Vastu Tips: ಈ ಚಿಕ್ಕ ವಾಸ್ತು ದೋಷ ಲಕ್ಷ್ಮಿಯನ್ನು ಮನೆಯಿಂದ ಓಡಿಸುತ್ತದೆ, ಲಕ್ಷ್ಮಿ ಮನೆಯಲ್ಲಿಯೇ ಶಾಶ್ವತವಾಗಿರಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿ.

Vastu Tips: ಲಕ್ಷ್ಮಿ ಸಂಪತ್ತಿನ ಅಧಿದೇವತೆ ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ ಮನೆಯಲ್ಲಿ ಲಕ್ಷ್ಮಿ ನೆಲೆಸಿದರೆ ಆ ಮನೆಯಲ್ಲಿ ಸಮೃದ್ಧಿ ಶಾಂತಿ ಇರುತ್ತದೆ. ಎಲ್ಲರಿಗೂ ಲಕ್ಷ್ಮಿ ದೇವಿಯ ಕೃಪೆ ಬೇಕೇ ಬೇಕು. ಹಾಗಾದರೆ ಮಾತ್ರ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದೆ. ಕೆಲವರು ಎಷ್ಟು ಕಷ್ಟಪಟ್ಟು ದುಡಿದರು ಒಂದು ರೂಪಾಯಿ ಕೂಡ ಉಳಿಸಲು ಸಾಧ್ಯವಿಲ್ಲ. ಮನೆಯಲ್ಲಿ ವಾಸ್ತು ಪರಿಸ್ಥಿತಿ ಸರಿ ಇಲ್ಲದೆ ಇದ್ರೆ ಇಂತಹ ಸಮಸ್ಯೆ ಕಾಡಬಹುದು. ಪ್ರಕಾರ ನೀವು ಮನೆಯಲ್ಲಿ ಕೆಲವು ವಸ್ತುಗಳನ್ನು ನಿರ್ದಿಷ್ಟವಾಗಿ ಇಂತಹದ್ದೇ ದಿಕ್ಕಿನಲ್ಲಿ ಇಡಬೇಕು ಇಲ್ಲದೆ ಹೋದರೆ ನಕಾರಾತ್ಮಕ ಶಕ್ತಿಯಿಂದ ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

ವಾಸ್ತು ಟಿಪ್ಸ್ ನಿಂದ ಲಕ್ಷ್ಮಿಯನ್ನು ಮನೆಗೆ ಕರೆತನ್ನಿ:

ಮೊದಲನೆಯದಾಗಿ ಮನೆಯ ಮುಖ್ಯಬಾಗಿಲು ಯಾವಾಗಲೂ ಒಳಮುಖವಾಗಿ ತೆರೆದಿರಬೇಕು. ಅದೇ ರೀತಿ ಈ ಬಾಗಿಲು ಉತ್ತರ ಭಾಗದಲ್ಲಿ ಇದ್ದರೆ ಒಳ್ಳೆಯದು. ಹೀಗಿದ್ದಾಗ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸಿರುತ್ತದೆ. ಬಾಗಿಲು ಹೊರಕ್ಕೆ ತೆಗೆದ ರೀತಿಯಲ್ಲಿ ಇದ್ದರೆ ಜೊತೆಗೆ ಸರಿಯಾದ ದಿಕ್ಕಿನಲ್ಲಿ ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ಇದರಿಂದ ಮನೆಯಲ್ಲಿ ಅಶಾಂತಿ ಬಡತನ ದುಃಖ ಆರಂಭವಾಗುತ್ತದೆ. ಶುದ್ಧವಾಗಿರುವಂತೆ ನೋಡಿಕೊಳ್ಳಿ ಕೊಳೆ ಇದ್ದರೆ ಲಕ್ಷ್ಮೀದೇವಿ ಮನೆಗೆ ಪ್ರವೇಶ ಮಾಡುವುದಿಲ್ಲ. ಇದನ್ನೂ ಓದಿ: Cricket News: ಸಿರಾಜ್ ಮತ್ತು ಶುಭಮಂ ಗಿಲ್ ನಡುವೆ ಸೃಷ್ಟಿಯಾದ ಪೈಪೋಟಿ: ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಐಸಿಸಿ. ಏನಾಗಿದೆ ಗೊತ್ತೇ??

ಇನ್ನು ಮನೆಯಲ್ಲಿ ಪೀಠೋಪಕರಣಗಳನ್ನು ಕೂಡ ವಾಸ್ತು ಪ್ರಕಾರವೇ ಇಡಬೇಕು. ಹಗುರವಾದ ಪೀಠೋಪಕರಣಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಹುದು ಅದೇ ರೀತಿ ಭಾರವಾದ ಪೀಠೋಪಕರಣಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇಲ್ಲದೇ ಇದ್ದರೆ ವಾಸ್ತುದೋಷ ಉಂಟಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಲಕ್ಷ್ಮೀದೇವಿ ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯಲ್ಲಿ ಆದಷ್ಟು ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಇಡುವುದನ್ನ ತಪ್ಪಿಸಿ.

ಇನ್ನು ಮನೆಯ ಚಾವಣಿ ಮೇಲೆ ಇರಿಸಲಾದ ನೀರಿನ ಟ್ಯಾಂಕ್ ಕೂಡ ವಾಸ್ತುದೋಷಕ್ಕೆ ಕಾರಣ ಆಗಬಹುದು. ಹಾಗಾದಾಗ ಹಣ ಸಂಪಾದನೆ ನಿಲ್ಲುತ್ತದೆ. ಹಾಗಾಗಿ ನೀರಿನ ಟ್ಯಾಂಕ್ ಅಥವಾ ತೊಟ್ಟಿ ಯಾವಾಗಲೂ ನೈರುತ್ಯ ದಿಕ್ಕಿನಲ್ಲಿಯೇ ಇಡಬೇಕು ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.

ಇನ್ನು ಮನೆಯಲ್ಲಿ ಪೂಜಾ ಸ್ಥಳದ ಬಗ್ಗೆಯೂ ಕೆಲವು ವಿಶೇಷ ವಾಸ್ತು ನಿಯಮಗಳು ಇವೆ. ಪೂಜಾ ಸ್ಥಳ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಇವರನ್ನು ಪೂಜಿಸುವಾಗ ನಿಮ್ಮ ಮುಖ ಈಶಾನ್ಯ ದಿಕ್ಕಿಗೆ ಇರಬೇಕು ಇನ್ನು ಪೂರ್ವಜರ ಭಾವಚಿತ್ರವನ್ನು ಪೂಜಾ ಸ್ಥಳದಲ್ಲಿ ಇಡಬಾರದು.

ಇನ್ನು ಮನೆಯ ಅಡುಗೆ ಮನೆ ಕೂಡ ವಾಸ್ತುವಿನ ಪ್ರಕಾರ ಇದ್ರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ನೀವು ಅಡುಗೆ ಮಾಡುವಾಗ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಆದ್ರೆ ನೀವು ರಾತ್ರಿ  ಪಾತ್ರೆಯನ್ನು ತೊಳೆಯದೆ ಹಾಗೆ ಇಡಬಾರದು. ಅದೇ ರೀತಿ ಕಸ ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು. ಪಾಲಿಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿ ಕಂಡಿತವಾಗಿ ನೆಲೆಸುತ್ತಾಳೆ.

Comments are closed.