Anil Kumble: ಮದುವೆಯಾಗಿ ಒಂದು ಮಗು ಇರುವ ಮಹಿಳೆಯನ್ನೇ ಅನೀಲ್ ಕುಂಬ್ಳೆ ಮದುವೆಯಾಗುತ್ತಾರೆ ಅಂದ್ರೆ ಅದಕ್ಕೊಂದು ಕಾರಣ ಇರಲೇ ಬೇಕು ಅಲ್ವಾ? ಏನು ಗೊತ್ತಾ ಆ ರೀಸನ್?!

Anil Kumble: ಆತna ಚಂಡೆಸೆತ ರೀತಿಗೆ ಮರುಳಾಗದವರೇ ಇಲ್ಲ.. ಭಾರತವೇ ಏಕೆ ಪ್ರಂಪಂಚವೇ ಅವರ ಬೌಲಿಂಗ್ (Bowling) ರೀತಿಯನ್ನು ಕೊಂಡಾಡಿದೆ. ಅವರು ಬೇರೆ ಯಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ಅನಮ್ಮ ಹೆಮ್ಮೆಯ ಸ್ಟಾರ್ ಕ್ರಿಕೆಟಿಗ (Star Cricketer), ಬೌಲಿಂಗ್ ಮಾಂತ್ರಿಕ ಅನೀಲ್ ಕುಂಬ್ಳೆ!

ಅನೀಲ್ ಕುಂಬ್ಳೆ ಅವರು ಮೊದಲನೆಯದಾಗಿ ನಮ್ಮ ಕನ್ನಡದವರು (Kannadiga) )ಎನ್ನುವುದು ನಮ್ಮ ಹೆಮ್ಮೆ. ಅನೀಲ್ ಕುಂಬ್ಳೆ ಅವರು ಕನ್ನಡ ಭಾಷೆಯನ್ನು ಬಹಳ ಸುಂದರವಾಗಿ ಹಾಗೂ ಸ್ವಚ್ಛವಾಗಿ ಮಾತನಾಡುತ್ತಾರೆ. ಕನ್ನಡಿಗರಾಗಿ ವಿಶ್ವಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಿವೃತ್ತಿಯ ನಂತರವೂ ಭಾರತೀಯ ತಂಡದ ಕೋಚ್ (Coach)  ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅನೀಲ್ ಕುಂಬ್ಳೆ ಅವರು ಆಟ ಆಡುವಾಗಲು ಅಷ್ಟೆ ಹಲವಾರು ಸಾಧನೆ ಮಾಡಿದ್ದಾರೆ. ಒಂದೇ ಪಂದ್ಯದಲ್ಲಿ 10 ವಿಕೇಟ್ ಗಳನ್ನು ಉರುಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕವೇ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇಂತಹ ಸಾಧಕ ಅನೀಲ್ ಕುಂಬ್ಳೆ ಅವರು ಮದುವೆ ಆಗಿದ್ದು, ವಿಚ್ಚೇದಿತ ಮಹಿಳೆಯನ್ನು. ಈ ಕಥೆ ಬಹಳ ರೋಚಕವಾಗಿದ್ದು, ಅದನ್ನು ಕೇಳಿದರೆ ನೀವು ಕೂಡ ಕುಂಬ್ಳೆಯವರ ಬಗ್ಗೆ ಹೆಮ್ಮೆ ಪಡುತ್ತೀರಿ. ಇದನ್ನೂ ಓದಿ: Girls are afraid of these things: ಪ್ರತಿ ಹುಡುಗಿಯರು, ಈ ಐದು ವಿಚಾರಗಳಿಗೆ ಗಡ ಗಡ ಎಂದು ನಡುಗುತ್ತಾರೆ, ಜೀವನದಲ್ಲಿ ಇರುವುದು ಈ ಐದು ಭಯ ಮಾತ್ರ!

ಯಾರು ಅನಿಲ್ ಕುಂಬ್ಳೆ ಪತ್ನಿ?

ಅನೀಲ್ ಕುಂಬ್ಳೆ ಅವರ ಪತ್ನಿಯ ಹೆಸರು ಚೇತನಾ ರಾಮತೀರ್ಥ ಎಂದು. ಅವರು ಮೈಸೂರಿನವರು. ಇವರಿಗೆ 1986ರಲ್ಲಿ ಮೈಸೂರಿನಲ್ಲಿ ಉದ್ಯಮಿ ಕುಮಾರ್ ವಿ. ಜಾಗಿದಾರ್ ಅವರನ್ನು ವಿವಾಹವಾಗಿದ್ದರು. ಕುಮಾರ್ ಅವರು ಉದ್ಯಮಿ ಜೊತೆಗೆ ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. 1994ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸುತ್ತದೆ. ಈ ಮಗುವಿಗೆ ಅರುಣಿ ಎಂದು ಹೆಸರಿಡಲಾಗುತ್ತದೆ. ಇದಾದ ಬಳಿಕ ದಾಂಪತ್ಯದಲ್ಲಿ ಬಿರುಕು ಆರಂಭವಾಗುತ್ತದೆ. ಇನ್ನೇನು ಒಂದಾಗಿ ಇರಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ. ಅಲ್ಲಿ ಇವರಿಬ್ಬರಿಗೂ ವಿಚ್ಚೇದನ ಸಿಗುತ್ತದೆ. ವಿಚ್ಚೇದನದ ನಂತರ ಚೇತನಾ ಅವರು ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಕುಮಾರ್ ಅವರು ತಮ್ಮ ಮಗಳು ತಮಗೆ ಬೇಕು ಎಂದು ಕೋರ್ಟಿನಲ್ಲಿ ಪ್ರಕರಣ ದಾಖಲಿಸುತ್ತಾರೆ. ಈ ಹೋರಾಟ ನಡೆಯುತ್ತಲೇ ಇರುತ್ತದೆ.

ಚೇತನಾ ಜೊತೆ ಕುಂಬ್ಳೆ ಭೇಟಿ:

ಚೇತನಾ ಅವರು ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಅನೀಲ್ ಕುಂಬ್ಳೆ ಅವರು ಅಲ್ಲಿಗೆ ಹೋದಾಗ ಚೇತನಾ ಅವರ ಪರಿಚಯವಾಗುತ್ತದೆ. ನಂತರ ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಈ ವೇಳೆ ಅನೀಲ್ ಕುಂಬ್ಳೆ ಅವರಿಗೆ ಚೇತನಾ ಅವರ ಪೂರ್ಣ ವಿಚಾರ ತಿಳಿಯುತ್ತದೆ. ಆಗಲೇ ಅನೀಲ್ ಕುಂಬ್ಳೆ ಅವರು ನಿರ್ಧಾರ ಮಾಡುತ್ತಾರೆ ನಾನು ಚೇತನಾ ಅವರಿಗೆ ಸಹಾಯ ಮಾಡಬೇಕು. ಅವರ ಬೆಂಬಲಕ್ಕೆ ನಿಲ್ಲಬೇಕು. ಅವರನ್ನು ವಿವಾಹ ಆಗಬೇಕು ಎಂದು. ಚೇತನಾ ಅವರಿಗೂ ಅನೀಲ್ ಕುಂಬ್ಳೆ ಅವರ ಮೇಲೆ ಪ್ರೀತಿ ಆಗಿರುತ್ತದೆ. ಆದರೆ ಅವರಿಗೆ ಈ ಸಂಬಂಧಗಳಲ್ಲಿ ಅಷ್ಟೊಂದು ಗೌರವ ಇಲ್ಲವಾಗಿರುವುದರಿಂದ ಹೇಳಿಕೊಂಡಿರುವುದಿಲ್ಲ. ಒಂದು ದಿನ ಅನೀಲ್ ಕುಂಬ್ಳೆ ಅವರು ಚೇತನ ಅವರನ್ನು ಭೇಟಿಯಾಗಿ ಪ್ರಪೋಸ್ ಮಾಡುತ್ತಾರೆ. ಆಗ ಚೇತನಾ ಅವರು ತಮ್ಮ ಕಥೆಯನ್ನು ಹೇಳುತ್ತಾರೆ. ತಮಗೆ ಮದುವೆ ಎನ್ನುವುದರ ಮೇಲೆ ನಂಬಿಕೆಯೇ ಇಲ್ಲ. ಆದ್ದರಿಂದ ನಾನು-ನೀವು ಹೀಗೆಯೇ ಸ್ನೇಹಿತರಾಗಿಯೇ ಇದ್ದುಬಿಡೋಣ ಎಂದು ಹೇಳುತ್ತಾರೆ. ಅದಕ್ಕೆ ಅನೀಲ್ ಕುಂಬ್ಳೆ ಅವರು ಒಪ್ಪುವುದಿಲ್ಲ. ಚೇತನಾ ಅವರನ್ನು ಒಪ್ಪಿಸಿ ಮದುವೆ ಆಗುತ್ತಾರೆ.

ಕುಂಬ್ಳೆ ಚೇತನಾ ದಂಪತಿಗೆ ಮೂರು ಮಕ್ಕಳು:

ಮದುವೆ ಆದ ಮೇಲೂ ಅನೀಲ್ ಕುಂಬ್ಳೆ ಅವರು ಅರುಣಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವಳನ್ನೇ ತಮ್ಮ ಹಿರಿಯ ಪುತ್ರಿ ಎಂದು ಭಾವಿಸುತ್ತಾರೆ. ಅನೀಲ್ ಕುಂಬ್ಳೆ ಹಾಗೂ ಚೇತನಾ ದಂಪತಿಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೂ ಇಂದಿಗೂ ಅನೀಲ್ ಕುಂಬ್ಳೆ ಅವರು ಅರುಣಿ ಅವರನ್ನು ಹಿರಿಯ ಮಗಳು ಎಂದೇ ಭಾವಿಸಿದ್ದಾರೆ. ಅದೇ ರೀತಿ ತಂದೆಯಾಗಿ ನಡೆದುಕೊಳ್ಳುತ್ತಿದ್ದಾರೆ.

Comments are closed.