Sonu Shrinivas Gowda: ಸೋನು ಗೌಡ ಕಾಂತಾರ ಸಿನಿಮಾ ನೋಡಿ, ಆಸ್ಪತ್ರೆ ಸೇರಿಕೊಂಡದ್ದು ಯಾಕೆ ಗೊತ್ತೇ?? ಸ್ಯಾಂಡೆಲ್ವುಡ್ ಚಿಟ್ಟೆ ಸೋನು ಗೆ ಏನಾಗಿತ್ತು ಗೊತ್ತೇ??

Sonu Shrinivas Gowda: ಕಳೆದ ವರ್ಷ ಸೆಪ್ಟೆಂಬರ್ 30ರಂದು ಸ್ಯಾಂಡಲ್ವುಡ್ (Sandalwood) ನವರಿಗೆ ಮರೆಯಲಾಗದ ದಿನ. ಯಾಕಂದ್ರೆ ಕಾಂತರಾ (kantara) ಎನ್ನುವಂತಹ ಒಂದು ಅದ್ಭುತ ಸಿನಿಮಾ (Film) ಆ ದಿನ ತೆರೆಗೆ ಅಪ್ಪಳಿಸಿತು. ತೆರೆಯ ಒಳಗೂ ಹೊರಗು ಅಬ್ಬರಿಸಿದ ಸಿನಿಮಾ ಇದು. ಇನ್ನು ಕೇವಲ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಇತರ ಹಲವು ಭಾಷೆಗಳಲ್ಲಿ ತೆರೆಕಂಡ ಕಾಂತರಾ ಸಿನಿಮಾ ಇದೀಗ ಆಸ್ಕರ್ ನಾಮ ನಿರ್ದೇಶನ ಪಟ್ಟಿಯಲ್ಲಿಯೂ ಕೂಡ ಸೇರಿಕೊಂಡಿದೆ. ಹಾಕಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಕೆ ಮಾಡಿದೆ ಕಾಂತಾರ ಸಿನಿಮಾ.

ತುಳುನಾಡಿನ ವೈಭವವನ್ನು ಕಾಂತಾರ ಸಿನಿಮಾದಲ್ಲಿ ಅನಾವರಣಗೊಳಿಸಲಾಗಿದೆ ಹಾಗಾಗಿ ಈ ಸಿನಿಮಾ ಕನ್ನಡಿಗರಿಗೆ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂನವರಿಗೂ ಕೂಡ ಹೆಚ್ಚು ಆಪ್ತವಾಗಿದೆ.  ಕೇವಲ 17 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಬರೋಬ್ಬರಿ 400 ಕೋಟಿ ಅಧಿಕ ಹಣ ಗಳಿಸಿದೆ ಇದೀಗ ಕಾಂತರಾ ಟು ಸಿನಿಮಾದ ರೆಡಿ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಶೆಟ್ಟಿ (Rishab Shetty). ಇದನ್ನೂ ಓದಿ: Sun eclipse effect 2023: ಬರುತ್ತದೆ ವರ್ಷದ ಮೊದಲ ಸೂರ್ಯ ಗ್ರಹಣ: ಯಾವ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಗೊತ್ತೇ? ಕೊಂಚ ಎಚ್ಚರದಿಂದಿರಿ!

ಇನ್ನು ಈ ಸಿನಿಮಾದಲ್ಲಿ ಇದ್ದ ಅದ್ಭುತವಾದ ಕೋಲ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಸೆಲೆಬ್ರಿಟಿಗಳು ಕೂಡ ನಿರ್ದೇಶಕ ಹಾಗೂ ನಟ ರಿಶಬ್ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದರು. ಅಂದಹಾಗೆ ಸೋನು ಶ್ರೀನಿವಾಸ್ ಗೌಡ ಮಾತ್ರ ಈ ಸಿನಿಮಾ ನೋಡಿ ನಾನು ಅಸ್ವಸ್ಥಳಾಗಿದ್ದೆ ಎಂದು ಹೇಳಿಕೊಂಡಿದ್ದಾರೆ ಇದಕ್ಕೆ ಕಾರಣ ಏನು ಗೊತ್ತಾ!?

ಕನ್ನಡಿಗರಿಗೆ ಸೋನು ಗೌಡ ಹೊಸ ಪರಿಚಯ ಹೊಸತೇನು ಅಲ್ಲ ಬಿಗ್ ಬಾಸ್ ಓಟಿಟಿ (Bigg Boss OTT) ಯಲ್ಲಿ ಸಾಕಷ್ಟು ದಿನ ಸ್ಪರ್ಧಿಯಾಗಿ ಉಳಿದುಕೊಂಡಿದ್ದ ಸೋನು ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಏನು ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಗೆ ಹೋಗುವುದಕ್ಕೂ ಮೊದಲು ಸೋಶಿಯಲ್ ಮೀಡಿಯಾದ (Social Media) ಮೂಲಕ ಫೇಮಸ್ ಆದವರು. ಸೋಶಿಯಲ್ ಮೀಡಿಯಾದ ಇನ್ಫ್ಲುಎನ್ಸರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಒಂದು ರಿಲೀಸ್ ಆಗಿ ಸೋಶಿಯಲ್ ಮೀಡಿಯಾದ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬಗ್ಗೆ ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಹೇಳಿಕೊಂಡಿದ್ದರು ಇದು ನನ್ನ ಬಾಯ್ ಫ್ರೆಂಡ್ ನಂಬಿದಕ್ಕೆ ಆಗಿರುವ ಅನಾಹುತ ಎಂದು ಹೇಳಿದ್ದರು. ಇದನ್ನೂ ಓದಿ: Real Story: ಸೌಂದರ್ಯಕ್ಕೆ ಮೋಹಕ್ಕೆ ಬಿದ್ದ: ಗಂಡನಿಗೆ HIV ಟೆಸ್ಟ್ ಮಾಡಿಸು, ಸಾವಿರಾರು ಕೋಟಿ ಅಸ್ತಿ ನಿಂದೆ: ಕೊನೆಗೆ ಅವರ ಕಥೆ ಏನಾಯ್ತು ಗೊತ್ತೇ??

ಏನು ಸೋನು ಶ್ರೀನಿವಾಸ ಗೌಡ ಅವರ ಮಾತು, ಸ್ಟೈಲ್ ಎಲ್ಲದಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಟ್ರೋಲ್ ಆಗುತ್ತಾರೆ. ಸಿಕ್ಕಾಪಟ್ಟೆ ಫ್ಯಾನ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಟ್ರೊಲ್ಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗಾಗಿ ಇಂದಿಗೂ ಅವರು ಸೋಶಿಯಲ್ ಮೀಡಿಯಾದ ಮೂಲಕವೇ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ.

ಇದೀಗ ಕಾಂತರಾ ಸಿನಿಮಾ ನೋಡಿ ತನಗೆ ಅಸ್ವಸ್ಥತೆ ಉಂಟಾಗಿತ್ತು ಎನ್ನುವ ಹೇಳಿಕೆ ನೀಡಿದ್ದಾರೆ ಇದಕ್ಕೆ ಕಾರಣ ಏನು ಗೊತ್ತಾ? ಅವರು  ಬಿಗ್ ಬಾಸ್  ಮನೆಯಿಂದ ಬರುತ್ತಿದ್ದ ಹಾಗೆ ಅವರ ಸ್ನೇಹಿತರು ಕಾಂತಾರಾ ಸಿನಿಮಾ ನೋಡುವುದಕ್ಕೆ ಸಲಹೆ ನೀಡಿದ್ದರಂತೆ. ಅದೇ ರೀತಿಯಾಗಿ ಕಾಂತಾರಾ ಸಿನಿಮಾವನ್ನು ಥೀಯೇಟರ್ ನಲ್ಲಿ ನೋಡಿದ್ದಾರೆ ಸೋನು. ರಿಷಬ್ ಶೆಟ್ಟಿ ಅವರ ಆಕ್ಟಿಂಗ್ ನೋಡಿ ನನಗೆ ಭಯವಾಗಿತ್ತು. ಅಸ್ವಸ್ಥತೆ ಉಂಟಾಗಿತ್ತು ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ನಂತರ ಸೋನು ಶ್ರೀನಿವಾಸ್ ಗೌಡ ಕನ್ನಡಿಗರಿಗೆ ಇನ್ನಷ್ಟು ಪರಿಚಿತರಾಗಿದ್ದಾರೆ.

Comments are closed.