Sunday Special Recipe: ರಜಾ ದಿನ ಮಕ್ಕಳಿಗೆ ಹೀಗೆ ಮಾಡಿಕೊಡಿ ರಾಗಿ ಪಿಜ್ಜಾ; ಪಿಜ್ಜಾ ಶಾಪ್ ಗಳಿಗೆ ಹೋಗುವ ಅಗತ್ಯವೇ ಇಲ್ಲಾ ನೋಡಿ!

Sunday Special Recipe: ಮಕ್ಕಳಿಗೆ ರಜಾ ದಿನಗಳಲ್ಲಿ ಏನಾದರೂ ತಿನ್ನೋದಕ್ಕೆ ವಿಶೇಷವಾಗಿ ಮಾಡಿಕೊಡಲೇಬೇಕು ಅಲ್ವಾ? ಆದ್ರೆ ಪ್ರತಿ ಭಾನುವಾರವೂ ದೋಸೆ ಚಪಾತಿ ಅಥವಾ ಇತರ ಸ್ನಾಕ್ಸ್ ಮಾಡಿಕೊಟ್ರೆ ಮಕ್ಕಳಿಗೂ ತಿನ್ನೋದಕ್ಕೆ ಬೋರ್. ಹಾಗಾಗಿ ಸಂಡೇ ಆದ್ರೆ ಸಾಕು, ಎಲ್ಲಾದ್ರೂ ಹೊರಗಡೆ ಹೋಗೋಣ ಅಂತ ರಚ್ಚೆ ಹಿಡಿಯುತ್ತಾರೆ. ಮಕ್ಕಳಿಗೆ ಹೊರಗಡೆ ಜಂಕ್ ಪುಡ್ ತಿನ್ನಿಸುವುದಕ್ಕಿಂತ ಈ ತರಹ ರುಚಿಯಾದ ಪಿಜ್ಜಾ (pizza)ವನ್ನು ಮನೆಯಲ್ಲಿಯೇ ತಯಾರಿಸಿ ನೋಡಿ. ಮಕ್ಕಳು ಇಷ್ಟಪಟ್ಟು ತಿಂತಾರೆ.

ರಾಗಿ ಪಿಜ್ಜಾ ಮಾಡಲು ಬೇಕಾಗುವ ಪದಾರ್ಥಗಳು:

2 ಕಪ್ ರಾಗಿ ಹಿಟ್ಟು

2 ಚಮಚ ತುಪ್ಪ

ಉಗುರು ಬೆಚ್ಚಗಿನ ನೀರು ಸ್ವಲ್ಪ

2-3 ಚಮಚ  ಪಿಜ್ಜಾ ಸಾಸ್

ಕಲ್ಲು ಉಪ್ಪು

ಒಂದು ದೊಡ್ಡ ಈರುಳ್ಳಿ -ಕತ್ತರಿಸಿದ್ದು

1 ಟೊಮೆಟೊ- ಕತ್ತರಿಸಿದ್ದು

1 ಕ್ಯಾಪ್ಸಿಕಂ- ಕತ್ತರಿಸಿದ್ದು

ಬೇಯಿಸಿದ ಕಾರ್ನ್ ಸ್ವಲ್ಪ

ಆರೋಗ್ಯಕರ ಚೀಸ್,

ರಾಗಿ ಪಿಜ್ಜಾ ತಯಾರಿಸುವ ವಿಧಾನ ಸುಲಭ ನೋಡಿ:

ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಸೋಸಿ ಹಾಕಿ. ನಂತರ ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಬಳಿಕ ರಾಗಿ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನಿಂದ ಬೆರೆಸಿ. ಹತ್ತು ನಿಮಿಷ ಹಾಗೇ ನೆನೆಯಲು ಬಿಡಿ.

ಈಗ ಒಂದು ಪ್ಯಾನ್ ಬಿಸಿ ಮಾಡ್ ರಾಗಿ ಹಿಟ್ಟಿನ  ಪಿಜ್ಜಾ (ಶೇಪ್ ಮಾಡಿಕೊಳ್ಳಿ) ಗರಿಗರಿಯಾಗುವವರೆಗೆ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ. ಟಾಪಿಂಗ್ ಮಾದಲು ಕತ್ತರಿಇಸ್ ಇಟ್ಟುಕೊಂಡ ತರಕಾರಿ ಹಾಕಬೇಕು. 2 ರಿಂದ 3 ಸ್ಪೂನ್ ಪಿಜ್ಜಾ ಸಾಸ್ ಹಾಗೂ ಸಣ್ಣದಾಗಿ ಕೊಚ್ಚಿದ ತರಕಾರಿ  ಸೇರಿಸಿ. ಅಗತ್ಯವಿದ್ದರೆ ಬೇಕಾದಷ್ಟು ಉಪ್ಪನ್ನು ಸೇರಿಸಿ. ಅರ್ಧ ಟೀಚಮಚ ಓರೆಗಾನೊ ಸೇರಿಸಿ. ಪಿಜ್ಜಾ ಬೇಸ್‌ ಗಳ ಮೇಲೆ ಸ್ವಲ್ಪ ದೇಸಿ ತುಪ್ಪ ಸವರಿ.  ಈಗ ಟಾಪಿಂಗ್ ಮಿಶ್ರಣ ಹಾಗೂ ಚೀಸ್ ಹಾಕಿ.  ಪಿಜ್ಜಾವನ್ನು ಬ್ಯಿಸಿ. ಚೀಸ್ ಕರಗಿದ ಮೇಲೆ ಸವಿಯಲು ಕೊಡಿ.

Comments are closed.