Real Story: ಫೇಸ್ಬುಕ್ ಮೂಲಕವೇ ಪ್ರೀತಿಸಿ ಮದುವೆಯಾದ ಹುಡುಗಿ: ಆದರೆ ಕೊನೆಯಲ್ಲಿ ಎಂತಹ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತೇ??

Real Story: ಇಂದು ಸೋಶಿಯಲ್ ಮೀಡಿಯಾ (Social Media) ದ ಪ್ರಭಾವ ಎಷ್ಟರಮಟ್ಟಿಗೆ ಇದೆ ಅಂತ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾಕಂದ್ರೆ ನಿಮ್ಮಲ್ಲಿಯೂ ಕೂಡ ಸಾಕಷ್ಟು ಜನ ಸೋಶಿಯಲ್ ಮೀಡಿಯಾವನ್ನು ಬಳಿಸುತ್ತೀರಿ. ಹಾಗಾಗಿ ಅದರ ನೇರ ಪರಿಣಾಮ ಏನು ಎಂಬುದು ನಿಮಗೂ ಗೊತ್ತಿರಬಹುದು. ಸಮಾಜದಲ್ಲಿ ಯಾರು ಎಷ್ಟೇ ಸಲಹೆಯನ್ನು ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿಯೇ ಮೋಸ ಹೋಗಬೇಡಿ ಎಂದು ಎಷ್ಟೇ ಬಡಿದುಕೊಂಡ್ರು ಕೆಲವು ಯುವತಿಯರು ಕುರುಡು ಪ್ರೀತಿಗೆ ಬಲಿ ಆಗುತ್ತಾರೆ. ಇತ್ತೀಚಿಗೆ ಫೇಸ್ಬುಕ್ (facebood) ಪ್ರೇಮದಿಂದ ಯುವತಿ ಒಬ್ಬಳು ತನ್ನ ಪ್ರಾಣವನ್ನು ತೆಗೆದುಕೊಂಡಿದ್ದಾಳೆ.

ಈ ಘಟನೆ ನಡೆದಿರುವುದು ರಾಜ್ಯದ ಹಾಸನ (Hasana) ಜಿಲ್ಲೆಯಲ್ಲಿ. ಬೆಂಗಳೂರಿನ ವಿಜಯನಗರ (Vijaynagar- Bengaluru) ದ 22 ವರ್ಷದ ಸಿರಿ (Siri) ಎನ್ನುವ ಹುಡುಗಿ ಕೆಲವು ತಿಂಗಳ ಹಿಂದೆ ಫೇಸ್ಬುಕ್ ನಲ್ಲಿಯೇ ಒಬ್ಬ ಯುವಕ ನನ್ನ ಪರಿಚಯ ಮಾಡಿಕೊಂಡಿದ್ದಳು. ಆತ ತಾನು ಆದರ್ಶ (Adarsh) ಎಂದು ಪರಿಚಯಿಸಿಕೊಂಡಿದ್ದ. ಇಬ್ಬರು ತಪ್ಪದೆ ಫೇಸ್ಬುಕ್ ನಲ್ಲಿ ಚಾಟ್ ಮಾಡುತ್ತಿದ್ದರು. ನಂತರ ಇಬ್ಬರೂ ಮೊಬೈಲ್ ನಂಬರ್ ಕೂಡ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Team India: ಭಾರತದ ಪಿಚ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಆಸ್ಟ್ರೇಲಿಯಾ ಆಟಗಾರ. ಒಂದೇ ಮಾತಿನಲ್ಲಿ ರವಿಚಂದ್ರನ್ ಅಶ್ವಿನಿ ಹೇಳಿದ್ದೇನು ಗೊತ್ತೇ??

ಹೀಗೆ ಇಬ್ಬರ ನಡುವೆ ಮಾತುಕತೆಯ ಮುಂದುವರೆದು ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿದೆ. ಕೆಲವು ತಿಂಗಳಗಳ ಕಾಲ ಮಾತಿನಲ್ಲಿಯೇ ಪ್ರೀತಿಸುತ್ತಿದ್ದ ಈ ಜೋಡಿ ನಂತರ ಒಟ್ಟಿಗೆ ವಾಸಿಸಲು ಕೂಡ ನಿರ್ಧಾರ ಮಾಡಿಬಿಟ್ಟಿತ್ತು. ಇಬ್ಬರು ಮನೆ ಬಿಟ್ಟು ಹೊರಗೆ ಬಂದರು ಗುಂಡೇನಹಳ್ಳಿ ಎಂಬ ಹಳ್ಳಿಯಲ್ಲಿ ತಾವಿಬ್ಬರು ಮದುವೆ ಆಗುವವರು ಎಂದು ಹೇಳಿ ಒಂದು ಮನೆಯಲ್ಲಿ ಬಾಡಿಗೆಯನ್ನು ಕೂಡ ಪಡೆದುಕೊಳ್ಳುತ್ತಾರೆ. ಈ ಇಬ್ಬರೂ ಕೂಡ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ತಕ್ಕಮಟ್ಟಿಗೆ ಹಣ ಸಂಪಾದಿಸಿಕೊಂಡು ಇದ್ದರು. ಇದನ್ನೂ ಓದಿ: Sunday Special Recipe: ರಜಾ ದಿನ ಮಕ್ಕಳಿಗೆ ಹೀಗೆ ಮಾಡಿಕೊಡಿ ರಾಗಿ ಪಿಜ್ಜಾ; ಪಿಜ್ಜಾ ಶಾಪ್ ಗಳಿಗೆ ಹೋಗುವ ಅಗತ್ಯವೇ ಇಲ್ಲಾ ನೋಡಿ!

ಆದರೆ ಒಂದು ದಿನ ಇದ್ದಕ್ಕಿದ್ದಂತೆ ಅಚಾನಕ್ ಆಗಿ ಅದೇ ಬಾಡಿಗೆ ಮನೆಯಲ್ಲಿ ಆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಸಾವು ಹೇಗೆ ಆಯ್ತು ಅನ್ನುವುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸಿರಿ ಮನೆಯಲ್ಲಿ ಶವವಾಗಿ ಪತ್ತೆಯಾದಾಗ ಆ ಸ್ಥಳದಲ್ಲಿ ಆದರ್ಶ ಇರಲಿಲ್ಲ ಹಾಗಾಗಿ ಪೊಲೀಸರಿಗೆ ಸಹಜವಾಗಿಯೇ ಅನುಮಾನ ಬಂದಿದೆ ಇದೀಗ ಆದರ್ಶನ ತಲಾಷ್ ನಡೆಸಲಾಗುತ್ತಿದೆ. ಸಿರಿಯನ್ನ ಕೊಂದು ಆತ ಇಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ನಿಜವಾಗಲೂ ಇವರಿಬ್ಬರ ನಡುವೆ ನಡೆದಿದ್ದೇನು ಇವರಿಬ್ಬರು ಮದುವೆ ಆಗಿದ್ದರಾ? ಅಥವಾ ಒಟ್ಟಾಗಿ ಇದ್ದರೇ? ಈ ಎಲ್ಲಾ ವಿಷಯಗಳ ಬಗ್ಗೆ ಕುತೂಹಲ ಹೆಚ್ಚಿದ್ದು ಪೊಲೀಸರ ತನಿಖೆಯ ನಂತರವಷ್ಟೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕು.

Comments are closed.