Kannada film Actor: ಈ ಫೋಟೋ ನೋಡಿ, ನಿಮಗೆ ಇದನ್ನು ನೋಡಿದಾಗ ಯಾವ ನಟನ ಬಾಲ್ಯದ ಫೋಟೋ ಎಂದು ಅನ್ನಿಸುತ್ತಿದೆ? ಈ ಬಾಲಕ ನಿಜವಾಗಲೂ ಯಾರು ಎಂದು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ತಪ್ಪದೇ ಓದಿ!

Kannada film Actor ಈ ಬಾಲಕ ಒಂದು ಕಾಲದಲ್ಲಿ ಬಹು ಬೇಡಿಕೆಯಲ್ಲಿದ್ದ ಹಾಸ್ಯ ನಟ. ಇವರ ಹಾಸ್ಯಕ್ಕೆ ವೀಕ್ಷಕರು ಹೊಟ್ಟೆ ಹುಣ್ಣಾಗುವುಂತೆ ಬಿದ್ದು ಬಿದ್ದು ನಗುತ್ತಿದ್ದರು. ಅಂತಹ ನಟನೆ ಹಾಗೂ ಸಂಭಾಷಣೆ ಯಲ್ಲಿ ಹಾಸ್ಯ ತುಂಬಿರುತ್ತಿತ್ತು. ಇವರು 4ನೇ ವಯಸ್ಸಿನವರಿದ್ದಾಗಲೇ ಕನ್ನಡ ಇತಿಹಾಸ ಕಂಡ ಖ್ಯಾತ ನಾಟಕ ಮಂಡಳಿಗಳಲ್ಲಿ ಒಂದಾದ ಸುಬ್ಬಯ್ಯ ನಾಯ್ಡು ನಾಟಕ ಮಂಡಳಿಯಲ್ಲಿ ಬಾಲ ನಟನಾಗಿ ಸೇರಿಕೊಂಡು ಅಲ್ಲಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯ ಅನಾವರಣ ಮಾಡಿದರು. ಇದು ಅವರ ಮೊದಲ ಸ್ಟೇಜ್ ಅಪಿಯರ್ ಎನ್ನಬಹುದು. ನಂತರದ ದಿನಗಳಲ್ಲಿ ಇವರಿಗೆ ಟೆಲಿಕಾಂ ಕಂಪೆನಿಯಲ್ಲಿ ಒಳ್ಳೆಯ ಪಗಾರ ಸಿಗೋ ಕೆಲಸ ಸಿಕ್ಕರೂ ಸಹ 4 ರಿಂದ 5 ವರ್ಷಗಳಲ್ಲಿ ಅದನ್ನೂ ಕೂಡ ಬಿಟ್ಟರು. ಕಾರಣ ಅವರಿಗೆ ಇದ್ದ ಸಿನಿಪ್ರೀತಿ. ಸಿನಿಮಾ ಮೇಲಿನ ಆಸಕ್ತಿ ಹಾಗೂ ಪ್ರೀತಿಯೇ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿತು.

ಇದೇ ಪ್ರಯತ್ನದ ಫಲವಾಗಿ ಸ್ನೇಹಿತರ ಸಹಾಯದಿಂದ ಇವರು ಕನ್ನಡದಲ್ಲಿ ಮೊದಲ ಬಾರಿಗೆ ಪರಸಂಗದ ಗೆಂಡೆ ತಿಮ್ಮ ಎಂಬ ಚಿತ್ರದಲ್ಲಿ ಪಾದಾರ್ಪಣೆ ಮಾಡಿದರು. ತಮ್ಮ ವಿಭಿನ್ನ ರೀತಿಯ ಮನೋರಂಜನ ನಟನೆಯ ಮೂಲಕ ಇನ್ನೂ ಕೂಡ ಚಿತ್ರರಂಗದಲ್ಲಿ ಅಸ್ತಿತ್ವದಲ್ಲಿರೋ ಹಾಸ್ಯ ನಟ. ಇಲ್ಲಿಯವರೆಗೆ ಕೇವಲ ಕನ್ನಡದಲ್ಲಿ ಮಾತ್ರ 500 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಇಂದಿಗೂ ಕೂಡ ಅವರ ಹಾಸ್ಯ ಪ್ರಕಾರವನ್ನು ಯುವ ಹಾಸ್ಯ ನಟರು ಅನುಕರಿಸುತ್ತಾರೆ.

ನಾವು ಮಾತನಾಡ್ತಿರೋದು ಯಾರು ಅಂತ ನಿಮ್ಮಲ್ಲಿ ಕೆಲವರಿಗೆ ಗೊತ್ತಾಗಿರಬಹುದು. ಹೌದು ನಾವು ಮಾತನಾಡ್ತಿರೋದು ಕನ್ನಡ ಚಿತ್ರರಂಗ ಕಂಡ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ರವರ ಕುರಿತಂತೆ. ಡಿಂಗ್ರಿ ನಾಗರಾಜ್ ರವರು ತಮ್ಮ ಐಕಾನಿಕ್ ಹಾಸ್ಯ ಪಾತ್ರಗಳಿಂದ ಇಂದಿಗೂ ಕನ್ನಡಿಗರ ಜನ ಮಾನಸದಲ್ಲಿ ನೆಲೆ ನಿಂತವರು.ಡಿಂಗ್ರಿ ನಾಗರಾಜ್ ರವರು ಕನ್ನಡ ಚಿತ್ರರಂಗದಲ್ಲಿ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸೋ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಹತ್ತರ ಕೊಡುಗೆ ನೀಡಿದವರು. ಡಿಂಗ್ರಿ ನಾಗರಾಜ್ ರವರಿಗೆ ಡಿಂಗ್ರಿ ಎಂಬ ಹೆಸರು ಬಂದದ್ದು ಕೃಡ ವಿಶೇಷವೆ. ಡಿಂಗ್ರಿ ನಾಗರಾಜ್ ರವರ ಗುರುಗಳಾದ ಬಾಬಣ್ಣ ತೆಲುಗಿನ ಖ್ಯಾತ ಚಿತ್ರ ಪಾತಾಳ ಭೈರವಿ ಯಲ್ಲಿ ಬರುವ ಪಾತ್ರವೊಂದರ ಹೆಸರು ಡಿಂಗ್ರಿ ಎಂದು ಅದನ್ನು ನಾಗರಾಜ್ ರವರಿಗೆ ಕರೆಯಲು ಉಪಯೋಗಿಸಿ ಡಿಂಗ್ರಿ ನಾಗರಾಜ್ ಎಂದಾಯಿತು. ಇವರು ಹೆಸರು ಕೂಡ ಇವರಿಗೆ ಯಶಸ್ಸನ್ನು ತಂದುಕೊಟ್ಟಿತು ಎಂದು ಹೇಳುತ್ತಾರೆ.

ಡಿಂಗ್ರಿ ನಾಗರಾಜ್ ರವರು 2006 ರಲ್ಲಿ ಪೋಷಕ ಕಲಾವಿದರ ಸಂಘ ಕಟ್ಟಿದರು. ಈ ಸಂಘದ ಮೂಲಕ ಇಂದಿಗೂ ಕೂಡಾ ಕಷ್ಟದಲ್ಲಿರುವ ಪೋಷಕ ಕಲಾವಿದರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದು ಅವರ ಮಾನವೀಯ ಗುಣಲಕ್ಷಣಕ್ಕೆ ಹೇಳಬಹುದಾದ ಉದಾಹರಣೆ. ಡಿಂಗ್ರಿ ನಾಗರಾಜ್ ರವರ ಮಗ ರಾಜವರ್ಧನ್ ಕೂಡ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಪಕ್ಕಾ ಹೀರೋ ಮೆಟಿರಿಯಲ್. ರಾಜವರ್ಧನ್ ರವರ ಮೊದಲ ಚಿತ್ರ ಐತಿಹಾಸಿಕ ಚಿತ್ರ ಬಿಚ್ಚುಗತ್ತಿ ಆಗಿದೆ. ಇದು ಕೂಡ ಬಿಡುಗಡೆಯಾಗಿ ರಾಜವರ್ಧನ್ ರವರು ಪೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ರಾಜವರ್ಧನ್ ರವರು ಈಗ ತಮ್ಮ ಮುಂಜಿನ ಚಿತ್ರಗಳ ಕುರಿತಂತೆ ಬ್ಯುಸಿಯಾಗಿದ್ದಾರೆ. ಡಿಂಗ್ರಿ ನಾಗರಾಜ್ ರವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.