Political News: ಭರ್ಜರಿ ಬೇಟೆ: ಜೆಡಿಎಸ್ ಗೆ ಬಿಗ್ ಶಾಕ್: ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ. ಯಾವ ಪಕ್ಷ ಗೊತ್ತೇ??

Political News: ರಾಜ್ಯ ರಾಜಕಾರಣಕ್ಕೆ ಮತ್ತೆ ಮಂಡ್ಯ ಸಂಸದ ಸುಮಲತಾ ಅಂಬರೀಶ್ (Sumalata Ambareesh) ಬರುವ ಸುಳಿವು ಸಿಕ್ಕಿದೆ, ಮಾಧ್ಯಮದೊಂದಿಗೆ ಮಾತನಾಡಿರುವ ಸುಮಲತಾ ಅವರ ಆಪ್ತ ಹನಕೆರೆ ಶಿವಕುಮಾರ್ (Hanakere Shivakumar) ಸ್ಫೋಟಕವಾದ ಮಾಹಿತಿ ಒಂದನ್ನು ನೀಡಿದ್ದಾರೆ. ಒಬ್ಬ ಅಭಿನೇತ್ರಿ ಆಗಿ ಸಿನಿಮಾ ರಂಗದಲ್ಲಿ ಅಭಿಮಾನಿಗಳನ್ನ ಗಳಿಸಿಕೊಂಡಷ್ಟು ರಾಜಕೀಯದಲ್ಲಿ ಅಭಿಮಾನಿಗಳನ್ನ ಗಳಿಸಿಕೊಳ್ಳುವುದು ಸುಲಭವಲ್ಲ ಆದರೆ ಅಂಬರೀಶ್ ಅವರು ಕಳೆದ 25 ವರ್ಷಗಳಿಂದ ಕಾಂಗ್ರೆಸ್ (Congress) ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಆ ಹಿನ್ನೆಲೆಯಲ್ಲಿ ಸುಮಲತಾ ಅವರಿಗೂ ಕೂಡ ಮಂಡ್ಯ(Mandya) ದಲ್ಲಿ ರಾಜಕೀಯ (Politics) ಪ್ರವೇಶ ಮಾಡಿದಾಗ ಅದ್ದೂರಿಯಾದ ಸ್ವಾಗತ ಸಿಕ್ಕಿತ್ತು.

ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಹೊಂದಿದ್ದು ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಮಂಡ್ಯದಲ್ಲಿ ಗೆಲುವನ್ನು ಸಾಧಿಸಿದ್ದರು. ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಏರಿದೆ ಶೀರ್ಘದಲ್ಲಿಯೇ ಚುನಾವಣಾ ದಿನಾಂಕ ಕೂಡ ಘೋಷಣೆ ಆಗಲಿದೆ. ಇನ್ನು ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:Kannada Astrology: ಇಂದಿನಿಂದ ನೀವು ಮುಟ್ಟಿದೆಲ್ಲಾ ಚಿನ್ನ: ಈ ಐದು ರಾಶಿಗಳ ಅದೃಷ್ಟವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಸುಮಲತಾ ಬೆಂಬಲಿಗರ ಸಭೆಯಲ್ಲಿ ತೀರ್ಮಾನವಾಗಿದ್ದೇನು?

ಜನವರಿ 31 ರಂದು ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ನಡೆಸಲಾಗಿತ್ತು ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹನಕೆರೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಬಲಿಗರ ಒತ್ತಾಯಕ್ಕೆ ಮಣಿದು ಸುಮಲತಾ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ; Real Story: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಸ್ನೇಹಿತನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?

ಬಿಜೆಪಿ ಸೇರುತ್ತಾರಾ ಸುಮಲತಾ ಅಂಬರೀಷ್?

ಇನ್ನು ಶನಿವಾರ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ (C.D. Gangadhar) ತಮ್ಮ ಕಾರ್ಯಕರ್ತರಿಗೆ ಸುಮಲತಾ ಅವರ ಸಭೆಗಳಿಗೆ ಹೋಗಬಾರದು ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಮಾತನಾಡಿದ ಶಿವಕುಮಾರ್ ತಿರುಗೇಟು ನೀಡಿದ್ದು ಅಭಿಮಾನಿಗಳನ್ನ ತಡೆಯುವ ಪ್ರಯತ್ನ ಮಾಡಿದರೆ ಕಾಂಗ್ರೆಸ್ ಪತನವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಅಂಬರೀಶ್ ಅವರು ಸುಧೀರ್ಘ 25 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದು ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದಾರೆ. ಸುಮಲತಾ ಅವರ ವಿರುದ್ಧ ತಿರುಗಿ ಬಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂದಿದ್ದಾರೆ. ಇನ್ನು ಸಭೆಯ ನಂತರ ಸುಮಲತಾ ಅವರು ಬಿಜೆಪಿ ಪಕ್ಷವನ್ನು ಸೇರುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಲಭ್ಯವಿದೆ. ಇನ್ನು ಈ ಬಗ್ಗೆ ಸುಮಲತಾ ಅವರ ಸ್ಪಷ್ಟನೆಯನ್ನು ನೀಡಬೇಕಿದೆ.

Comments are closed.