Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇನ್ಮುಂದೆ ಇಲ್ಲಾ ಲಾಸ್ಟ್ ಡೇ ಟೆನ್ಶನ್; ಹಾದಾದ್ರೆ ಬಿಲ್ ಯಾವಾಗ ಕಟ್ಟಿದರೆ ಸಾಕು ಗೊತ್ತೇ? ಎಲ್ಲರಿಗೂ ಸಿಕ್ತಿ ಬಿಗ್ ರಿಲೀಫ್!

Credit Card: ನಮ್ಮ ದೇಶದಲ್ಲಿ ಇತ್ತಿಚೆಗೆ ಬ್ಯಾಂಕಿಂಗ್ (Banking) ವಹಿವಾಟು ತುಂಬಾನೆ ಜಾಸ್ತಿಯಾಗಿದೆ. ಇದಕ್ಕೆ ಮೂಲಕಾರಣ ಕೇಂದ್ರ ಸರ್ಕಾರ (Central govt.) ವು ಜಾರಿಗೆ ತಂದಿರುವ ಗ್ರಾಹಕಸ್ನೇಹಿ ನಿಯಮಗಳು ಎಂದರೆ ತಪ್ಪಾಗುವುದಿಲ್ಲ. ಬ್ಯಾಂಕುಗಳು ಸಹ ಇತ್ತಿಚೆಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಲವಾರು ರೀತಿಯ ಆಫರ್ಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಡಿಜಿಟಲ್ ಪೇಮೇಂಟ್ ಸಹ ಬ್ಯಾಂಕಿಗ್ ಮೂಲಕ ನಡೆಯುವುದರಿಂದ ಗ್ರಾಹಕರು ಬ್ಯಾಂಕಿನತ್ತ ಹೆಚ್ಚೆಚ್ಚು ಹೋಗುತ್ತಿದ್ದಾರೆ. ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ (Credit Card) ನೀಡಲಾಗುತ್ತದೆ. ಇತ್ತಿಚೆಗೆ ಇದರ ಬಳಕೆ ಜಾಸ್ತಿಯಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಇಲ್ಲಿದಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮಗೆ ಸಾಲ ಸೇರಿದಂತೆ ವಿವಿಧ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: Pallavi Gowda: ಕನ್ನಡಕ್ಕೆ ವಾಪಸ್ಸಾಗುತ್ತಿರುವ ಪಲ್ಲವಿ ರವರನ್ನು ತೆಲುಗಿನವರು ಬ್ಯಾನ್ ಮಾಡಿದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ? ತೆಲುಗಿನ ಜನ ಹೇಳುವುದೇನೇ ಗೊತ್ತೇ??

ಬ್ಯಾಂಕುಗಳು ಸಾಲ (bank Loan) ವನ್ನು ನೀಡುವಾಗ ನಿಮ್ಮ ಕ್ರೆಡಿಟ್ ಸ್ಕೋರ್  (Credit Score) ಪರಿಶೀಲನೆ ಮಾಡುತ್ತವೆ. ಈ ಕ್ರೆಡಿಟ್ ಸ್ಕೋರ್ ಕಡಿಮೆಯಾಗಲು ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಕ್ರೆಡಿಟ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದಲ್ಲಿ ಬ್ಯಾಂಕುಗಳು ಭಾರೀ ಪ್ರಮಾಣದಲ್ಲಿ ನಿಮಗೆ ದಂಡ ವಿಧಿಸುತ್ತದೆ. ಇದನ್ನೂ ಓದಿ: Bank Loan: ಲೋನ್ ಬೇಕು ಎಂದವರಿಗೆ ನಿರಾಳ: ಕೊನೆಗೂ ಜನರ ಕಷ್ಟಕ್ಕೆ ಸ್ಪಂದಿಸಲು, 15 ಅಥವಾ 30 ನಿಮಿಷಗಳಲ್ಲಿ ಲೋನ್ ಕೊಡಲು ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮರೆಯುವವರ ಸಲುವಾಗಿಯೇ ಆರ್ಬಿಐ ಪರಿಹಾರವನ್ನು ನೀಡಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಿಗದಿತ ದಿನಾಂಕದ ಮರುದಿನದಿಂದ ಪಾವತಿಸಿದರೆ ಇನ್ಮುಂದೆ ದಂಡ ಬೀಳುವುದಿಲ್ಲ. ಆದಾಗ್ಯೂ ಬ್ಯಾಂಕ್  ಹಾಗೂ ಕ್ರೆಡಿಟ್ ಕಾರ್ಡ್  ಕಂಪನಿಗಳು ಬಿಲ್ ಪಾವತಿ ತಪ್ಪಿದ ಮೂರು ದಿನಗಳ ನಂತರ ವಿಳಂಬ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಆರ್ಬಿಐ  ನಿರ್ದೇಶನ ನೀಡಿದೆ. ಇದರ ಅರ್ಥ ಏನೆಂದರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವ ದಿನ ಮುಗಿದ ನಂತರವೂ ನಿಮಗೆ ಮೂರು ದಿನಗಳ ಕಾಲ ಅವಕಾಶ ಸಿಗುತ್ತದೆ.

ಹೆಚ್ಚು ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಿಲ್ ಕಟ್ಟಲು ನೆನಪಾಗದೆ ಇರಬಹುದು. ಆದ್ದರಿಂದ ಆರ್ಬಿಐ ನಿಯಮ ಜಾರಿಗೆ ತಂದಿದೆ. ನಿಗದಿತ ದಿನಾಂಕದ ಮುಂಚೆಯೇ ನಿಮಗೆ ಬಿಲ್ ಕಟ್ಟಲು ನೆನಪಿಸಲಾಗುತ್ತದೆ. ಆಗಲೂ ನೀವು ಪಾವತಿ ಮಾಡಿದ್ದರೆ ಬ್ಯಾಂಕುಗಳು ದಂಡ ವಿಧಿಸುತ್ತದೆ.

ಆದರೆ ಹೊಸ ನಿಯಮದ ಅನ್ವಯ ನಿಮಗೆ ಮೂರು ದಿನಗಳ ಹೆಚ್ಚುವರಿ ಅವಧಿ ಸಿಗುತ್ತದೆ. ಆದರೂ ನೀವು ನಿಗದಿತ ಸಮಯಕ್ಕೆ ಬಿಲ್ ಪಾವತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ತಪ್ಪುತ್ತದೆ. ಆದ್ದರಿಂದ ನೀವು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದು ಉತ್ತಮ.

Comments are closed.