Girls are afraid of these things: ಪ್ರತಿ ಹುಡುಗಿಯರು, ಈ ಐದು ವಿಚಾರಗಳಿಗೆ ಗಡ ಗಡ ಎಂದು ನಡುಗುತ್ತಾರೆ, ಜೀವನದಲ್ಲಿ ಇರುವುದು ಈ ಐದು ಭಯ ಮಾತ್ರ!

Girls are afraid of these things: ಸ್ನೇಹಿತರೆ ಸಾಮಾನ್ಯವಾಗಿ ಹುಡುಗರಿಗೆ ಹೋಲಿಸಿದರೆ ಹುಡುಗಿಯರು (compared to boys Girls are more afraid) ಈ ಕೆಲವು ವಿಚಾರಗಳಲ್ಲಿ ತುಂಬಾನೇ ಭಯಪಟ್ಟುಕೊಳ್ಳುತ್ತಾರೆ. ಹುಡುಗರಿಗಿಂತ ಹೆಚ್ಚಾಗಿ ಸಣ್ಣಪುಟ್ಟ ವಿಷಯಗಳಿಗೆ ಹೆದರುತ್ತ, ಅದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ಹುಡುಗಿಯರು. ಹಾಗಾದ್ರೆ ಹುಡುಗಿಯರು ಹೆದರಿಕೊಳ್ಳುವ ಸಣ್ಣಪುಟ್ಟ ವಿಚಾರಗಳಿಗೆ ಭಯಪಟ್ಟುಕೊಳ್ಳುವ ವಿಷಯಗಳು ಯಾವುವು ನೋಡೋಣ ಬನ್ನಿ.

ಪೋಷಕರಿಂದ ದೂರವಾಗುವ ಭಯ:

ಹುಡುಗಿಯರು ತಂದೆ ತಾಯಿಯನ್ನು ಬಿಟ್ಟು ಇರುವುದಕ್ಕೆ ಬಯಸುವುದಿಲ್ಲ ಕೆಲವರಿಗಂತು ಹೋಮ್ ಸಿಕ್ನೆಸ್ (Home Sickness) ಎನ್ನುವುದು ಜಾಸ್ತಿಯೇ ಇರುತ್ತೆ ಹಾಗಾಗಿ ಮನೆ ಬಿಟ್ಟು ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಬಂದರೆ ಅಥವಾ ಉದ್ಯೋಗ ಅರಸಿ ಬಂದರೆ ಮತ್ತೆ ಮತ್ತೆ ತಂದೆ ತಾಯಿ (Parents) ಯ ನೆನಪು ಮಾಡಿಕೊಂಡು ಕಣ್ಣೀರು ಇಡುತ್ತಾರೆ ತಂದೆ-ತಾಯಿಯಿಂದ ದೂರ ಆಗುವುದನ್ನು ಅವರಿಗೆ ಹರಗಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಹಾಗಾಗಿ ಈ ಭಯ ಅವರಲ್ಲಿ ಸದಾ ನೆಲೆಸಿರುತ್ತೆ. ಇದನ್ನೂ ಓದಿ:Benefits of drumsticks: ನುಗ್ಗೇಕಾಯಿ ಪುರುಷರ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಇನ್ನಷ್ಟು ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ; ಯಾವವು ಗೊತ್ತೇ?

ಪ್ರೀತಿಸಿದವನಿಂದ ದೂರ ಹೋಗುವ ಭಯ:

ಹುಡುಗಿಯರು ಸಾಮಾನ್ಯವಾಗಿ ಯಾರನ್ನಾದರೂ ಒಬ್ಬರನ್ನ ಪ್ರೀತಿಸಿದರು ಅಂದರೆ ಅವರ ಬಗ್ಗೆ ಹೆಚ್ಚಿನ ನಂಬಿಕೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಅವರ ಸಣ್ಣ ಪುಟ್ಟ ವಿಚಾರಗಳಲ್ಲಿಯೂ ಕೂಡ ಹೆಚ್ಚಿನ ಕಾಳಜಿ ಮಾಡುತ್ತಾರೆ. ಆದರೆ ಅವರನ್ನು ಕಳೆದುಕೊಳ್ಳುವ ಭಯ ಸದಾ ಮನಸ್ಸಿನಲ್ಲಿ ಇರುತ್ತೆ ಯಾರಾದರೂ ತಾನು ಪ್ರೀತಿಸಿದ ಹುಡುಗನನ್ನು ಬಲೆಕ್ಕೆ ಬೀಳಿಸಿಕೊಂಡರೆ ಎನ್ನುವ ಭಯ ಅವರಲ್ಲಿ ಸದಾ ಇರುತ್ತೆ. ಇದನ್ನೂ ಓದಿ:Tips for Diabetic Patient: ಅಸಲಿಗೆ ಶುಗರ್ ಹೊಂದಿರುವವರು ಬಿಸಿನೀರಿನ ಸ್ನಾನ ಮಾಡಬಹುದೆ? ಮಧುಮೇಹಿಗಳೇ ನಿಮಗಾಗಿ ಈ ಸುದ್ದಿ!

ಗರ್ಭಧಾರಣೆಯ ಭಯ:

ಹೆಣ್ಣು ಒಂದು ಮಗುವಿಗೆ ಜನ್ಮ ನೀಡಿದರೆ ಆಕೆ ಪರಿಪೂರ್ಣ ಮಹಿಳೆ ಎನಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತೆ. ಹೆಣ್ಣು ಮಕ್ಕಳಿಗೂ ಕೂಡ ಮದುವೆಯಾದ ನಂತರ ಮಗು ಹೊಂದುವುದಕ್ಕೆ ಇಷ್ಟ ಆದರೆ ಅವರಿಗೆ ಗರ್ಭಧಾರಣೆಯ ನಂತರ ಮಗುವಿಗೆ ಏನಾದರೂ ಆದರೆ ಎನ್ನುವ ಭಯ ಸದಾ ಕಾಡುತ್ತಿರುತ್ತೆ ಹಾಗಾಗಿ ಕೆಲವರು ಗರ್ಭ ಧರಿಸುವುದಕ್ಕೆ ಕೂಡ ಹೆದರುತ್ತಾರೆ. ಇನ್ನು ಕೆಲವರು ಹೊಟ್ಟೆಯಲ್ಲಿ ಮಗು ಇರುವಾಗ ಮಗುವಿನ ಬಗ್ಗೆ ಸದಾ ಚಿಂತಿತರಾಗಿರುತ್ತಾರೆ.

ಕತ್ತಲೆಯ ಭಯ:

ಹೌದು ಸಾಕಷ್ಟು ಹುಡುಗಿಯರಿಗೆ ಕತ್ತಲೆಯನ್ನು ಕಂಡರೆ ಆಗುವುದಿಲ್ಲ ಹೊರಗಡೆಯ ಕತ್ತಲೆ ಅಷ್ಟೇ ಅಲ್ಲ ಮನೆಯ ಒಳಗೆ ರೂಮ್ನಲ್ಲಿ ಲೈಟ್ ಇಲ್ಲದೆ ಇದ್ದರೂ ಭಯಪಟ್ಟುಕೊಳ್ಳುವ ಹೆಣ್ಣು ಮಕ್ಕಳು ಕೂಡ ಇದ್ದಾರೆ ಹಾಗಾಗಿ ಹೆಣ್ಣು ಮಕ್ಕಳು ಕತ್ತಲೆಗೆ ಹುಡುಗರಿಗಿಂತಲೂ ಹೆಚ್ಚಿನ ಭಯ ಅನುಭವಿಸುತ್ತಾರೆ.

ಹಲ್ಲಿ ಜಿರಲೆಯ ಭಯ:

ಇದು ನಿಜಕ್ಕೂ ತಮಾಷೆ ಎನಿಸುತ್ತೆ ಆದರೂ ಇದು ಸತ್ಯ ಸಾಕಷ್ಟು ಹೆಣ್ಣುಮಕ್ಕಳಿಗೆ ಹಲ್ಲಿ ಅಂದರೆ ಆಗುವುದೇ ಇಲ್ಲ ಹಲ್ಲಿಯನ್ನು ನೋಡಿದರೆ ಅಥವಾ ಜಿರಳೆ ನೋಡಿದರೆ ಕಿರುಚಿಕೊಳ್ಳುತ್ತಾರೆ ಅದು ಯಾಕೆ ಈ ಎರಡು ಕೀಟಗಳ ಬಗ್ಗೆ ಹೆಚ್ಚು ಭಯ ಇದೆಯೋ ಗೊತ್ತಿಲ್ಲ ಆದರೆ ಜಿರಳೆ ಅಥವಾ ಹಲ್ಲಿಯನ್ನ ಕಂಡರೆ ಹುಡುಗಿಯರು ಭಯಗೊಳ್ಳುವುದಂತು ಸತ್ಯ.

Comments are closed.