Benefits of sadabahar (nitya pushpa) plant: ನಿಮ್ಮ ಸುತ್ತ ಮುತ್ತ ಕಣ್ಣಿಗೆ ಬೀಳುವ ಈ ಗಿಡದ ಬಗ್ಗೆ ತಿಳಿದರೆ, ಇಂದೇ ತಂದು ಮನೆಯಲ್ಲಿ ಜೋಪಾನವಾಗಿ ಇಡುತ್ತೀರಿ. ಏನು ಗೊತ್ತೇ??

Benefits of sadabahar (nitya pushpa) plant: ನಮ್ಮ ಸುತ್ತ ಮುತ್ತಲಿನ ಆವರಣದಲ್ಲಿ ಹಲವಾರು ಗಿಡಗಳನ್ನು ನೋಡುತ್ತೇವೆ. ಆ ಗಿಡಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದು ಎಷ್ಟು ಜನರಿಗೆ ಗೊತ್ತು? ನಾವು ಮುಡಿಯುವಮ್ತಹ ಹೂವು ಮಾತ್ರ ಹೂವು ಎಂದು ಭಾವಿಸುತ್ತೇವೆ. ಆದರೆ ಗಿಡದಲ್ಲಿ ಆಗುವ ಸಣ್ನ ಪುಟ್ಟ ಹೂವುಗಳಲ್ಲಿ ಇರುವ ಆರೊಗ್ಯ ಪ್ರಯೋಜನಗಳನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ನಿಸರ್ಗದತ್ತವಾಗಿ ಲಭ್ಯವಿರುವ ಪ್ರತಿಯೊಂದು ಗಿಡವೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ನೇರೆ ಬೇರೆ ಗಿಡಗಳು, ಬೀಜಗಳು, ಹಣ್ಣುಗಳು, ಹೂವುಗಳು ಇತ್ಯಾದಿ ಸಸ್ಯಗಳ ಎಲ್ಲಾ ಭಾಗಗಳು ಕೂಡ ಮಾನವನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯೋಜನ ನೀಡಬಲ್ಲವು. ಅಂದಹಾಗೆ ಪ್ರಕೃತಿಯಲ್ಲಿ ಕಾಣುವ ಅತ್ಯಂತ ಸುಂದರ ಸಸ್ಯ ಅಂದರೆ ಬಿಲ್ಲಗುನ್ನೇರು ಗಿಡ, ಅಥವಾ ನಿತ್ಯಪುಷ್ಫ.

ಹೌದು, ನಿತ್ಯ ಪುಷ್ಪದಲ್ಲಿ ಸಾಕಷ್ಟು ಆರೊಗ್ಯ ಪ್ರಯೋಜನಗಳು ಇವೆ. ಆಯುರ್ವೇದದಲ್ಲಿಯೂ ಕೂಡ ಇದಕ್ಕೆ ವಿಶೇಷವಾದ ಸ್ಥಾನವಿದೆ. ಈ ಸಸ್ಯದ ಹೂವುಗಳಿಂದ ನಮಗೆ ಹಲವಾರು ಆರೋಗ್ಯ ಉಪಯೋಗಗಳಿವೆ. ನಿತ್ಯಪುಷ್ಫದ ಎಲೆಗಳು, ಹೂವು, ಬೇರುಗಳು ಎಲ್ಲವೂ ಒಂದಲ್ಲಾ ಒಂದು ರೋಗಕ್ಕೆ ಮದ್ದೇ! ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಈ ಸಸ್ಯವು ತುಂಬಾ ಸಹಾಯಕ. ಹಾಗಾದರೆ ನಿತ್ಯಪುಷ್ಪದ ಪ್ರಯೋಜನ ಏನು ನೋಡೋಣ.

Benefits of sadabahar nitya pushpa plant 1 | Live Kannada News
Benefits of sadabahar (nitya pushpa) plant: ನಿಮ್ಮ ಸುತ್ತ ಮುತ್ತ ಕಣ್ಣಿಗೆ ಬೀಳುವ ಈ ಗಿಡದ ಬಗ್ಗೆ ತಿಳಿದರೆ, ಇಂದೇ ತಂದು ಮನೆಯಲ್ಲಿ ಜೋಪಾನವಾಗಿ ಇಡುತ್ತೀರಿ. ಏನು ಗೊತ್ತೇ?? https://sihikahinews.com/2023/02/03/benefits-of-sadabahar-nitya-pushpa-plant/

ತುರಿಕೆ ಮತ್ತು ದದ್ದುಗಳು:

ಕೀಟಗಳು ಮತ್ತು ಹುಳುಗಳು ಕಚ್ಚಿದ ಸ್ಥಳದಲ್ಲಿ ತುರಿಕೆ ಮತ್ತು ದದ್ದು ಉಂಟಾದರೆ, ನಿತ್ಯಪುಷ್ಪ ಎಲೆಗಳ ರಸವನ್ನು ಆ ಜಾಗಕ್ಕೆ ಲೇಪಿಸಿದರೆ, ಕೂಡಲೇ ತುರಿಕೆ ನಿಲ್ಲುತ್ತದೆ. ಉರಿಯೂತ ಮತ್ತು ನೋವನ್ನು ಸಹ ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡ(BP):

ನಿತ್ಯಪುಷ್ಪ ಎಲೆಯಿಂದ ರಸವನ್ನು ತೆಗೆದು ದಿನವೂ ಖಾಲಿಹೊಟ್ಟೆಯಲ್ಲಿ ಅದನ್ನು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ: Women marriage: ಶೇಕಡಾ 81 ರಷ್ಟು ಜನ ಹುಡುಗಿಯರಿಗೆ ಮದುವೆ ಬೇಡವಂತೆ; ಆದರೆ. ಮತ್ತೇನು ಬೇಕಂತೆ ಗೊತ್ತೇ??

ಮಾನಸಿಕ ಸಮಸ್ಯೆ:

ಮಾನಸಿಕ ಆತಂಕ, ಒತ್ತಡದಿಂದ ಉಂಟಾಗುವ ನಿದ್ರಾಹೀನತೆ, ಇದರಿಂದ ಕಾಣಿಸಿಕೊಳ್ಳುವ ಖಿನ್ನತೆ ಇಂತಹ ಸಮಸ್ಯೆಗಳಿಗೂ ನಿತ್ಯಪುಷ್ಪ ರಾಮಬಾಣ. ಈ ಯಾವುದೇ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಂಡರೆ ಈ ಗಿಡದ ಎಲೆಯ ರಸವನ್ನು ತೆಗೆದು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಾನಸಿಕ ಸಮಸ್ಯೆ ಕಡಿಮೆಯಾಗುತ್ತದೆ.

ಮುಟ್ಟಿನ ಸಮಸ್ಯೆಗಳು:

ಸಾಮಾನ್ಯವಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಟ್ಟೆನೋವು, ತಲೆ ತಿರುಗುವುದು ಇಂತಹ ಸಮಸ್ಯೆ ಉಂಟಾಗುತ್ತದೆ.  ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ನಿತ್ಯಪುಷ್ಪದ ಐದು ಎಲೆಗಳನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಆ ನೀರನ್ನು ಕುಡಿಯುವುದರಿಂದ ಮುಟ್ಟಿನ ಸಮಯದ ಸಮಸ್ಯೆಗಳು ದೂರವಾಗುತ್ತದೆ. ಇದನ್ನೂ ಓದಿ: BSNL Offer: ಬಿಎಸ್ಎನ್ಎಲ್ ನ ಹೊಸ ಆಫರ್; ಈ ಆಫರ್ ಬಗ್ಗೆ ತಿಳಿದುಕೊಂಡ್ರೆ ನೀವು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡೋದು ಗ್ಯಾರೆಂಟಿ; ಯಾವುದು ಆ ಪ್ಲಾನ್? ಏನೇನು ಸಿಗುತ್ತೇ ಗೊತ್ತಾ?

ಮಧುಮೇಹ:

ಇನ್ನು ಸಕ್ಕರೆ ಖಾಯಿಲೆ ಇದ್ದವರೂ ಕೂಡ ನಿತ್ಯ ಪುಷ್ಪದ ಪ್ರಯೋಜನವನ್ನು ಪಡೆದುಕೊಳ್ಳಬಹುದು.  ನಿತ್ಯಪುಷ್ಪದ ಬೇರುಗಳನ್ನು ತಂದು ಶುದ್ಧ ನೀರಿನಲ್ಲಿ ತೊಳೆದು ನಂತರ ಬೇರುಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಅರ್ಧ ಚಮಚ ನಿತ್ಯಪುಷ್ಪದ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ನಿತ್ಯವೂ ಬೆಳಗ್ಗೆ ಮತ್ತು ರಾತ್ರಿ ಊಟಕ್ಕೂ ಮೊದಲು ಸೇವಿಸಿ. ಪ್ರತಿದಿನ ಹೀಗೆ ಮಾಡುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

Comments are closed.