Shree Siddeshwara Swamiji: ಮೊಟ್ಟ ಮೊದಲು ಬೆಳಿಗ್ಗೆ ಎದ್ದು ಏನು ಮಾಡಬೇಕು ..?? ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ಡೇನು ಗೊತ್ತೇ? ಕೇಳಿ ಒಮ್ಮೆ

Shree Siddeshwara Swamiji: “ಏಳುವಾಗ ಅನಂತತಾ .. ಮಲಗುವಾಗ ಶೂನ್ಯ .. ಇದು ಜೀವನ ..” ಆಹಾ ಎಂಥ ಮಾತು ಅಲ್ವಾ? ಇಂತಹ ಉಪಯೋಕ್ತಿಗಳನ್ನು ಶ್ರೀ ಸಿದ್ದೇಶ್ವರ ಸ್ವಾಮಿಯವರ ಬಾಯಲ್ಲಲ್ಲದೇ ಮತ್ತೆಲ್ಲಿ ಕೇಳಬಹುದು!

ನಾವು ಮನುಷ್ಯರು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಇನ್ನಿಲ್ಲದಷ್ಟು ವಿಚಾರಗಳ ಬಗ್ಗೆ ಇನ್ನಿಲ್ಲದಷ್ಟು ಚಿಂತೆ ಮಾಡುತ್ತೇವೆ ಸಣ್ಣ ಸಣ್ಣ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಆದರೆ ಬೆಳಿಗ್ಗೆ ಹೇಗೆ ಆರಂಭವಾಗಬೇಕು, ನಮ್ಮ ಇಡೀ ದಿನವನ್ನ ಹೇಗೆ ಸುಖಾಂತ್ಯವಾಗಿಸಬಹುದು ಎಂಬುದರ ಬಗ್ಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತನ್ನು ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುತ್ತೀರಿ ಇಷ್ಟಕ್ಕೂ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದ ಅತ್ಯುತ್ತಮ ಮಾರ್ಗಗಳು ಯಾವವು ಗೊತ್ತೇ?

ಹಿಂದಿನ ಕಾಲದಲ್ಲಿ ಕೋಳಿ ಕೂಗುವುದಕ್ಕೂ ಮೊದಲು ಅಂದರೆ ಸೂರ್ಯೋದಯಕ್ಕಿಂತ ಮೊದಲು ಎದ್ದೇಳಬೇಕು ಎನ್ನುವ ನಿಯಮ ಇತ್ತು. ಆದರೆ ಈಗ ಯಾರು ಹಾಗೆ ನಡೆದುಕೊಳ್ಳುವುದಿಲ್ಲ ಸೂರ್ಯ ಹುಟ್ಟಿದ ಮೇಲೆ ಅಥವಾ ಸೂರ್ಯ ನೆತ್ತಿ ಮೇಲೆ ಬಂದರೂ ಇನ್ನು ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿಕೊಂಡು ಇರುವವರೇ ಹೆಚ್ಚು ಇದರಿಂದಲೇ ನಮ್ಮ ಆರೋಗ್ಯದಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ ಜೊತೆಗೆ ಆ ದಿನವನ್ನು ಕೂಡ ಚಿಂತೆಯಿಂದಲೇ ಮುಗಿಸಿ ಬಿಡುತ್ತೇವೆ ಹಾಗಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳುವುದೇನು ಗೊತ್ತಾ? ಇದನ್ನೂ ಓದಿ: Kannada Recipe: ಚಪಾತಿಯು ಮೃದುವಾಗಿ ಬರಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಗಟ್ಟಿ ಚಪಾತಿ ಬಿಡಿ, ಮೃದುವಾಗಿ ಮಾಡಿ.

ಮೊದಲನೆಯದಾಗಿ ಕೋಳಿ ಕೂಗುವುದಕ್ಕೂ ಮೊದಲು ನಾವು ಎದ್ದೇಳಬೇಕು. ಚಿಕ್ಕ ಚಿಕ್ಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಲ್ಲ, ನನ್ನ ನಾಯಿ ಎಲ್ಲಿ ಹೋಯಿತು, ನನ್ನ ಬಟ್ಟೆ ಎಲ್ಲಿರಬಹುದು ಇಂತಹ ವಿಚಾರಗಳ ಬಗ್ಗೆ ಯೋಚನೆ ಮಾಡುವುದಲ್ಲ ಅದರ ಬದಲು ನಮಗೆ ಈ ಜೀವವನ್ನು ಜೀವನವನ್ನು ಕೊಟ್ಟ ದೇವರನ್ನು ಒಮ್ಮೆ ಸ್ಮರಿಸಬೇಕು ಎಂದು ಸ್ವಾಮೀಜಿ ಹೇಳುತ್ತಾರೆ. ಸರ್ವಜ್ಞ ಹೇಳುವಂತೆ ದೇವರನ್ನ ದಯಾಳು ಎಂದು ಹೇಳಲಾಗುತ್ತೆ. ಅಂದರೆ ಈ ಜೀವನವನ್ನು ಕೊಟ್ಟಿದ್ದು ದೇವರು ಹಾಗಾಗಿ ಆತ ದಯಾಳು. ಜಗತ್ತಿಗೆ ನಮ್ಮನ್ನ ತಂದು ಇಷ್ಟೆಲ್ಲಾ ಅನುಭವಗಳನ್ನು ನೀಡಿದಂತಹ ದೇವರು ದಯಾಳು. ಆ ದಯಾಳುವನ್ನು ಕಣ್ಣಮುಂದೆ ಒಮ್ಮೆ ತಂದುಕೊಂಡರೆ ದಿನವು ಚೆನ್ನಾಗಿರುತ್ತದೆ ಎಂದು ಸ್ವಾಮೀಜಿ ಹೇಳುತ್ತಾರೆ. ಇದನ್ನೂ ಓದಿ: Bank Loan: ಲೋನ್ ಬೇಕು ಎಂದವರಿಗೆ ನಿರಾಳ: ಕೊನೆಗೂ ಜನರ ಕಷ್ಟಕ್ಕೆ ಸ್ಪಂದಿಸಲು, 15 ಅಥವಾ 30 ನಿಮಿಷಗಳಲ್ಲಿ ಲೋನ್ ಕೊಡಲು ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ಇನ್ನು ಸಿದ್ದೇಶ್ವರ ಸ್ವಾಮೀಜಿಯವರು ಈ ಎರಡನೆಯದಾಗಿ ಹೇಳುವ ವಿಷಯ ಏನೆಂದರೆ ಯಾವುದಾದರೂ ತಿಳಿದವರ ಅಥವಾ ಸರ್ವಜ್ಞರ ಮಾತುಗಳನ್ನ ಬೆಳಿಗ್ಗೆ ಎದ್ದಾಗ ಒಮ್ಮೆ ನೆನಪು ಮಾಡಿಕೊಳ್ಳಬೇಕು. ಹಾಗೆ ಜೀವನಕ್ಕೆ ದಾರಿದೀಪವಾಗುವಂತಹ ಮಾತುಗಳನ್ನು ನೆನಪು ಮಾಡಿಕೊಂಡರೆ ಆ ದಿನವಿಡೀ ನಾವು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಇದ್ದ ತಕ್ಷಣ ಏನಾದರೂ ಒಂದು ಮಾಡುವುದಕ್ಕಿಂತ ಬಲ್ಲವರ ಒಂದು ಸಣ್ಣ ಮಾತನ್ನು ನೆನಪಿಸಿಕೊಂಡರು ಸಾಕು ಅದು ಜೀವನದ ಪಾಠವಾಗುತ್ತದೆ ಜೀವನದಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂಬುದಾಗಿ ಸ್ವಾಮೀಜಿ ಹೇಳುತ್ತಾರೆ. ಇದನ್ನೂ ಓದಿ: Ajaneesh Lokanath: ಅಜನೇಶ್ ಲೋಕನಾಥ್ ಅವರನ್ನು ಅಪಹರಣ ಮಾಡಿದ ಹಾಸ್ಟೆಲ್ ಹುಡುಗರು; ಬೆರಳು ಕತ್ತರಿಸಿದರೂ ಲೆಟರ್ ಬರೆದ ಮ್ಯೂಸಿಕ್ ಡೈರೆಕ್ಟರ್!

ಸ್ನೇಹಿತರೆ ಸಿದ್ದೇಶ್ವರ ಸ್ವಾಮೀಜಿಯವರ ಈ ಮಾತುಗಳು ಎಷ್ಟು ಸತ್ಯ ಅಲ್ವಾ? ಅವರು ಹೇಳಿದಂತೆ ನಾವು ನಮ್ಮ ಬೆಳಗನ್ನು ಎಷ್ಟು ಚಂದವಾಗಿಸಿಕೊಳ್ಳುತ್ತೇವೆ ಆ ದಿನವೂ ಕೂಡ ಅಷ್ಟೇ ಉತ್ತಮವಾಗಿ ಕೊನೆಗೊಳ್ಳುತ್ತದೆ. ನೀವು ಕೂಡ ತಪ್ಪದೇ ಬೆಳಿಗ್ಗೆ ಎದ್ದು ಇನ್ನಿಲ್ಲದಷ್ಟು ಇತರ ವಿಚಾರಗಳ ಬಗ್ಗೆ ಚಿಂತೆ ಮಾಡುವ ಬದಲು ಒಳ್ಳೆಯ ಯೋಚನೆ ಮಾಡಿ ದಿನವನ್ನು ಸಂತೋಷವಾಗಿರಿಸಿಕೊಳ್ಳಿ.

Comments are closed.