Relationship: ಹೆಂಡತಿಯರು ಯಾರು ಸುಮ್ಮನೆ ಮೋಸ ಮಾಡುವುದಿಲ್ಲ, ಗಂಡನಿಗೆ ಮೋಸ ಮಾಡಲು ಇರುವ ಮೂರು ಕಾರಣಗಳೇನು ಗೊತ್ತೇ?

Relationship: ಹಿಂದೆಲ್ಲಾ ಒಬ್ಬ ವ್ಯಕ್ತಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಬೇಕು ಅಂದ್ರೆ ತಂದೆ ತಾಯಿಗೆ ಸಿಕ್ಕಾಪಟ್ಟೆ ಯೋಚನೆಯಾಗುತ್ತಿತ್ತು. ಯಾಕಂದ್ರೆ ಗಂಡಸರು ಮದುವೆ ಆದಮೇಲೂ ಇನ್ನೊಂದು ಸಂಬಂಧವನ್ನು ಹೊಂದಿರುವುದು ಬಹಳ ಕಾಮನ್ ಆಗಿತ್ತು. ಆದರೆ ಈಗ ಕಾಲಮಾನವೇ ಬದಲಾಗಿದೆ. ಗಂಡಂದಿರು ಬಿಡಿ, ಮಹಿಳೆಯರೇ ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನು ಇಟ್ಟುಕೊಳ್ಳಲು ಆರಂಭಿಸಿದ್ದಾರೆ. ಹಾಗಾದರೆ, ಹೆಂಡತಿ ಗಂದನಿಗೆ ಮೋಸ ಮಾಡಲು ಮುಖ್ಯವಾದ ಕಾರಣ ಏನಿರಬಹುದು ನೋಡೋಣ. ಮನಶ್ಯಾಸ್ತ್ರಜ್ಞರ ಪ್ರಕಾರ ಕಾರಣಗಳು ಈ ರೀತಿ ಇವೆ.

ಹಳೆಯ ಸಂಬಂಧ ಮರೆಯುವಲ್ಲಿ ವಿಫಲರಾಗುತಾರೆ

ಮದುವೆಗೆ ಮುಂಚೆ ಯಾರನ್ನಾದರೂ ಪ್ರೀತಿಸಿದರೆ, ಅನಿವಾರ್ಯ ಕಾರಣದಿಂದ ಅವರನ್ನು ಮದುವೆಯಾಫ಼್ಗಲು ಸಾಧ್ಯವಾಗದೇ ಇದ್ದಲ್ಲಿ, ಬೇರೆಯವರನ್ನು ಮದುವೆಯಾದ ನಂತರ ಅವರನ್ನು ಮರೆತುಬಿಡಬೇಕು. ಹೊಸ ಜೀವನವನ್ನು ಪ್ರಾರಂಭಿಸಬೇಕು. ಆದರೆ ಕೆಲವು ಮಹಿಳೆಯರು ಹಾಗೆ ಮಾಡದೆ ಹಳೆಯ ನೆನಪುಗಳಲ್ಲಿಯೇ ಇರುತ್ತಾರೆ… ಅವರೊಂದಿಗೆ ಸಂಬಂಧವನ್ನು ಕೂಡ ಮುಂದುವರಿಸುತ್ತಾರೆ.

ಪತಿಗೆ ಪ್ರೀತಿಯ ಕೊರತೆ

ಕೆಲವು ಹೆಣ್ಣುಮಕ್ಕಳಿಗೆ ಮದುವೆಯಾದ ನಂತರ ಗಂಡನ ಮೇಲೆ ಪ್ರೀತಿ ಇರುವುದಿಲ್ಲ. ಹಾಗಾಗಿ ಹೆಂಡತಿಯರೂ ಮೋಸ ಮಾಡುತ್ತಾರೆ. ಅದರಲ್ಲೂ ಹೆತ್ತವರ ಒತ್ತಾಯಕ್ಕೆ ಮದುವೆಯಾದವರಂತೂ  ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

ಪ್ರೀತಿಸುವ ಪತಿ ಸಿಗದಿದ್ಡಾಗ

ಮದುವೆಯ ನಂತರ ಗಂಡನ ನಡವಳಿಕೆಯೂ ಹೆಂಡತಿಯನ್ನು ಬದಲಾಗುತ್ತದೆ. ಕೆಲವರು ಮದುವೆಯ ನಂತರ ಹೆಂಡತಿಯ ಮೇಲೆ ದೌರ್ಜನ್ಯ ನಡೆಸುತ್ತಾರೆ. ತೊಂದರೆ ಕೊಡುತ್ತಾರೆ. ಆ ಮೂಲಕ ಗಂಡನ ಮೇಲಿನ ಪ್ರೀತಿಯನ್ನು ಹೆಂಡತಿ ಕಳೆದುಕೊಳ್ಳುತ್ತಾಳೆ. ಮತ್ತು ಆ ಸಂತೋಷವನ್ನು ಬೇರೊಬ್ಬರಲ್ಲಿ ಹುಡುಕಲು ಆರಂಭಿಸುತ್ತಾಳೆ.

Comments are closed.