Man Cheated his wife:  ಹತ್ತಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಎರಡನೇ ವಾರಕ್ಕೆ ಗಂಡನ ಪರಿಸ್ಥಿತಿ ನೋಡಿ ಶಾಕ್ ಆದ ಹೆಂಡತಿ. ಏನಾಗಿದೆ ಗೊತ್ತೇ??

Man Cheated his wife:  ಮದುವೆ (Marriage) ಎನ್ನುವುದು ಹಲವರ ಕನಸು (Dream) . ಅದರ ಬಗ್ಗೆ ಅಗಾಧವಾದ ನಿರೀಕ್ಷೆ ಇರುತ್ತೆ ಜನರಲ್ಲಿ.  ಅದರಲ್ಲೂ ಮಹಿಳೆಯರಿಗೆ (Women) ಮದುವೆ ಅನ್ನೋದು ಬಹಳ ವಿಶೇಷ. ಮಹಿಳೆಯರು ಸಾಮಾನ್ಯವಾಗಿ ತನ್ನನ್ನು ವಿಶೇಷವಾಗಿ ಪ್ರೀತಿಸುವ ಸಂಗಾತಿ (Partner) ಯನ್ನು ಹುಡುಕುತ್ತಿರುತ್ತಾರೆ. ಇನ್ನು ಮದುವೆ ಸಂಬಂಧ ಎನ್ನುವುದು ಪ್ರಪಂಚದಾದ್ಯಂತ ಒಂದೇ ರೀತಿಯಾಗಿರುತ್ತದೆ. ವ್ಯಕ್ತಿ ಅಥವಾ ಬದುಕುವ ರಿತಿ ಬೇರೆಯಾಗಿರಬಹುದು ಅಷ್ಟೇ. ಆದರೆ ವಿವಾಹದ ಭಾವನೆ ಎಲ್ಲರಲ್ಲಿಯು ಒಂದೇ ತೆರನಾದ್ದು!

 ಇತ್ತೀಚೆಗೆ, ಫ್ರೆಂಚ್ (French)  ಮಹಿಳೆಯೊಬ್ಬರು ತಮ್ಮ ಸಂಗಾತಿ ತನಗೆ ವಿಶೇಷ ರೀತಿಯಲ್ಲಿ ಪ್ರಪೋಸ್ (Propose) ಮಾಡಿದ್ದಾರೆ ಎಂದು ವಿಡಿಯೋ (Video) ಮೂಲಕ ತಿಳಿಸಿದ್ದಳು. ಆತನ ಪ್ರಪೋಸ್ ಮಾಡುವ ರೀತಿಯನ್ನೇ ನೋಡಿ ಆಕೆ ಫಿದಾ ಆಗಿ ಕೂಡಲೇ ಆ ವ್ಯಕ್ತಿಯನ್ನು ಮದುವೆಯಾಗಲು ಕೂದ ಒಪ್ಪಿಕೊಂಡಳು. ಆದರೆ ಮದುವೆಯಾದ ಕೂಡಲೇ ಆ ಮಹಿಳೆಗೆ ದೊಡ್ಡ ಶಾಕ್ ಕಾದಿತ್ತು. ಏನು ಗೊತ್ತಾ?

ಡಿಸ್ನಿಲ್ಯಾಂಡ್ ಪ್ಯಾರಿಸ್ ಮುಂದೆ ಹುಡುಗ ಪ್ರಪೋಸ್ ಮಾಡಿದ್ದ!

ಆಕೆಯ ಹೆಸರು ಸೆಲ್ಸಿ ಜೋನ್ಸ್, ಪ್ಯಾರಿಸ್‌ನ ಡಿಸ್ನಿಲ್ಯಾಂಡ್ ನ ಎದುರು ನನ್ನ ಗೆಳೆಯ ನನಗೆ ಸ್ಪೆಷಲ್ ಆಗಿ ಪ್ರಪೋಸ್ ಮಾಡಿದ್ದನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಳು. ಈ ಜಗತ್ತಿನಲ್ಲಿ ನೀನೇ ಅತ್ಯಂತ ಸುಂದರ ಹುಡುಗಿ, ನಾನು ನನ್ನ ಇಡೀ ಜೀವನವನ್ನು ನಿನ್ನೊಂದಿಗೆ ಕಳೆಯಲು ಬಯಸುತ್ತೇನೆ ಎಂದು ಆತ ಪ್ರಪೋಸ್ ಮಾಡುವಾಗ ಹೇಳಿ ಆಕೆಯನ್ನು ಇಂಪ್ರೆಸ್ ಮಾಡಿದ್ದ. “ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನೀನು ನನ್ನ ಜೀವನದಲ್ಲಿ ಬಂದಿದ್ದನ್ನು ನಾನು ಅದೃಷ್ಟ ಎಂದು ಭಾವಿಸುತ್ತೇನೆ”. ಎಂದು ಹೇಳಿದ್ದಳು. ಆದರೆ ಕೋವಿಡ್‌ನಿಂದಾಗಿ ಅವರ ಮದುವೆ ಮುಂದೂಡಲ್ಪಟ್ಟಿತು. ನಂತರ ಮತ್ತೆ ಇಬ್ಬರೂ ವಿವಾಹವಾಗಿ ಸಾಂಸಾರ ಆರಂಭಿಸಿದರು.

ಜಗತ್ತಿನಲ್ಲಿ ನಾನೆ ಮೂರ್ಖ ಮಹಿಳೆ ಎಂದು ಹೇಳಿಕೊಂಡ ಸೆಲ್ಸಿ:

ಹೌದು,, ಮದುವೆಯಾದ ನಂತರ ಸೆಲ್ಸಿ ಜೀವನ ಸಂಪೂರ್ಣ ಬದಲಾಯ್ತು. ಆಕೆಯನ್ನು ಸ್ಪೆಷಲ್ ಆಗಿ ಪ್ರಪೋಸ್ ಮಾಡಿ ನೀನೆ ನನ್ನ ಜೀವದ ಗೆಳತಿ ಎಂದಿದ್ದ ಹುಡುಗ ಒಮ್ಮೆಲೆ ನಾನು ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಹೇಳುತ್ತಾನೆ. ಇದರಿಂದ ಸೆಲ್ಸೆಗೆ ಆಘಾತವಾಗುತ್ತದೆ. ಹೀಗೆ ಯಾರನ್ನು ನಂಬಿದ್ದೆನೋ ಆತನಿಂದಲೇ ನಂಬಿಕೆ ದ್ರೋಹವಾಗುತ್ತದೆ “ ನಾನು ಇನ್ನು ಯಾರನ್ನೂ ಮದುವೆಯಾಗುತ್ತೇನೆ ಎಂದು ನನಗೆ ಅನ್ನಿಸುವುದಿಲ್ಲ. ನಾನು ಸಂಪೂರ್ಣ ಮೋಸ ಹೋಗಿದ್ದೇನೆ. ಈ ಪ್ರಪಂಚದಲ್ಲಿ ನನ್ನಷ್ಟು ಮೂರ್ಖಳು ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ” ಎಂದು ನೋವನ್ನು ವ್ಯಕ್ತಪಡಿಸುತ್ತಾಳೆ ಸೆಲ್ಸಿ.

ವೀಡಿಯೊ ನೋಡಿ ಸಾತ್ವಾನ ಹೇಳಿದ ನೆಟ್ಟಿಗರು!

ಸೆಲ್ಸಿ ತನ್ನ ಲೈಫ್ ಸ್ಟೋರಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಅವರ ವೀಡಿಯೋಗೆ ಕಾಮೆಂಟ್ ಮಾಡಿ, ಅನೇಕರು ಅದೇ ಘಟನೆ ನನ್ನ ಜೀವನದಲ್ಲೂ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ. ಒಬ್ಬ ವ್ಯಕ್ತಿ “ನನಗೆ 36 ವರ್ಷ, ಈಗ ನಾನು  ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ನಾನು ಮತ್ತೆ ಬದುಕಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ನಾನು ಕೂಡ ಈ ಹಂತವನ್ನು ದಾಟಿದ ಕಾರಣ ತುಂಬಾ ನೋವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವು ನೆಟ್ಟಿಗರು ಸೆಲ್ಸಿಯನ್ನು ಸಮಾಧಾನಪಡಿಸಿದ್ದಾರೆ. “ಒಬ್ಬ ವ್ಯಕ್ತಿಯು ನಿಮಗೆ ದ್ರೋಹ ಮಾಡಿದರೆ, ನೀವು ಸಂತೋಷವಾಗಿರುವುದನ್ನೇ ಮರೆಯಬೇಕು ಎಂದು ಅರ್ಥವಲ್ಲ”. ಎಂಬುದಾಗಿ ಸಮಾಧಾನದ ಮಾತುಗಳನ್ನು ಕಮೆಂಟ್ ಮೂಲಕ ಆಡಿದ್ದಾನೆ. ಎಂದು ಹೇಳಿದರು. “ಈ ಜಗತ್ತಿನಲ್ಲಿ ಸಂತೋಷವಾಗಿರಲು ನಿಮಗೆ ಸಂಪೂರ್ಣ ಹಕ್ಕಿದೆ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ನೀವು ಇತರರನ್ನು ನಂಬಬಹುದು. ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಯಾರಾದರೂ ಉತ್ತಮ ವ್ಯಕ್ತಿ ಬರುತ್ತಾರೆ  ನಿಮ್ಮ ಇಡೀ ಜೀವನವನ್ನು ನೀವು ಅವನೊಂದಿಗೆ ಸಂತೋಷದಿಂದ ಕಳೆಯುತ್ತೀರಿ ಎಂದು ನಾನು ಭಾವಿಸುತ್ತೇನೆ”. ಎಂಬುದಾಗಿಯೂ ಆತ ಕಮೆಂಟ್ ಮಾಡಿದ್ದಾನೆ. ಒಟ್ಟಿನಲ್ಲಿ ಜೀವನದಲ್ಲಿ ಸೋಲು ಸಹಜ. ಅದರಿಂದ ಆಚೆ ಬರುವುದಕ್ಕೆ ನಮ್ಮಲ್ಲಿ ನಮಗೆ ನಂಬಿಕೆ ಇದ್ರೆ ಸಾಕು. ಅಲ್ವೇ!

Comments are closed.