Actress Meena Second Marriage: ನನ್ನ ಮದುವೆ ಮಾಡಿಕೊ ಎಂದು ಮೀನಾ ರವರ ಹಿಂದೆ ಬೀಳುತ್ತಿರುವ ಸ್ಟಾರ್ ನಟ. ಎರಡನೇ ಮದುವೆಗೆ ಸಿದ್ಧರಾಗುತ್ತಾರಾ ಮೀನಾ??

Actress Meena Second Marriage: ನಟಿ ಮೀನಾ (Meena) ಒಂದು ಕಾಲದಲ್ಲಿ ತೆಲುಗು (Telugu) ಮತ್ತು ತಮಿಳು (Tamil) ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ (Star Heroine)  ಆಗಿದದ್ವರು. ಅಷ್ಟೇ ಅಲ್ಲ ಕನ್ನಡ (Kannada) ದಲ್ಲಿಯೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಸ್ಪುರದ್ರೂಪ ನಟಿ. ಸುಮಾರು 80 ರದಶಕದಲ್ಲಿ ನಟಿ ಸೌಂದರ್ಯ (Sowndarya) ಳನ್ನು ಬಿಟ್ತರೆ ಮೀನಾಗೆ ಎಲ್ಲಾ ಕಡೆ ಕ್ರೇಜ್ ಇತ್ತು. ಮೀನಾ ತೆಲುಗು ಮಾತ್ರವಲ್ಲದೆ ತಮಿಳಿನಲ್ಲೂ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ.

ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಮೀನಾ ಮದುವೆ (Marriage) ಯಾದರು. ಸಿನಿಮಾದಿಂದ ನಂತರ ದೂರ ಉಳಿದರು.  ಮಕ್ಕಳು ದೊಡ್ಡವರಾದ ಮೇಲೆ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟ ಮೀನಾ ಹಲವು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೃಶ್ಯಂ ಚಿತ್ರದ ಮೂಲಕ ಮೀನಾ ಮತ್ತೊಮ್ಮೆ ಪ್ರೇಕ್ಷಕರ ಮನ ಸೆಳೆದರು. ಇತ್ತೀಚೆಗಷ್ಟೇ ಆಕೆಯ ಪತಿ ಹಠಾತ್ತನೆ ಸಾವನ್ನಪ್ಪಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.

ಹೌದು, ಮೀನಾ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿದ್ದಾರೆ. ಅವರಿಗೆ ಅಗಾಧ ಆಘಾತವಾಗಿದೆ. ಈಗಾಗಲೇ ಮೀನಾ ಅವರಿಗೆ ಅನೇಕ ಸೆಲೆಬ್ರಿಟಿಗಳು ಸಾಂತ್ವನ ಕೂಡ ಹೇಳಿದ್ದಾರೆ ಆದರೆ ಪತಿ ಇಲ್ಲದ ಕೊರತೆಯನ್ನು ಯಾರೂ ತುಂಬಲು ಸಾಧ್ಯವಿಲ್ಲ ಅಲ್ವೇ? ಆದರೆ, ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡಿದ್ದರಿಂದ ಮಕ್ಕಳ ಹಿತದೃಷ್ಟಿಯಿಂದ ಮೀನಾ ಕುಟುಂಬಸ್ಥರು ಮೀನಾಳಿಗೆ ಮತ್ತೊಂದು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದಾರೆ.  ಅವರು ಎರಡನೇ ಬಾರಿಗೆ ಮದುವೆಯಾಗಲು ಈಗಾಗಲೇ ಒಪ್ಪಿದ್ದಾರೆ ಎನ್ನುವ ಸುದ್ದಿಯೂ ವರದಿಯಾಗಿವೆ. ಆದರೆ ಇದು ಕೇವಲ ಗಾಸಿಪ್ ಅಷ್ಟೇ ಅಂತ ಈಗಗಲೇ ಮೀನಾ ಸ್ಪಷ್ಟಪಡಿಸಿದ್ದಾರೆ. ಆದ್ರೆ.. ಮೀನಾ ಫ್ಯಾಮಿಲಿಗೆ ಹತ್ತಿರವಾಗಿರುವ ಸ್ಟಾರ್ ಸೀನಿಯರ್ ಹೀರೋ ಒಬ್ಬರು ಆಕೆಯನ್ನು ಮದುವೆಯಾಗಲು ರೆಡಿಯಾಗಿದ್ದಾರಂತೆ ಯಾರೂ ಗೊತ್ತಾ?

ಆ ಸ್ಟಾರ್ ನಟ ಯಾರು?

ಮೀನಾ ಅವರನ್ನು ಎರಡನೇ ಮದುವೆಯಾಗಲು ಕೆಲವರು ಹಾತೊರೆಯುತ್ತಿದ್ದಾರೆ ಎಂಬ ವರದಿಗಳಿವೆ. ಇನ್ನು ಒಬ್ಬ ಸ್ಟಾರ್ ನಟ ಮೀನಾಳನ್ನು ಮದುವೆಯಾಗಲು ಇಚ್ಚಿಸಿದ್ದು, ಈಗಾಗಲೇ ಮದುವೆಯಾಗಿ ಡೈವರ್ಸ್ ಕೂಡ ತೆಗೆದುಕೊಂಡಿದ್ದಾನಂತೆ. ಈ ನಾಯಕನಿಗೂ ಮೊದಲಿನಿಂದಲೂ ಮೀನಾ ಇಷ್ಟವಂತೆ. ಈ ಹಿನ್ನಲೆಯಲ್ಲಿ ಮೀನಾ ಕುಟುಂಬಸ್ಥರಿಗೂ ಈ ವಿಷಯ ತಿಳಿಸಿದ್ದಾನೆ. ಆದರೆ ಮೀನಾ ಈಗಾಗಲೇ ಎರಡನೇ ಮದುವೆ ಬೇಡ ಎಂದು ಹೇಳಿದ್ದಾರೆ. ಆದರೆ, ನಾಯಕ ಮೀನಾಳನ್ನು ಬಿಡುತ್ತಿಲ್ಲ ಎಂದು ವರದಿಯಾಗಿದೆ. ಆ ಹೀರೋ ಯಾರೆಂದು ರೀವಿಲ್ ಆಗಿಲ್ಲ. ಆತನನ್ನು  ನಿಜವಾಗಿಯೂ ಮೀನಾ ಮದುವೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

Comments are closed.