Zee Kannada Audition: ಜೀ ಕನ್ನಡದಲ್ಲಿ ಬೃಹತ್ ರಿಯಾಲಿಟಿ ಶೋಗಳ ಆಡಿಶನ್ ಶುರು; ಈ ಒಂದು ಅರ್ಹತೆ ಕಡ್ಡಾಯ, ಯಾವುದು ಗೊತ್ತಾ?

Zee Kannada Audition: ಜೀ ಕನ್ನಡ ವಾಹಿನಿ ಇದುವರೆಗೆ ವೀಕ್ಷಕರಿಗೆ (viewers) ಮನರಂಜನೆ (Entertainment) ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಒಂದು ರೀತಿಯಲ್ಲಿ ಒಂದಲ್ಲ ಒಂದು ರಿಯಾಲಿಟಿ ಶೋ (Reality Show) ಗಳ ಮೂಲಕ ಜನರನ್ನ ಮೆಚ್ಚಿಸಿಕೊಂಡು ಬಂದಿದೆ ಜೀ ಕನ್ನಡ ವಾಹಿನಿಯಲ್ಲಿ ಡಿಕೆಡಿ (DKD) ಹಾಗೂ ಸರಿಗಮಪ ಕಾರ್ಯಕ್ರಮಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ. ಕನ್ನಡ ನಾಡಿನಲ್ಲಿ ಮನೆ ಮಾತಾಗಿರುವ ಜೀ ಕನ್ನಡ ವಾಹಿನಿ ಇದೀಗ ಜನರನ್ನ ಆರಂಭಿಸಲು ಮತ್ತೆ ಕೆಲವು ರಿಯಾಲಿಟಿ ಶೋಗಳ ಮೂಲಕ ಹೊಸದಾಗಿ ಕಾಣಿಸಿಕೊಳ್ಳುತ್ತಿದೆ.

ಹೌದು ಚೋಟಾ ಚಾಂಪಿಯನ್ 3 (Chota Champion)  ಹಾಗೂ ಡಿಕೆಡಿ 7 ಜೊತೆಗೆ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮ ಕೂಡ ಇನ್ನೇನು ಪ್ರಸಾರವಾಗಲಿದೆ ಆದರೆ ಇದೆಲ್ಲಕ್ಕಿಂತ ಮೊದಲು ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಆಡಿಶನ್ ಕೂಡ ನಡೆಯಲಿದೆ. ಇದನ್ನೂ ಓದಿ: Cricket News: ಸಿರಾಜ್ ಮತ್ತು ಶುಭಮಂ ಗಿಲ್ ನಡುವೆ ಸೃಷ್ಟಿಯಾದ ಪೈಪೋಟಿ: ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಐಸಿಸಿ. ಏನಾಗಿದೆ ಗೊತ್ತೇ??

ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ಇದೊಂದು ಶುಭ ಸುದ್ದಿ. ನಿಮ್ಮ ಮಕ್ಕಳನ್ನು ಚೋಟಾ ಚಾಂಪಿಯನ್ ಗೆ ಕಳಿಸಬೇಕು ಅಂತ ಇದ್ದರೆ, ಇನ್ನು ನಿಮಗೆ ಚೆನ್ನಾಗಿ ಡ್ಯಾನ್ಸ್ ಮಾಡೋದಕ್ಕೆ ಗೊತ್ತಿದ್ರೆ ತಕ್ಷಣವೇ ಆಡಿಶನ್ ಗೆ ಸಿದ್ಧರಾಗಿ ಜೀ ಕನ್ನಡ ಇದೀಗ ಆಡಿಶನ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಜನರು ಬಹುದಿನದಿಂದ ಕಾಯುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆಗಿದೆ ಹಾಗಾಗಿ ಜನರಿಗೆ ಯಾರೆಲ್ಲಾ ಸಾಧಕರು ಈ ಬಾರಿ ವೇದಿಕೆಯಲ್ಲಿ ರಾರಾಜಿಸಲಿದ್ದಾರೆ ಎಂಬುದನ್ನು ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಇದೇ ಶನಿವಾರದಿಂದ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ ಮತ್ತು ಚೋಟಾ ಚಾಂಪಿಯನ್ ಸೀಸನ್ ತ್ರೀ ರಿಯಾಲಿಟಿ ಶೋಗಳ ಆಡಿಶನ್ ರಾಜ್ಯಾದ್ಯಂತ ನಡೆಯಲಿದೆ.

ಆಡಿಶನ್ ಗೆ ಬೇಕಾದ ಅರ್ಹತೆಗಳು;

ಛೋಟಾ ಚಾಂಪಿಯನ್ ಆಗಲು ಇಚ್ಚಿಸುವವರು 2 ರಿಂದ 6 ವಯಸ್ಸಿನ ಪುಟಾಣಿಗಳು, ಆಡಿಶನ್ ಗೆ ಸಿದ್ದರಾಗಬಹುದು. ಅದೇ ರೀತಿ ಡ್ಯಾನ್ಸ್ ಶೋ ಗೆಲ್ಲುವ ಕನಸು ಹೊತ್ತಿದ್ರೆ ಆರರಿಂದ 60 ವಯಸ್ಸಿನವರೆಗೆ ಯಾರು ಬೇಕಾದರೂ ಆಡಿಶನ್ಗೆ ಸಿಗುತ್ತೆ ಮಾಡಿಕೊಳ್ಳಿ. ರಾಜ್ಯಕ್ಕಿಂತ 31 ಜಿಲ್ಲೆಗಳಲ್ಲಿ ಇದೇ ಶನಿವಾರ 11 ರಿಂದ, ಆಡಿಶನ್ ನಡೆಯಲಿದೆ. ಮತ್ಯಾಕೆ ತಡ ನಿಮ್ಮಲ್ಲೂ ಪ್ರತಿಭೆ ಇದ್ದರೆ ನಿಮ್ಮ ಮಕ್ಕಳು ಕೂಡ ಚೋಟಾ ಚಾಂಪಿಯನ್ ಆಗಬಹುದು ಅಂತ ನಿಮಗೆ ಅನಿಸಿದರೆ ಈ ಕೂಡಲೇ ಆಡಿಶನ್ ಗೆ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಜಿಲ್ಲೆಯ ಯಾವ ಸ್ಥಳದಲ್ಲಿ ಆಡಿಶನ್ ನಡೆಯಲಿದೆ ಎಂಬುದು ಇಷ್ಟರಲ್ಲೇ ಅನೌನ್ಸ್ ಆಗಲಿದೆ.

Comments are closed.