Siddaramaiah: ನಾನು ಹಿಂದೂ, ಆದರೆ ಹಿಂದುತ್ವ ಒಪ್ಪಲ್ಲ ಎಂದ ಸಿದ್ದುಗೆ ಮಂತ್ರಾಲಯ ಮಠದ ಶ್ರೀಗಳು ಮಾತಿನ ಚಾಟಿ ಬೀಸಿದ್ದು ಹೇಗೆ ಗೊತ್ತಾ?

Siddaramaiah:  ನಾನು ಹಿಂದೂ (Hindu) ಆದರೆ ಹಿಂದುತ್ವ (Hinduism) ವನ್ನು ಒಪ್ಪುವುದಿಲ್ಲ ಎನ್ನುವ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿದ್ದರು. ಇದಕ್ಕೆ ಈಗ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ (Shree Subudhendra theertha Swamiji) ತಿರುಗೇಟು ನೀಡಿದ್ದಾರೆ.

ಹಿಂದೂ ಎಂದು ಹೇಳಿಕೊಂಡ ಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು. ಹಿಂದುಗಳಲ್ಲಿಯೇ ಇರುವಂತದ್ದು ಹಿಂದುತ್ವ. ಹಾಗಾಗಿ ಹಿಂದೂ ಆದಮೇಲೆ ಹಿಂದೂತ್ವವನ್ನು ಗೌರವಿಸುವುದು ಪ್ರೀತಿಸುವುದು ಸಹಜ ಎಂಬುದಾಗಿ ಶ್ರೀಗಳು ಹೇಳಿದ್ದಾರೆ. ತಾಯಿ ಅಂದಮೇಲೆ ಅವಳಿಗೆ ನೀನು ಸಂತಾನವೇ ಆಯ್ತಲ್ವಾ ಎಂದು ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ಒಂದು ಕಡೆ ನನ್ನ ತಾಯಿ ಅನ್ನೋದು. ಇನ್ನೊಂದು ಕಡೆ ಅಗೌರವ ತೋರಿಸುವುದು ತಾಯಿ ಅಂದಮೇಲೆ ಅವಳಿಗೆ ಸಂತಾನ ಇದೆ ಎಂದು ಆಯ್ತಲ್ಲವೇ ಎಂಬುದಾಗಿ ಮಾರ್ಮಿಕವಾಗಿ ಹೇಳಿದ್ದಾರೆ ಅಂದರೆ ಹಿಂದೂ ಎಂದ ಮೇಲೆ ಹಿಂದುತ್ವವನ್ನು ಒಪ್ಪಿಕೊಳ್ಳಬೇಕು ಎಂಬುದು ಶ್ರೀಗಳ ಮಾತಿನ ಒಳಾರ್ಥ ಎನ್ನಬಹುದು.

ಇನ್ನು ಸಿದ್ದರಾಮಯ್ಯ ಅವರ ಮಾತಿಗೆ ಬೇಸರ ವ್ಯಕ್ತಪಡಿಸಿದ ಶ್ರೀಗಳು ಸಿದ್ದರಾಮಯ್ಯ ಅವರ ದ್ವಂದ್ವ ಹೇಳಿಕೆಯಲ್ಲಿ ಯಾವುದೇ ಅರ್ಥವು ಕಾಣಿಸುತ್ತಿಲ್ಲ. ಹಿಂದುತ್ವದ ವಿಚಾರದಲ್ಲಿ ಅವರಿಗೆ ಭೇದ ಇರಬಹುದು ಅವರ ವಿಚಾರ ವಿನಿಮಯ ಮಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳುವುದು ಉತ್ತಮ ನಾನು ಹಿಂದೂ ಆದರೆ ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನ ಮಾತು ಎಂಬುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

Comments are closed.