಿ ಗರ್ಭಧಾರಣೆ ಆಗಬಾರದು. ಅಂತಹ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮಂಗಳವಾರ ದಂಪತಿಗಳು ಒಂದಾಗಬಾರದು ಏಕೆಂದರೆ ಮಕ್ಕಳ ವಾರ ಗರ್ಭಧಾರಣೆಗೆ ಶುಭದಿನ ಅಲ್ಲ ಈ ದಿನ ಮಂಗಳ ಗ್ರಹದ ಪ್ರಭಾವ ಅಧಿಕವಾಗಿರುತ್ತದೆ ಇದರಿಂದ ಮಗುವಿನಲ್ಲಿ ಕ್ರೂರ ಮನೋಭಾವ ಬೆಳೆಯಬಹುದು. ಭವಿಷ್ಯದಲ್ಲಿ ಮಗುವಿನ ಸಾಧನೆಗೆ ಕಷ್ಟವಾಗಬಹುದು.

ಅದೇ ರೀತಿ ಶನಿವಾರ ಕೂಡ ಗರ್ಭಧಾರಣೆಗೆ ಸೂಕ್ತವಲ್ಲ ಈ ದಿನ ಶನಿ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ ಮಗು ದೈಹಿಕ ತೊಂದರೆಗಳನ್ನು ಚಿಕ್ಕ ವಯಸ್ಸಿನಿಂದಲೇ ಅನುಭವಿಸುವುದಕ್ಕೆ ಪ್ರಾರಂಭಿಸುತ್ತದೆ. ಇನ್ನು ಭಾನುವಾರ ಕೂಡ ದಂಪತಿ ಒಂದಾಗಬಾರದು ಎಂದು ಗರ್ಭ ಸಂಸ್ಕಾರ ಹೇಳುತ್ತೆ. ಭಾನುವಾರ ಸೂರ್ಯದೇವನ ಆರಾಧನೆ ಮಾಡಬೇಕು ಈ ದಿನ ಸೂರ್ಯದೇವನ ಪೂಜೆಗಷ್ಟೇ ಮೀಸಲು ಈ ದಿನ ಗರ್ಭಧಾರಣೆಯಾದರೆ ಮಗುವಿನಲ್ಲಿ ಕೋಪ ಅನಾರೋಗ್ಯ ಸಮಸ್ಯೆ ಹಾಡಬಹುದು

ಗರ್ಭಧಾರಣೆಗೆ ಶುಭ ದಿನ:

ಇನ್ನು ಸೋಮವಾರ ಬುಧವಾರ ಗುರುವಾರ ಹಾಗೂ ಶುಕ್ರವಾರ ಗರ್ಭಧಾರಣೆಗೆ ತುಂಬಾನೇ ಪ್ರಶಸ್ತವಾದ ದಿನ ಎಂದು ಹೇಳಲಾಗುತ್ತೆ. ಆದರೆ ನೆನಪಿಡಿ ಗ್ರಹಣ ಅಮಾವಾಸ್ಯೆಯ ದಿನಗಳಲ್ಲಿ ಕೂಡ ಮಗುವಿಗಾಗಿ ಪ್ರಯತ್ನಿಸಬಾರದು. ಇನ್ನು ಗರ್ಭಧಾರಣೆ ಮಾಡಲು ಗಂಡ ಹೆಂಡತಿ ಒಂದಾಗುವುದಾದರೆ ಪರಸ್ಪರ ಪ್ರೀತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳಬೇಕು. ಮುಟ್ಟು, ಕಾಯಿಲೆ, ಗರ್ಭಾವಸ್ಥೆ ಇಂತಹ ಸಂದರ್ಭದಲ್ಲಿ, ಜೊತೆಗೆ ಆಹಾರ ಸೇವಿಸಿದ ಕೂಡಲೇ ಗಂಡ ಹೆಂಡತಿ ಒಂದಾಗುವುದು ಸೂಕ್ತವಲ್ಲ.

Comments are closed.