Viral Video: ರಸ್ತೆಯ ಬದಿಯಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿ ಬಂದ ಶ್ವಾನ; ಆ ಕ್ಷಣಕ್ಕೆ ಅಲ್ಲಿ ನಡೆದಿದ್ದೇನು ಗೊತ್ತೇ! ವೈರಲ್ ಆಯ್ತು ವಿಡಿಯೋ!

Viral Video: ಸಾಕಷ್ಟು ಬಾರಿ ಪಾಲಕರಿಗೆ ಈ ಬಗ್ಗೆ ಎಚ್ಚರಿಕೆಯನ್ನು ಕೊಡಲಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಸಾಕಷ್ಟು ಜನ ಈ ವಿಷಯದ ಬಗ್ಗೆ ಮಾತನಾಡುತ್ತಾರೆ ಇತ್ತೀಚಿಗೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಕೇವಲ ನಮ್ಮ ರಾಜ್ಯದಲ್ಲಿಯೂ ಪಕ್ಕದ ರಾಜ್ಯದಲ್ಲಿಯೂ ಅಲ್ಲ ದೇಶಾದ್ಯಂತ ನಾಯಿಗಳ ಕಾಟ ಹೆಚ್ಚಾಗುತ್ತದೆ. ಹಾಗಾಗಿ ಬೀದಿಯಲ್ಲಿ ನಿಮ್ಮ ಪುಟ್ಟ ಮಕ್ಕಳನ್ನ ಆಟವಾಡುವುದಕ್ಕೆ ಬಿಡುವುದಕ್ಕೂ ಮೊದಲು ಒಮ್ಮೆ ಸುತ್ತಲೂ ಗಮನಿಸಿ ಎಂದು ಪ್ರತಿಯೊಬ್ಬರು ಮಾಹಿತಿ ನೀಡುತ್ತಿರುತ್ತಾರೆ. ಆದರೆ ಈ ಬಗ್ಗೆ ಹೆಚ್ಚು ಜನ ತಲೆ ಕೆಡಿಸಿಕೊಳ್ಳುವುದಿಲ್ಲ ಹೀಗೆ ಕೆಲವರ ಬೇಜವಾಬ್ದಾರಿತನ ಪುಟ್ಟ ಮಕ್ಕಳ ಜೀವನವನ್ನೇ ಆತಂಕಕ್ಕೆ  ನೂಕಿ ಬಿಡುತ್ತೆ.

ಹೌದು ಇಂತಹ ಒಂದು ಹೃದಯ ವಿದ್ರಾವಕ ಘಟನೆ ನಡೆದಿರುವುದು ಸೂರತ್ ನಗರದ ಪುಲ್ವಾಡ ಪ್ರದೇಶದಲ್ಲಿರುವ ವರಚ್ಛಾ ವಲಯದ ಸ್ವ್ಯಾನ್ ಸೊಸೈಟಿ ಬಳಿ. ಸುಮಾರು 33 ಸೆಕೆಂಡ್ ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ ಈ ವಿಡಿಯೋದಲ್ಲಿ, ಒಂದು ಮಗು ತನ್ನ ಮನೆಯ ಮುಂದೆ ಆಟ ಆಡಿಕೊಂಡಿದೆ ಮತ್ತೊಂದು ಕಡೆಯಿಂದ ನಾಯಿ ಬರುತ್ತಿರುವುದನ್ನು ನೋಡಿ ಮಗು ಅದರ ಕಡೆಗೆ ಓಡುತ್ತೆ. ನಾಯಿಯನ್ನು ಪ್ರೀತಿಯಿಂದ ಆಟವಾಡಲು ಕರೆಯಲು ಹೋದ ಆ ಹುಡುಗಿಗೆ ಕಾದಿದ್ದು  ಶಾಕ್. ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವ ಅಷ್ಟರಲ್ಲಿ ನಾಯಿ ಆಕೆಯ ಮೇಲೆ ಇರುತ್ತದೆ. ಪಾಲಕಿಗೆ ನಿಂತುಕೊಳ್ಳಲು ಓಡಿ ಹೋಗಲು ಆಗದ ರೀತಿಯಲ್ಲಿ ಒಂದೇ ಸಮನೆ ನಾಯಿ ಆ ಮಗುವನ್ನು ನೆಲದಲ್ಲಿ ಮಲಗಿಸಿ ಹೊರಚುತ್ತೆ ಕಚ್ಚಾಡುತ್ತೆ ಬಾಲಕಿಯ ಮುಖದ ಮೇಲೆಲ್ಲಾ ನಾಯಿ ಕಚ್ಚಿದ ಕಲೆ ಆಗಿವೆ ಎಂದು ವರದಿಯಾಗಿದೆ.

ನಾಯಿಯ ಕಚ್ಚಾಟ ಮಗುವಿನ ಅರಚಾಟ!

ಆ ಮಗು ಕಿರುಚಿಕೊಳ್ಳುತ್ತಿದ್ದರು ಸುತ್ತಮುತ್ತ ಯಾರು ಇರುವುದಿಲ್ಲ ಆದರೆ ನಾಯಿ ಮಾತ್ರ ಆ ಮಗುವನ್ನು ಬಿಡುವುದೇ ಇಲ್ಲ ಕೊನೆಗೆ ಮಗುವಿನ ಕೇಳಿ ಆಕೆಯ ತಾಯಿ ಓಡಿ ಬರುತ್ತಾಳೆ ಕೈಯಲ್ಲಿ ನೀರನ್ನ ಹಿಡಿದು ಬಂದ ಆಕೆ ನಾಯಿಯತ್ತ ನೀರನ್ನು ಎರಚುತ್ತಾಳೆ ಆಗ ನಾಯಿ ಮಗುವನ್ನ ಬಿಡುತ್ತದೆ ಸ್ವಲ್ಪ ಸೈಡಲ್ಲಿ ನಿಂತು ಮತ್ತೆ ಮಗುವಿಗೆ ಕಚ್ಚುವುದಕ್ಕಾಗಿ ಮಗುವನ್ನು ಹೇಗೋ ಸೇವ್ ಮಾಡಿಕೊಂಡು ಮನೆಗೆ ಕರೆತಂದಿದ್ದಾರೆ.

ಮಗುವಿಗೆ ನಾಯಿ ತೀರ ಕಚ್ಚಿದ್ದು ಆಕೆಗೆ ಆಪರೇಷನ್ ಆಗಬೇಕು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ತಾಯಿ ಸರಿಯಾದ ಸಮಯಕ್ಕೆ ಬಂದು ಆ ಮಗುವನ್ನ ಕಾಪಾಡದೇ ಇದ್ದರೆ ಖಂಡಿತವಾಗಿಯೂ ಆಕೆಯ ಜೀವವನ್ನು ತಿಂದುಬಿಡುತ್ತಿತ್ತು ಆ ಕ್ರೂರ ನಾಯಿ. ನಮ್ಮಲ್ಲಿ ನಾಯಿಯನ್ನು ಪ್ರೀತಿಸುವ ಅದೆಷ್ಟೋ ಜನರಿದ್ದಾರೆ ಹಾಗೆಯೇ ಮನುಷ್ಯರ ಜೊತೆಗೆ ಅತ್ಯಂತ ಪ್ರೀತಿಯಿಂದ ಇರುವ ನಾಯಿಗಳು ಕೂಡ ಇವೆ, ಆದರೂ ನಾವು ಕೇರ್ ಮಾಡದೆ ಇದ್ರೆ ಇಂತಹ ಬೀದಿನಾಯಿಗಳು ಖಂಡಿತ ಮಕ್ಕಳ ಜೀವಕ್ಕೆ ಅಪಾಯ ತರಬಹುದು ಎಚ್ಚರ.

Comments are closed.