Kranti Film Early Morning Show: KGF 1 ದಾಖಲೆಗಳನ್ನು ಚಿಂದಿ ಚಿತ್ರಾನ್ನ ಮಾಡಿದ ಕ್ರಾಂತಿ: ಮುಂದಿನ ಟಾರ್ಗೆಟ್ ಅಪ್ಪು ಕೊನೆಯ ಚಿತ್ರ ಜೇಮ್ಸ್. ಎಲ್ಲಿಗೆ ಬಂದಿದೆ ಗೊತ್ತೇ??

Kranti Film Early Morning Show: ಇದೇ ಬರುವ ಗುರುವಾರ ಅಂದರೆ ನಾಳೆ ಜನವರಿ 26 (January 26) ಗಣರಾಜ್ಯೋತ್ಸವದ ದಿನ (Republic Day) ಕನ್ನಡಿಗರಿಗೆ ಹಬ್ಬ. ಒಂದು ಕಡೆ ಗಣರಾಜ್ಯೋತ್ಸವ ಆದರೆ ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಕ್ರಾಂತಿ ಸಿನಿಮಾ (Kranti Film) ಬಿಡುಗಡೆ. ಸೂರ್ಯ ಹುಟ್ಟುವುದಕ್ಕೂ ಮುನ್ನ ಥಿಯೇಟರ್ Theatre)  ಗಳಲ್ಲಿ ಕ್ರಾಂತಿ ಸಿನಿಮಾ ಅಬ್ಬರಿಸಲಿದೆ. ಬರೋಬ್ಬರಿ ಒಂದು ವರ್ಷದ ನಂತರ ದರ್ಶನ್ (Darshan) ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ. ದರ್ಶನ್ ಅವರ ಅಭಿಮಾನಿಗಳು ಅವರ ಸಿನಿಮಾ ನೋಡೋದಕ್ಕೆ ಕಾತುರದಿಂದ ಕಾದು ಕುಳಿತಿದ್ದಾರೆ.

ಕ್ರಾಂತಿ ಸಿನಿಮಾದ ವಿಶೇಷವೇ ಅಕ್ಷರ ಕ್ರಾಂತಿ. ಅದರಲ್ಲೂ ಈ ಸಿನಿಮಾವನ್ನು ಅವರ ಅಭಿಮಾನಿಗಳೇ ಪ್ರಚಾರ ಮಾಡಿರುವ ಹಿನ್ನೆಲೆಯಲ್ಲಿ ಸಿನಿಮಾದ ಹೈಪ್ (Hype)  ಇನ್ನಷ್ಟು ಹೆಚ್ಚು ಕ್ರಿಯೇಟ್ ಆಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಕ್ರಾಂತಿ ಸಿನಿಮಾ ಇತ್ತೀಚಿನ ಎಲ್ಲಾ ಸಿನಿಮಾದ ದಾಖಲೆಗಳನ್ನು ಮುರಿದು ಹಾಕಿ ಹೊಸ ಮೈಲುಗಲ್ಲು ಸ್ಥಾಪಿಸುವ ದಿನ ದೂರ ಉಳಿದಿಲ್ಲ. ಇದನ್ನೂ ಓದಿ: Chiranjeevi: ಮೂರನೇ ಮದುವೆಯಾಗುತ್ತಿರುವ ಮಗಳಿಗೆ ಚಿರು ಕೊಟ್ಟ ಬಂಗ್ಲೆಯ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಇಂತಹ ಅಪ್ಪ ಇರಬೇಕು ಅಂತೀರಾ!

ಹೌದು ಕ್ರಾಂತಿ ಸಿನಿಮಾ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮುಂಜಾನೆ ಪ್ರದರ್ಶನ (Erly morning show) ಗಳನ್ನ ಕಾಣುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. ಎಲ್ಲೆಡೆ ಬೆಳಿಗ್ಗೆ ಹತ್ತು ಗಂಟೆಯ ನಂತರ ಸಿನಿಮಾ ಪ್ರದರ್ಶನ ಆದರೆ ಕೆಲವು ಥಿಯೇಟರ್ ಗಳಲ್ಲಿ ಮುಂಜಾನೆ ಪ್ರದರ್ಶನ ಮಾಡಲಾಗುತ್ತೆ. ಅಂದರೆ ಐದರಿಂದ ಆರು ಗಂಟೆ ಸಮಯದಲ್ಲಿ ಸಿನಿಮಾ ಪ್ರದರ್ಶನ ಆಗುತ್ತೆ ಇದೀಗ ಕ್ರಾಂತಿ ಹೆಚ್ಚು ಸಿನಿಮಾ ಥಿಯೇಟರ್ ಗಳಲ್ಲಿ ಕಾಣಿಸಿಕೊಳ್ಳಲಿದೆ.

ಬೆಂಗಳೂರಿನಲ್ಲಿ ಮುಂಜಾನೆಯ ಪ್ರದರ್ಶನ ಎಷ್ಟು?

ಬೆಂಗಳೂರು ನಗರ ಒಂದರಲ್ಲಿಯೇ 108 ಮುಂಜಾನೆ ಪ್ರದರ್ಶನವನ್ನು ಕ್ರಾಂತಿ ಸಿನಿಮಾ ಕಾಣಲಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ 107 ಪ್ರದರ್ಶನಗಳನ್ನು ಕಂಡುಕೊಂಡಿತ್ತು ಇದೀಗ ಕ್ರಾಂತಿ 108 ಮುಂಜಾನೆ ಪ್ರದರ್ಶನಗಳನ್ನ ಕಾಣುತ್ತಿದ್ದು ದಾಖಲೆ ಸೃಷ್ಟಿಸಿದೆ. ಅದೇ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ 149 ಮುಂಜಾನೆ ಪ್ರದರ್ಶನಗಳನ್ನು ಕಂಡು ಎರಡನೇ ಸ್ಥಾನದಲ್ಲಿದ್ದರೆ, 255 ಮುಂಜಾನೆ ಪ್ರದರ್ಶನಗಳನ್ನು ಕಂಡಿದ್ದ ಕೆಜಿಫ್ ಚಾಪ್ಟರ್ 2 ಮೊದಲನೆಯ ಸ್ಥಾನವನ್ನು ಉಳಿಸಿಕೊಂಡಿದೆ. ಮೂರನೇ ಸ್ಥಾನಕ್ಕೆ ಏರಿದೆ ಡಿ ಬಾಸ್ ಅಭಿನಯದ ಕ್ರಾಂತಿ. ಇದನ್ನೂ ಓದಿ:Shah Rukh Khan: ನಾನು ರಾತ್ರಿ ಬ್ಯಾಟ್ ಮ್ಯಾನ್ ಆದರೆ ಮುಂಜಾನೆ ಸೂಪರ್ ಮ್ಯಾನ್ ಎಂದ ಶಾರುಖ್ ಖಾನ್. ಹೀಗೆ ಹೇಳಿದ್ದು ಯಾಕೆ ಗೊತ್ತೇ??

ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಗೆಲ್ಲಿಸುವುದಕ್ಕೆ ಡಿ ಬಾಸ್ ಅಭಿಮಾನಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇನ್ನು ಕಲೆಕ್ಷನ್ ವಿಚಾರದಲ್ಲಿಯೂ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ದರ್ಶನ್ ಅವರ ಹೆಸರನ್ನು ಉಳಿಸುತ್ತಾ ಕಾದು ನೋಡಬೇಕು.

Comments are closed.