Dhruva Sarja: ಬರಲ್ಲ ಬರಲ್ಲ ಎಂದರು ಬಲವಂತವಾಗಿ ಸಂಜಯ್ ಡಾಟ್ ರವರನ್ನು ಕರೆತರಲು, ಧ್ರುವ ಸರ್ಜಾ ಟೀಮ್ ಕೊಡುತ್ತಿರುವ ಸಂಭಾವನೆ ಕೇಳಿದರೆ, ಬೆಚ್ಚಿ ಬೀಳ್ತಿರಾ!

Dhruva Sarja: ಬಾಲಿವುಡ್ ನ ಬಹು ಬೇಡಿಕೆಯ ಸ್ಟಾರ್ ನಟರಲ್ಲಿ ಸಂಜಯದತ್ ಕೂಡ ಒಬ್ಬರು. ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇವರು ಈಗ ಬಾಲಿವುಡ್ನಲ್ಲಷ್ಟೇ ಅಲ್ಲದೆ ಸ್ಯಾಂಡಲ್ವುಡ್ನಲ್ಲೂ ಬಹಳ ಬೇಡಿಕೆಯ ನಟರಾಗಿದ್ದಾರೆ. ಅದಕ್ಕೆ ಕಾರಣ ಕೆ.ಜಿ.ಎಫ್ ಸಿನೆಮಾದಲ್ಲಿ ಅವರು ಅಭಿನಯಿಸಿರುವ ರೀತಿ ಎಂದರೆ ತಪ್ಪಾಗಲಿಕ್ಕಿಲ್ಲ. ಕೆ.ಜಿ.ಎಫ್. ಸಿನೆಮಾದ ನಂತರ ಕನ್ನಡದ ಹಲವು ನಿರ್ದೇಶಕರು, ನಿರ್ಮಾಪಕರು ಸಂಜಯ್ ದತ್ ಅವರನ್ನು ಕರೆ ತರಲು ಪ್ರಯತ್ನ ಮಾಡಿದ್ದರು. ಆದರೆ ಆಗಿರಲಿಲ್ಲ. ಇದೀಗ ಹ್ಯಾಟ್ರಿಕ್ ನಿರ್ದೇಶಕ ಎಂದೇ ಖ್ಯಾತರಾದ ಜೋಗಿ ಪ್ರೇಮ್ ಅವರು ಸಂಜಯ ದತ್ ಅವರನ್ನು ಕರೆತರುವ ಪ್ರಯತ್ನ ಮಾಡಿದ್ದು, ಅದು ಫಲ ನೀಡಿದೆ ಎಂದು ಹೇಳಲಾಗುತ್ತಿದೆ.

dhruva sarja upcoming movie KD sanjay dutt acted 1 1 | Live Kannada News
Dhruva Sarja: ಬರಲ್ಲ ಬರಲ್ಲ ಎಂದರು ಬಲವಂತವಾಗಿ ಸಂಜಯ್ ಡಾಟ್ ರವರನ್ನು ಕರೆತರಲು, ಧ್ರುವ ಸರ್ಜಾ ಟೀಮ್ ಕೊಡುತ್ತಿರುವ ಸಂಭಾವನೆ ಕೇಳಿದರೆ, ಬೆಚ್ಚಿ ಬೀಳ್ತಿರಾ! https://sihikahinews.com/2023/01/18/dhruva-sarja-%e0%b2%ac%e0%b2%b0%e0%b2%b2%e0%b2%b2-%e0%b2%ac%e0%b2%b0%e0%b2%b2%e0%b2%b2-%e0%b2%8e%e0%b2%a6%e0%b2%b0-%e0%b2%ac%e0%b2%b2%e0%b2%b5%e0%b2%a4%e0%b2%b5%e0%b2%97-%e0%b2%b8%e0%b2%9c%e0%b2%af/

ದ್ರುವ ಸರ್ಜಾ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ಕೆ.ಡಿ. ಸಿನೆಮಾದಲ್ಲಿ ಅಭಿನಯಿಸಲು ಸಂಜಯ್ ದತ್ ಅವರು ಕಾಲ್ ಶೀಟ್ ನೀಡಿದ್ದಾರೆ. ಅದರಲ್ಲೂ ೬೦ ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನವ ಮಾಹಿತಿ ಸಿಕ್ಕಿದೆ.
ಸಂಜಯ್ ದತ್ ಪಾತ್ರದ ಮೂಲಕವೇ ಕೆ.ಡಿ. ಸಿನೆಮಾದ ಚಿತ್ರೀಕರಣ ಆರಂಭಗೊಳ್ಳಲಿದೆ. ಇದಕ್ಕಾಗಿ ಪ್ರೇಮ್ ಅವರು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಯಾವ ರೀತಿ ಇರಬೇಕು. ಪಾತ್ರವನ್ನು ಜನರ ಎದುರು ಯಾವ ರೀತಿ ಪ್ರಸಂಟ್ ಮಾಡಬೇಕು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕೆ.ಡಿ. ಸಿನೆಮಾದ ಚಿತ್ರೀಕರಣ ಜನವರಿ ೨೧ರಿಂದ ಆರಂಭಗೊಳ್ಳಲಿದೆ ಎಂಬ ಸುದ್ದಿ ಇತ್ತು. ಆದರೆ ಇದೀಗ ಚಿತ್ರೀಕರಣ ೪ ದಿನ ಮುಂದಕ್ಕೆ ಹೋಗಿದ್ದು, ಜನವರಿ ೨೫ರಿಂದ ಆರಂಭಗೊಳ್ಳಲಿದೆ. ಚಿತ್ರೀಕರಣ ಬೆಂಗಳೂರಿನಲ್ಲಿಯೇ ಆರಂಭವಾಗಲಿದ್ದು, ಪ್ರೇಮ್ ಅವರು ಎಲ್ಲವನ್ನು ಗೌಪ್ಯವಾಗಿಟ್ಟಿದ್ದಾರೆ. ಇದನ್ನೂ ಓದಿ: Ajaneesh Lokanath: ಅಜನೇಶ್ ಲೋಕನಾಥ್ ಅವರನ್ನು ಅಪಹರಣ ಮಾಡಿದ ಹಾಸ್ಟೆಲ್ ಹುಡುಗರು; ಬೆರಳು ಕತ್ತರಿಸಿದರೂ ಲೆಟರ್ ಬರೆದ ಮ್ಯೂಸಿಕ್ ಡೈರೆಕ್ಟರ್!

ಕೆ.ಡಿ. ಸಿನೆಮಾ ಒಂದು ಮಾಸ್ ಸಿನೆಮಾವಾಗಿದ್ದು, ಇದರಲ್ಲಿ ಸಾಹಸ ದೃಶ್ಯಗಳಿಗೇನು ಕೊರತೆ ಇರುವುದಿಲ್ಲ. ಸಾಹಸ ದೃಶ್ಯಗಳಿಂದಲೇ ಸಿನೆಮಾದ ಚಿತ್ರೀಕರಣ ಆರಂಭವಾಗಲಿದೆ. ಈ ಸಾಹಸ ದೃಶ್ಯಗಳಲ್ಲಿ ಸಂಜಯ್ ದತ್ ಅವರೂ ಕೂಡ ಭಾಗಿಯಾಗಲಿದ್ದಾರೆ. ಮೊದಲನೇ ಶೆಡ್ಯೂಲ್ನಲ್ಲಿ ಸಾಹಸ ದೃಶ್ಯಗಳನ್ನು ಹಾಗೂ ಎರಡನೇ ಶೆಡ್ಯುಲ್ನಲ್ಲಿ ಮಾತಿನ ಭಾಗದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಇನ್ನು ಸಂಜಯ್ ದತ್ ಅವರ ಸಂಭಾವನೆ ವಿಷಯಕ್ಕೆ ಬಂದ್ರೆ ಕೇವಲ 18 ನಿಮಿಷ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಬರೋಬ್ಬರಿ 23 ಕೋಟಿ ನೀಡಲಾಗಿದೆ ಎನ್ನುವ ಮಾಹಿತಿ ಇದೆ.

ಕೆ.ಡಿ. ಸಿನೆಮಾವು ರೆಟ್ರೋ ಕಥೆಯನ್ನು ಹೊಂದಿದೆ. ಇದಕ್ಕಾಗಿಯೇ ಹಳೆಯ ಕಾಲದ ಸೆಟ್ಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ತುಂಬಾ ರಹಸ್ಯವಾದ ಸ್ಥಳದಲ್ಲಿ ಈ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Comments are closed.