Kubbra Sait: 29 ವರ್ಷದ ಅಂಕಲ್ ನಿಂದ ಪಡಬಾರದ ಪಾಡು ಪಟ್ಟಿದ್ದೆ ಎಂದ ಖ್ಯಾತ ನಟಿ ಕುಬ್ರಾ ಸೆಟ್. ಹೇಳಿದ್ದೇನು ಗೊತ್ತೇ?? ಅಂಕಲ್ ಏನು ಮಾಡಿದ್ದರಂತೆ ಗೊತ್ತೇ?

Kubbra Sait: ಸಿನಿಮಾ ರಂಗದಲ್ಲಿ ನಟಿಯರು ಸಾಕಷ್ಟು ಪ್ರತಿಭೆ, ಅದೃಷ್ಟ ಎಲ್ಲವೂ ಇದ್ದರೂ ಕೂಡ ಕೆಲವೊಮ್ಮೆ ಸಿನಿಮಾ ಮಾಡಲು ಅವಕಾಶ ಕೊಡುವವರಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ  ಆದರೆ ಇವೆಲ್ಲವನ್ನೂ ಎದುರಿಸಿ ನಿಂತವರು ಇಂದು ಟಾಪ್ ಹೀರೋಯಿನ್ ಸ್ಥಾನದಲ್ಲಿ ನಿಲ್ಲುತ್ತಾರೆ. ಹಿಂದಿ ಚಿತ್ರರಂಗದಲ್ಲಿ ಅತ್ಯುತ್ತಮ ಹೆಸರು ಮಾಡಿರುವ ನಿರೂಪಕಿ ಹಾಗೂ ಮಾಡೆಲ್ ಆಗಿರುವ ಕುಬ್ರಾ ಸೇಠ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಆಕೆ ತನ್ನ ಜೀವನದ ಕಹಿ ಘಟನೆಗಳು ಇರುವಂತಹ ಪುಸ್ತಕದ ಪುಟವನ್ನ ಜನರ ಎದುರು ಹಂಚಿಕೊಂಡಿದ್ದಾರೆ.

ಕುಬ್ರಾ ಸೇಠ್ ಓಪನ್ ಬುಕ್ ಬರೆದು ತಮ್ಮ ಖುಷಿ ಹಾಗೂ ದುಃಖಗಳನ್ನು ಅದರಲ್ಲಿ ಬರೆದು ಕೊಂಡಿದ್ದಾರೆ. ನಟಿ ಕುಬ್ರಾ ತಮಗೆ ಅಬಾರ್ಷನ್ ಆಗಿರುವ ಘಟನೆಯಿಂದ ಹಿಡಿದು ಲೈಂಗಿಕ ಕಿರುಕುಳವನ್ನು ಅನುಭವಿಸಿರುವ ವಿಚಾರಗಳನ್ನು ಕೂಡ ಓಪನ್ ಬುಕ್ ಅಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ.

ಲೈಂಗಿಕ ಕಿರುಕುಳ ಅಂದ್ರೆ ಏನು ಎಂದು ಗೊತ್ತೇ ಇಲ್ಲದ ವಯಸ್ಸಿನಲ್ಲಿ ನಾನು ಆ ಸಮಸ್ಯೆಯನ್ನು ಎದುರಿಸಿದೆ ನನ ಪುಸ್ತಕದಲ್ಲಿ ಕೆಲವೊಂದು ವಿಚಾರಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ನೆವರ್ ಟೆಲ್ ಅ ಸ್ಟೋರಿ ಅಂಟಿಲ್ ಯು ಆರ್ ಓವರ್ ಇಟ್ (Never tell a story until you overcome it)ಎನ್ನುವ ಮಾತಿದೆ ಅದರಂತೆ ಪುಸ್ತಕದ ಮೂಲಕ ನನ್ನ ಜೀವನದ ಹಲವಾರು ಘಟನೆಗಳನ್ನು ಹೊರಗೆ ತರಲು ಸಾಧ್ಯವಾಯಿತು. ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಅಂಕಲ್, ಏನೇ ಮಾಡಿದರೂ ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗ್ತಾ ಇರಲಿಲ್ಲ ನಾನು ಬೇಡ ಅಂತ ಎಷ್ಟು ಸಲ ಹೇಳಿದರೂ ಅವನು ಕೇಳುತ್ತಿರಲಿಲ್ಲ ನಿನ್ನ ತಾಯಿಗೆ ಹೇಳ್ತೀನಿ, ನಾನು ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಎಂದು ಹೇಳುತ್ತಲೇ ತುಂಬಾ ಫಿಸಿಕಲ್ ಆಗಿ ಹತ್ತಿರ ಬರುತ್ತಿದ್ದರು ಆ ಸಮಯದಲ್ಲಿ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದೆ ಎಂದು ಸಂದರ್ಶನ ಒಂದರಲ್ಲಿ ಕೋಪ ಹೇಳಿಕೊಂಡಿದ್ದಾರೆ.

ಇನ್ನು ತಮ್ಮ ಮೇಲೆ ಆ 29 ವರ್ಷದ ಅಂಕಲ್ ನಡೆಸಿರುವಂತಹ ದೈಹಿಕ ಕಿರುಕುಳದ ಬಗ್ಗೆ ವಿಸ್ತಾರವಾಗಿ ಕುಬ್ರಾ ಹೇಳಿಕೊಂಡಿದ್ದಾರೆ. “ನನಗೆ ಆಗ 17 ವರ್ಷ ಅವನಿಗೆ 29 ವರ್ಷ ನಾನು ಬೇಸ್ಮೆಂಟ್ ನಲ್ಲಿ ನಿಂತುಕೊಂಡಿದ್ದಾಗ ನನ್ನ ಕರೆಯುತ್ತಿದ್ದರು ನಾನು ಬರುವುದಿಲ್ಲ ಎಂದು ಹಠ ಮಾಡುತ್ತಿದೆ ಎಷ್ಟೇ ಹೇಳಿದರೂ ಕೇಳಿಸಿಕೊಳ್ಳುತ್ತಿರಲಿಲ್ಲ ಆಗ ನಾನು ಸಿಟ್ಟು ಮಾಡಿಕೊಂಡು ಅಲ್ಲಿದ್ದ ಇಟ್ಟಿಗೆ ತೆಗೆದುಕೊಂಡು ಆತನ ಮುಖಕ್ಕೆ ಎಸೆದೆ ಆತನ ಕಿವಿಗೆ ಪೆಟ್ಟು ಬಿದ್ದು ಹೊಲಿಗೆ ಕೂಡ ಹಾಕಿಸಿಕೊಂಡ. ಆ ಘಟನೆಯ ನಂತರವೂ ಅಥವಾ ಹಿಂದೆ ಸರಿಯಲಿಲ್ಲ ನನ್ನ ತಾಯಿ ಬಂದು ಯಾಕೆ ಈ ರೀತಿ ಮಾಡಿರುವೆ ನಿಂದೆ ತಪ್ಪು ಹೋಗಿ ಅವರನ್ನು ಮಾತನಾಡಿಸು ಎಂದು ಹೇಳಿದರು ಈ ವಿಚಾರ ನನ್ನ ತಾಯಿಗೆ ಗೊತ್ತಿರಲಿಲ್ಲ. ನನ್ನ ತಾಯಿ ತುಂಬಾ ಸ್ಮಾರ್ಟ್. ಸುಳ್ಳು ಹೇಳಿದ್ರೆ ಬೇಗ ಕಂಡು ಹಿಡಿಯುತ್ತಿದ್ದರು ಹುಡುಗರ ಜೊತೆ ಹೊರಗೆ ಹೋಗಿದ್ದರು ಆಕೆಗೆ ಗೊತ್ತಾಗುತ್ತಿತ್ತು ಆದರೆ ಮನೆಯಲ್ಲಿಯೇ ಇದ್ದ ಈ ವ್ಯಕ್ತಿ ಮಾಡಿದ್ದು ಆಕೆಗೆ ತಿಳಿಯದೆ ಇದ್ದದ್ದು ಬೇಸರದ ವಿಚಾರ’ ಎಂದಿದ್ದಾರೆ.

ನಿನ್ನ ಜೀವನದ ಕಷ್ಟದ ಸಮಯದಲ್ಲಿದ್ದಾಗ ನಾನು ಎದುರಿಸಿದ ಕಷ್ಟಗಳಷ್ಟೇ ನನ್ನ ತಲೆಯಲ್ಲಿ ಇತ್ತು ಕೊನೆಗೆ ಒಂದು ದಿನ ಅಮ್ಮನ ಜೊತೆ ಹೋಗುವಾಗ ನಡೆದ ಘಟನೆಯನ್ನು ಹೇಳಿಬಿಟ್ಟೆ. ಅಮ್ಮನಿಗೆ ಬೇಸರ ಕೋಪ ಎಲ್ಲವೂ ಒಟ್ಟಿಗೆ ಬಂತು. ಸಾರಿ ಕೇಳಿದರು. ಇದೇ ರೀತಿ ನನ್ನ ಅಬಾರ್ಷನ್ ವಿಷಯ ಕೂಡ ಅಮ್ಮನಿಗೆ ತಿಳಿಸಿದೆ ಏನೇ ವಿಷಯ ಇದ್ದರೂ ನೇರವಾಗಿ ನನ್ನ ಬಳಿ ಬಂದು ಹೇಳು, ಬೇರೆಯವರಿಂದ ನಾನು ಕೇಳುವಂತೆ ಆಗಬಾರದು ಎಂದು ಅಮ್ಮ ಹೇಳುತ್ತಾರೆ ಎಂದಿಗೂ ನಾನು ಅದನ್ನ ಪಾಲಿಸುತ್ತೇನೆ ಏನೇ ಇದ್ದರೂ ಅದನ್ನು ಅಮ್ಮನ ಬಳಿ ಶೇರ್ ಮಾಡುತ್ತೇನೆ. ಹೀಗೆ ಕುಬ್ರಾ ಸೇಠ್ ತನ್ನ ಜೀವನದ ಹಲವಾರು ಕಹಿ ಘಟನೆಗಳನ್ನು ಮಾಧ್ಯಮದ ಎದುರು ಬಿಚ್ಚಿಟ್ಟಿದ್ದಾರೆ

Comments are closed.