Cricket news: ಮದುವೆಯಾದ ಬಳಿಕ ಹನಿಮೂನ್ ಗೆ ಹೋಗದೆ KL ರಾಹುಲ್ ಮಾಡುತ್ತಿರುವುದೇನು ಗೊತ್ತೇ?? ಹೀಗಾದರೆ ಆಥಿಯಾ ಕಥೆ ಏನು?

Cricket news: ಇದೇ ಬರುವ ಫೆಬ್ರವರಿ 9ರಂದು ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಆಸಿಸ್ ಹಾಗೂ ಟೀಮ್ ಇಂಡಿಯಾ ನಡುವೆ ಸೆಣೆಸಾಟ ನಡೆಯಲಿದೆ. ಇಂಡಿಯಾದ ಕೆಲವು ಆಟಗಾರರು ಮೊದಲ ಟೆಸ್ಟ್ ಆಡುವುದಕ್ಕೆ ನಾಗ್ಪುರಕ್ಕೆ ತಲುಪಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಕೂಡ ಸೇರಿಕೊಂಡಿದ್ದಾರೆ.

ಹೌದು ಫೆಬ್ರುವರಿ 9 ರಿಂದ ಶುರುವಾಗುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ಸಜಾಗುತ್ತಿದೆ. ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ವಿರಾಟ್ ಕೊಹ್ಲಿ ಕೆ ಎಲ್ ರಾಹುಲ್ ಸೇರಿದ ಟೀಮ್ ಇಂಡಿಯಾ ತಂಡ ನಾಗ್ಪುರಕ್ಕೆ ಟೆಸ್ಟ್ ಗಾಗಿ ತಲುಪಿದೆ. ತಲುಪಿದ ಮೊದಲ ದಿನವೇ ಮೈದಾನದಲ್ಲಿ ಪ್ರಾಕ್ಟಿಸ್ ಕೂಡ ಶುರು ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ್, ರವೀಂದ್ರ ಜಡೇಜಾ ಹಾಗೂ ಕೆ ಎಲ್ ರಾಹುಲ್ ನೆಟ್ ಅಭ್ಯಾಸ ಮಾಡುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಮಾರು ಐದು ತಿಂಗಳಗಳ ಬಳಿಕ ಜಡೇಜಾ ತಂಡಕ್ಕೆ ಮರಳಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಭಾರತದ ವೈಟ್ ಬಾಲ್ ಸ್ಪೆಷಲಿಸ್ಟ್ ವಾಷಿಂಗ್ಟನ್ ಸುಂದರ್ ಕೂಡ ನೆಟ್ ಬೌಲರ್ ಆಗಿ ಸೇರಿಕೊಂಡಿದ್ದಾರೆ. ಅದೇ ರೀತಿಯಾಗಿ ಎಡಗೈ ಸ್ಪಿನ್ನರ್ ಗಳಾದ ಸೌರಭ್ ಕುಮಾರ್ ಹಾಗೂ ಆರ್ ಸಾಯಿ ಕಿಶೋರ್ ರಿಸ್ಟ್ ಸ್ಪಿನ್ನರ್ ರಾಹುಲ್ ಚಹರ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆಸ್ಟ್ರೇಲಿಯಾ ತಂಡ ಕೂಡ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿರುವಂತೆ ಕಂಡು ಬರುತ್ತಿದೆ ನೆಕ್ಸ್ಟ್ ನಲ್ಲಿ ಬೌಲಿಂಗ್ ಮಾಡಲು ಜಮ್ಮು ಕಾಶ್ಮೀರದ ಮಿಸ್ಟರಿ ಸ್ಪಿನ್ನರ್ ಅಬಿದ್ ಮುಷ್ತಾಕ್ ಇದ್ದಾರೆ.

ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ನಂತರ ಮಾರ್ಚ್ 17 ರಿಂದ ಏಕದಿನ ಸರಣಿ ಆರಂಭವಾಗಲಿದೆ ತುಂಬಾ ಮಹತ್ವದ್ದು ಸರಣಿಯಲ್ಲಿ ಜಯಗಳಿಸಿದರೆ ಭಾರತ ತಂಡವು ವಿಶ್ವ ಟೆಸ್ಟು ಚಾಂಪಿಯನ್ಶಿಪ್ ಫೈನಲ್ ಗು ಕೂಡ ಹೋಗಬಹುದು. ಇನ್ನು ಇತ್ತಿಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆ.ಎಲ್ ರಾಹುಲ್ ಆಗಲೇ ಕ್ರಿಕೆಟ್ ಕಣಕ್ಕಿಳಿದಿದ್ದು, ಅಭಿಮಾನಿಗಳು ರಾಹುಲ್ ಡೆಡಿಕೇಶನ್ ಗೆ ಶಹಬ್ಬಾಶ್ ಹೇಳಿದ್ದಾರೆ.

Comments are closed.