Wedding tradition: ಅಣ್ಣನನ್ನು ಮದುವೆಯಾಗಿ ಆತನ ತಮ್ಮಂದಿರ ಜೊತೆಯೂ ಅಕೆಯೊಬ್ಬಳೇ ಸಂಸಾರ ಮಾಡುತ್ತಾಳೆ; ಇಂದಿಗೂ ಇದೆಯಾ ಪಾಂಚಾಲಿ ಆಚರಣೆ?! ಎಲ್ಲಿ ಗೊತ್ತೇ?

Wedding tradition: ಮಹಾಭಾರತದಲ್ಲಿ ದ್ರೌಪದಿ ಪಾಂಡವರನ್ನ ಮದುವೆ ಆಗಿರುವ ವಿಷಯ ನಿಮಗೆ ಗೊತ್ತೇ ಇದೆ ಆದರೆ ಇದರ ಹಿನ್ನೆಲೆ ಸಾಕಷ್ಟು ವಿಶಾಲವಾದದ್ದು. ಆದರೆ ಇಂತಹ ಒಂದು ಆಚರಣೆ ಅಥವಾ ಪದ್ಧತಿಯನ್ನು ಕೂಡ ಈಗಲೂ ಭಾರತದಲ್ಲಿ ಒಂದು ಪ್ರದೇಶದಲ್ಲಿ ಆಚರಿಸುತ್ತಾರೆ.

ಹೌದು ಭಾರತ ವೈವಿಧ್ಯತೆಯ ರಾಷ್ಟ್ರ ಇಲ್ಲಿ ಎಲ್ಲಾ ರೀತಿಯ ಸಂಪ್ರದಾಯ ಆಚರಣೆಗಳನ್ನು ಮಾಡುವ ವಿಭಿನ್ನ ಜನರು ಇದ್ದಾರೆ. ಮದುವೆಯ (Marriage) ವಿಚಾರಕ್ಕೆ ಬಂದ್ರು ಅಲ್ಲಿಯೂ ಕೂಡ ಸಾಕಷ್ಟು ವಿಭಿನ್ನತೆ ಇದೆ ಆಯಾ ಪ್ರದೇಶಕ್ಕೆ ತಕ್ಕ ಹಾಗೆ ಅಲ್ಲಿನ ಆಚರಣೆಯನ್ನು ಮಾಡುತ್ತಾರೆ ವಿವಿಧ ಜಾತಿಯವರು ಬುಡಕಟ್ಟಿನವರು ತಮ್ಮದೇ ಆದ ರೀತಿಯಲ್ಲಿ ಮದುವೆ ಸಂಪ್ರದಾಯ ಅನುಸರಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಇರುವ ಈ ಒಂದು ಪದ್ಧತಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಈ ಹುಡುಗಿ ಅದೃಷ್ಟವಂತಳೋ ದುರಾದೃಷ್ಟವಂತಳೋ ನೀವೇ ಡಿಸೈಡ್ ಮಾಡಿ. ಇದನ್ನೂ ಓದಿ: Siddaramaiah: ನಾನು ಹಿಂದೂ, ಆದರೆ ಹಿಂದುತ್ವ ಒಪ್ಪಲ್ಲ ಎಂದ ಸಿದ್ದುಗೆ ಮಂತ್ರಾಲಯ ಮಠದ ಶ್ರೀಗಳು ಮಾತಿನ ಚಾಟಿ ಬೀಸಿದ್ದು ಹೇಗೆ ಗೊತ್ತಾ?

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗಬೇಕು. ಇದು ಇಂದು ನಿನ್ನೆಯ ಪದ್ಧತಿಯಲ್ಲ ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತಿದ್ದು ಇದು ಸಾಕಷ್ಟು ವರ್ಷ ಹಳೆಯದಾದ ಒಂದು ವಿಚಿತ್ರ ಪದ್ಧತಿ.

ಮನೆಯ ದೊಡ್ಡಣ್ಣ ಮದುವೆ ಶಾಸ್ತ್ರದಲ್ಲಿ ಭಾಗಿ:

ಒಂದು ಕುಟುಂಬದಲ್ಲಿ ಎಷ್ಟೇ ಸಹೋದರರು ಇದ್ರೂ ಆ ಕುಟುಂಬದ ಎಲ್ಲಾ ಸಹೋದರರು ಒಬ್ಬಳೇ ಒಬ್ಬಳು ಹುಡುಗಿಯನ್ನು ಮದುವೆ ಆಗುವ ಪದ್ಧತಿ ಇದು. ಇಲ್ಲಿ ಮದುವೆಯ ಶಾಸ್ತ್ರವನ್ನ ಹಿರಿಯ ವ್ಯಕ್ತಿ ನೋಡಿಕೊಳ್ಳುತ್ತಾನೆ. ಆ ಹುಡುಗಿ ಯಾರ ಜೊತೆ ಸಂಸಾರ ಮಾಡಿದರು, ಅವರಿಗೆ ಹುಟ್ಟಿದ ಮಗುವನ್ನು ಎಲ್ಲರೂ ತಮ್ಮ ಮಗು ಎಂಬಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹೆಂಡತಿಯೊಂದಿಗೆ ಯಾರು ಕೋಣೆಗೆ ಹೋಗಬೇಕು ಎಂಬುದನ್ನು ಕೂಡ ದೊಡ್ಡ ಅಣ್ಣನೆ ನಿರ್ಧರಿಸುತ್ತಾನೆ. ಇನ್ನು ಮಹಾಭಾರತದಲ್ಲಿ ದ್ರೌಪದಿಯ ಕಥೆ ನಿಮಗೆ ಗೊತ್ತೇ ಇದೆ ಪಾಂಡವರು ತಮ್ಮ ಪತ್ನಿ ದ್ರೌಪದಿ ಹಾಗೂ ತಾಯಿ ಕುಂತಿಯೊಂದಿಗೆ ಅಜ್ಞಾತವಾಸದ ಸಮಯದಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ ಒಂದರಲ್ಲಿ ವಾಸವಾಗಿದ್ದರು ಎನ್ನುವ ನಂಬಿಕೆ ಇದೆ ಹಾಗಾಗಿ ಅಲ್ಲಿಂದಲೇ ಈ ಪದ್ಧತಿ ಮುಂದುವರೆಸಿಕೊಂಡು ಬರಲಾಗಿದೆ ಎಂದು ಕೂಡ ಹೇಳಲಾಗುತ್ತೆ. ಇದನ್ನೂ ಓದಿ: Zee Kannada Audition: ಜೀ ಕನ್ನಡದಲ್ಲಿ ಬೃಹತ್ ರಿಯಾಲಿಟಿ ಶೋಗಳ ಆಡಿಶನ್ ಶುರು; ಈ ಒಂದು ಅರ್ಹತೆ ಕಡ್ಡಾಯ, ಯಾವುದು ಗೊತ್ತಾ?

ಟಿಬೆಟ್ ನಲ್ಲಿಯೂ ಇದಿಯಾ ಇದೇ ಪದ್ಧತಿ?

ಸಾಮಾನ್ಯವಾಗಿ ಟಿಬೆಟ್ (Tibet) ನಲ್ಲಿ ಕುಟುಂಬದ ಯಾವುದಾದರೂ ಒಬ್ಬ ಸದಸ್ಯ ಬೌದ್ಧ ಧರ್ಮ (Buddhism) ಕ್ಕೆ ಅಥವಾ ಸನ್ಯಾಸತ್ವ ಸ್ವೀಕರಿಸುವುದು ಮಾಮೂಲಿ ಆದರೆ ಇಲ್ಲಿಯೂ ಕೂಡ ಪಾಲಿಯೆಂಟ್ ವಿವಾಹ ಪದ್ಧತಿ ಇದೆ. ಅಂದರೆ ಸಹೋದರರೆಲ್ಲ ಒಂದೇ ಹುಡುಗಿಯನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯ ಇದನ್ನೇ ಹಿಮಾಚಲ ಪ್ರದೇಶದಲ್ಲಿಯೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಲಾಗುತ್ತೆ.

ಪ್ರಪಂಚ ಎಷ್ಟೇ ಮುಂದುವರೆದರೂ ಕೆಲವರು ತಮ್ಮ ಆಚರಣೆ ಸಂಪ್ರದಾಯಗಳನ್ನ ಬಿಡುವುದಿಲ್ಲ ಆದರೆ ಇಂತಹ ಕೆಲವು ಸಂಪ್ರದಾಯಗಳು ನಿಜಕ್ಕೂ ನಮಗೆ ಆಶ್ಚರ್ಯ ತರುತ್ತವೆ. ಆದರೆ ಇಂತಹ ಮದುವೆ ಈಗ ಅಷ್ಟಾಗಿ ಬೆಳಕಿಗೆ ಬರುತ್ತಿಲ್ಲ ಒಂದು ವೇಳೆ ಮದುವೆ ಆದರು ಅದು ಗೊತ್ತಾಗದ ಹಾಗೆ ಗುಟ್ಟಾಗಿ ಇಡುತ್ತಾರೆ.

Comments are closed.