Marriage: ಮೇ, 03,2023, ಗೋಧೂಳಿ ಮುಹೂರ್ತದಲ್ಲಿ ಒಂದು ರೂಪಾಯಿ ಖರ್ಚಿಲ್ಲದೇ, ಸಾಂಪ್ರದಾಯಿಕವಾಗಿ ಮದುವೆ ಆಗ್ಬೇಕಾ? ಹಾಗಾದ್ರೆ ಇಂದೇ ನಿಮ್ಮ ಹೆಸರನ್ನು ಇಲ್ಲಿ ನೋಂದಾಯಿಸಿಕೊಳ್ಳಿ!

Marriage: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿವಾಹ ಎನ್ನುವುದು ಒಂದು ಮಹತ್ವದ ಘಟ್ಟ. ಇಲ್ಲಿ ಹುಡುಗಿಯೇ ಆಗಿರಲಿ ಹುಡುಗನೇ ಆಗಿರಲಿ ಬಹಳ ಯೋಚನೆ ಮಾಡಿ ತೀರ್ಮಾನ ಮಾಡಬೇಕು. ಹುಡುಗ-ಹುಡುಗಿ ಇಬ್ಬರಲ್ಲಿಯೂ ಆಲೋಚನೆ ಒಂದೆ ತೆರನಾಗಿದ್ದರೆ ಜೀವನ ಸಹ ಸುಸೂತ್ರವಾಗಿ ನಡೆಯುತ್ತದೆ. ಜೀವನ ಪೂರ್ತಿ ಇಬ್ಬರು ಒಟ್ಟಿಗೆ ಇರಬೇಕಾಗಿರುವುದರಿಂದ ಈ ತೀರ್ಮಾನವನ್ನು ಇಬ್ಬರು ಸಹ ತುಂಬಾ ಆಲೋಚಿಸಿಯೇ ತೆಗೆದುಕೊಳ್ಳಬೇಕು. ಕೆಲವರಿಗೆ ಹಣ ಇದ್ದರೂ ಬಹಳ ಸರಳವಾಗಿ ವಿವಾಹ ಆಗಬೇಕು. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಹಂಬಲ ಇರುತ್ತದೆ. ಇಂತಹವರಿಗೆ ಒಂದು ಅವಕಾಶ ಒದಗಿ ಬಂದಿದೆ.

ಕರ್ನಾಟಕದ ಪ್ರಸಿದ್ದ ಶಿವನ ದೇವಸ್ಥಾನದಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರ ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಹೆಸರುವಾಗಿಸಿಯಾಗಿದೆ. ದಿನವೂ ಇಲ್ಲಿ ಶಿವನ ದರ್ಶನಕ್ಕೆ ಸಾವಿರಾರು ಜನ ಬರುತ್ತಾರೆ. ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಅಷ್ಟೇ ಅಲ್ಲ ಇಲ್ಲಿ ನಡೆಯುವ ಲಕ್ಷದೀಪೋತ್ಸವದಿಂದ ಹಿಡಿದು ಹಲವು ವಿಶೇಷ ಸಂದರ್ಭದಲ್ಲಿ ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಬರುತ್ತಾರೆ. ಇದನ್ನೂ ಓದಿ: New Technology: ಥಟ್ ಅಂತ ಕರೆಂಟ್ ಹೋಗಿ ಕತ್ತಲಾದ್ರೆ ಭಯ ಪಡುವ ಅಗತ್ಯವಿಲ್ಲ; ಕರೆಂಟ್ ಹೋದ್ರೂ 5 ತಾಸು ಉರಿಯತ್ತೆ ಈ ಬಲ್ಬ್, ಎಷ್ಟು ಕಡಿಮೆ ಬೆಲೆ ಗೊತ್ತಾ?

ಧರ್ಮಸ್ಥಳ ಕ್ಷೇತ್ರದಲ್ಲಿ ಪ್ರಸಾದದ ಊಟ ಮಾಡುವುದು ಕೂಡ ಪುಣ್ಯವೇ. ಅದರ ರುಚಿಯೂ ಅಷ್ಟೇ ಅದ್ಭುತವಾಗಿರುತ್ತದೆ. ಇನ್ನು ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಯ ಬಗ್ಗೆ ನಿಮಗೂ ಗೊತ್ತಿರಬಹುದು. ಈವರೆಗೆ ಸಾಕಷ್ಟು ಜೋಡಿಗಳು ಮಂಜುನಾಥನ ಆಶೀರ್ವಾದ ಪಡೆದು ಆತನ ಸನ್ನಿಧಾನದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಈ ಸದಾವಕಾಶ ಮತ್ತೆ ಒದಗಿ ಬಂದಿದೆ.

ಮೇ.3ರಂದು ಸಂಜೆ 6.40ರ ಗೋಧೂಳಿ ಮೂಹೂರ್ತದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಇಚ್ಚಿಸುವವರು ಈ ಅವಕಾಶ ಬಳಸಿಕೊಳ್ಳಬಹುದು. ಆದರೆ ಇಲ್ಲಿ ಎರಡನೇ ಮದುವೆ ಅವಕಾಶ ಇಲ್ಲ ಎಂಬುದು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಿ. ಮಧುವಿಗೆ ಸೀರೆ, ರವಿಕೆಕಣ, ಮಂಗಳಸೂತ್ರ, ವರನಿಗೆ ದೋತಿ, ಶಾಲು ಒದಗಿಸಲಾಗುತ್ತದೆ. ಈ ಮದುವೆಯ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಟ್ರಸ್ಟ್ ಭರಿಸಲಿದೆ. ಇದನ್ನೂ ಓದಿ: Darshan Kranti Film: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್: ದಿನೇ ದಿನೇ ಕುಗ್ಗುತ್ತಿದೆ ದರ್ಬಾರ್: ಕ್ರಾಂತಿ ಸಿನೆಮಾಗೆ ಒಳ್ಳೆ ಮಾತುಗಳು ಕೇಳಿ ಬಂದರು ಏನಾಗಿದೆ ಗೊತ್ತೇ??

ಈ ಸಾಮೂಹಿಕ ವಿವಾಹದಲ್ಲಿ ವಿವಾಹ ಆಗಲು ಇಚ್ಚಿಸುವವರು ತಮ್ಮ ಏಪ್ರಿಲ್ 20, 2023ರ ಒಳಗೆ ನಿಮ್ಮ ದಾಖಲೆಗಳನ್ನು ದೇವಸ್ಥಾನದ ಮಂಡಳಿಗೆ ತಲುಪಿಸಿ. ಹೆಚ್ಚಿನ ಮಾಹಿತಿ ಪಡೆಯಲು ಈ ಸಂಖ್ಯೆಗೆ ಕರೆ ಮತ್ತು ಸಂದೇಶ ಕಳುಹಿಸಬಹುದು.

ದೂರವಾಣಿ ಸಂಖ್ಯೆ 08256 26644, ವಾಟ್ಸಾಪ್ 96634 64648 ಸಂಪರ್ಕಿಸಬಹುದಾಗಿದೆ.

Comments are closed.