Actor Vijay: ನೋಡಲು ಬಂದ ಅಭಿಮಾನಿಯನ್ನು ಪ್ರೀತಿಸಿದ್ದ ವಿಜಯ್, ಮದುವೆಯಾಗುವಾಗ ಆಕೆ ಹಿಂದು ಎಂದು ತಿಳಿದಾಗ ಮಾಡಿದ್ದೇನು ಗೊತ್ತೇ??

Actor Vijay: ಮದುವೆ (Marriage) ಎನ್ನುವುದು ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಹೊಸ ಅನುಭವವನ್ನು ನೀಡುತ್ತದೆ. ಕೆಲವರು ಮದುವೆಯ ಬಗ್ಗೆ ಬಹಳ ದೊಡ್ಡ ಕನಸನ್ನು ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಕೆಲವು ಹೆಣ್ಣು ಮಕ್ಕಳು ಸ್ಟಾರ್ ನಟ (Star actor) ರನ್ನು ಮದುವೆ ಆಗುವುದಕ್ಕೆ ಕನಸು ಕಟ್ಟಿಕೊಂಡಿರುತ್ತಾರೆ. ಕೆಲವೊಮ್ಮೆ ಅದು ನಿಜವಾದ ಆಗುವ ಸಂತೋಷಕ್ಕೆ, ಆನಂದಕ್ಕೆ ಪಾರವೇ ಇರುವುದಿಲ್ಲ. ಇಂತಹ ಅದೃಷ್ಟ ಒಲಿದು ಬಂದಿದ್ದು ಸಂಗೀತ ಅವರಿಗೆ.

ಹೌದು ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರು ತಮ್ಮ ಅಭಿಮಾನಿಯನ್ನು ಮದುವೆಯಾಗಿದ್ದಾರೆ. ಅವರೇ ಸಂಗೀತ. ನಟರು ಹೆಚ್ಚಾಗಿ ಪ್ರೀತಿಸಿಯೇ ಮದುವೆ (Love marriage)  ಆಗುತ್ತಾರೆ ಅಥವಾ ಕೆಲವರು ಮನೆಯಲ್ಲಿ ಹಿರಿಯರು ನಿಶ್ಚಯಿಸಿದ ಹುಡುಗಿಯನ್ನು ಮದುವೆ ಆಗುವವರು ಇದ್ದಾರೆ ಆದರೆ ಹೀಗೆ ಅಭಿಮಾನಿಯನ್ನು ಮದುವೆಯಾಗಿದ್ದು ಬಹುಶ: ಅತಿ ಕಡಿಮೆ ಜನರಲ್ಲಿ ದಳಪತಿ ಅವರು ಕೂಡ ಒಬ್ಬರು ಎನ್ನಬಹುದು.

21 ವರ್ಷದ ದಾಂಪತ್ಯ ಮುಗಿಸಿದ ದಳಪತಿ ವಿಜಯ್ ಸಂಗೀತ

ಇತ್ತೀಚಿಗೆ ದಳಪತಿ ವಿಜಯ್ ಹಾಗೂ ಅವರ ಪತ್ನಿಯ ಸಂಗೀತ (Sangeeta) ಇಬ್ಬರು ವಿಚ್ಛೇದನ (Divorce) ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಚಿತ್ರರಂಗದ ತುಂಬಾ ಹರಿದಾಡುತ್ತಿದೆ. ನಟ ವಿಜಯ್ ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಕಳೆದಿವೆ ಆದರೆ ಅವರ ಚಾರ್ಮ್ ಮಾತ್ರ ಇಂದಿಗೂ ಕಡಿಮೆ ಆಗಿಲ್ಲ. ಇವರು ಎವರ್ ಗ್ರೀನ್ ಸ್ಟಾರ್ ಆಗಿದ್ದು ಮದುವೆ ಆಗಿದ್ದು ಗೊತ್ತಿದ್ದರೂ ಕೂಡ ಈಗಲೂ ಹೆಣ್ಣು ಮಕ್ಕಳಿಗೆ ಅವರು ಅಂದ್ರೆ ತುಂಬಾನೇ ಇಷ್ಟ. ಹೀಗೆ ಅಭಿಮಾನಿಯನ್ನೇ ಮದುವೆಯಾದ ವಿಜಯ್ ಹಾಗೂ ಸಂಗೀತ ಅವರಿಗೆ ಇದೀಗ 21ನೇ ವರ್ಷದ ವಿವಾಹ ವಾರ್ಷಿಕೋತ್ಸವ (21st marriage anniversary) . ಇನ್ನು ವಿಶೇಷ ಹಾಗೂ ಸಂಗೀತ ಅವರಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾಳೆ.

ಲಂಡನ್ ನಿಂದಲೇ ಪ್ರೀತಿಸಿದ್ದ ಸಂಗೀತ;

ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದ ಸಂಗೀತ ಲಂಡನ್ (London)  ನಲ್ಲಿ ಇದ್ದರು ಅವರು ವಿಜಯ್ ಅವರನ್ನು ನೋಡಲು 1996ರಲ್ಲಿ ಯುಕೆ ಇಂದ ಚೆನ್ನೈಗೆ ಬರುತ್ತಾರೆ. ಸಂಗೀತ ಅವರನ್ನ ವಿಜಯ್ ಕೂಡ ಚೆನ್ನಾಗಿ ಮಾತನಾಡಿಸುತ್ತಾರೆ ಹಾಗಾಗಿ ವಿಜಯ್ ನೋಡಲು ಸಂಗೀತ ಪದೇಪದೇ ಚೆನ್ನೈಗೆ ಹೋಗುವುದು ಬರುವುದು ಮಾಡುತ್ತಾರೆ. ಒಮ್ಮೆ ವಿಜಯ್ ಸಂಗೀತ ಅವರನ್ನ ಮನೆಗೆ ಕರೆದುಕೊಂಡು ಹೋಗಿ ತಂದೆ ತಾಯಿಗೂ ಪರಿಚಯ ಮಾಡಿಸಿದರಂತೆ. ಆ ಸಮಯದಲ್ಲಿ ಟಾಪ್ ನಲ್ಲಿ ಇದ್ದ ನಂಬರ್ ಒನ್ ನಟ ದಳಪತಿ ವಿಜಯ್.

ಧರ್ಮ ಜಾತಿ ಮೀರಿದ ಮದುವೆ:

ವಿಜಯ್ ಗೆ ಮದುವೆ ಮಾಡಬೇಕು ಅಂತ ಅವರ ಪಾಲಕರು ತೀರ್ಮಾನ ಮಾಡುತ್ತಾರೆ ಆಗ ಕಣ್ಮುಂದೆ ಬಂದಿದ್ದೆ ಸಂಗೀತ. ಎರಡು ಕುಟುಂಬದವರು ಒಟ್ಟಾಗಿ ಸೇರಿ ಸಂಗೀತ ಅವರನ್ನ ಮಾತನಾಡಿಸಿ ವಿಜಯ್ ಜೊತೆ ಮದುವೆ ಗೊತ್ತು ಮಾಡುತ್ತಾರೆ. 1999 ಆಗಸ್ಟ್ 25ರಂದು ವಿಜಯ್ ಸಂಗೀತ ಅವರ ಕೈ ಹಿಡಿಯುತ್ತಾರೆ. ಇನ್ನು ಇಲ್ಲಿ ಆಶ್ಚರ್ಯಕರವಾದ ವಿಷಯ ಅಂದ್ರೆ ವಿಜಯ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಆದರೆ ಸಂಗೀತ ಹಿಂದೂ ಧರ್ಮದವರು. ಎರಡು ಮನೆಗೆ ಒಪ್ಪಿಗೆ ಇದ್ದ ಕಾರಣ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಸಂಪ್ರದಾಯದಂತೆ ಈ ಮದುವೆ ನೆರವೇರುತ್ತೆ. ಈ ದಂಪತಿಗೆ ಜಾಸೋನ್ ಸಂಜಯ್ ಹಾಗೂ ದಿವ್ಯ ಸಾಷ ಎನ್ನುವ  ಹೆಸರಿಸಿ ಮಕ್ಕಳಿದ್ದಾರೆ.

ಇನ್ನು ದಳಪತಿ ವಿಜಯ್ ಹಾಗೂ ಸಂಗೀತ ಅವರ 21ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ವಿಷಸ್ ಮಾಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವಿಜಯ್ ಅವರಿಗೆ ಶುಭಾಶಯಗಳು ಸುರಿಮಳೆಯೇ ಬಂದಿದೆ.

Comments are closed.