Relationship: ಗಂಡನಿಗೆ ತಿಳಿಯದೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡರೆ ಹೇಗಿರುತ್ತದೆ ಜೀವನ, ಎಂಬ ಪ್ರಶ್ನೆಗೆ ಮಹಿಳೆಯರ ಉತ್ತರ ಕೇಳಿದರೆ ಶಾಕ್ ಆಗ್ತೀರಾ?

Relationship: ಮದುವೆ ಎನ್ನುವ ಸಂಬಂಧ ನಿಂತಿರುವುದೇ ನಂಬಿಕೆಯ ಮೇಲೆ. ಈ ಸಂಬಂಧದಲ್ಲಿ ಏನನ್ನಾದರೂ ಸಹಿಸಬಹುದು. ಆದರೆ ಒಮ್ಮೆ ನಂಬಿಕೆ ಮುರಿದರೆ ಮಾತ್ರ ಮತ್ತೆ ಆ ಸಂಬಂಧ ಜೋಡಿಸುವುದಕ್ಕೆ ಕಷ್ಟ. ಮದುವೆಯಾದ ಗಂಡಾಗಲಿ ಹೆಣ್ಣಾಗಲಿ ಬೇರೆಯವರ ಜೊತೆ ಸಂಪರ್ಕ ಹೊಂದುವುದು ಇಬ್ಬರಿಗೂ ಒಳ್ಳೆಯದಲ್ಲ. ಇದು ಅವರಿಬ್ಬರ ನಡುವೆ ವೈಮನಸ್ಸನ್ನು ತಂದೊಡುತ್ತದೆ ಅದೆಷ್ಟು ಮದುವೆ ಸಂಬಂಧಗಳು ಇದೇ ಕಾರಣಕ್ಕೆ ಮುರಿದು ಬಿದ್ದಿದ್ದು ಇದೆ. ವಿವಾಹಿತ ಮಹಿಳೆಯರು ಇದೇ ವಿಷಯದ ಬಗ್ಗೆ ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಾರೆ ಮದುವೆಯಾದ ನಂತರ ಬೇರೆಯವರ ಜೊತೆ ಸಂಬಂಧ ಬೆಳೆಸಲು ಹೋದರೆ ಜೀವನ ಹೇಗೆ ಆಗುತ್ತದೆ ಎನ್ನುವುದರ ಪರಿಣಾಮದ ಬಗ್ಗೆ ಮಾತನಾಡುತ್ತಾರೆ.

ಮದುವೆಯಾದ ಬಳಿಕ ಬೇರೆಯವರೊಂದಿಗೆ ಸಂಪರ್ಕದಲ್ಲಿ ಇದ್ದರೆ ಹೇಗಿರುತ್ತದೆ ಜೀವನ!? ಮಹಿಳೆಯರ ಉತ್ತರ ಏನು ಗೊತ್ತಾ?

ಈ ಬಗ್ಗೆ 35 ವರ್ಷದ ಮಹಿಳೆ ಒಬ್ಬಳು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನ್ನ ಪತಿ ಅವರ ಕಾರ್ಯದರ್ಶಿ ಮಹಿಳೆಯ ಜೊತೆಗೆ ಸಂಪರ್ಕ ಹೊಂದಿದ್ದರು. ಇದರಿಂದ ನಾನು ನನ್ನ ಪತಿಗೆ ನೀವು ನನಗೆ ಮೋಸ ಮಾಡುತ್ತಿದ್ದೀರಿ ಇಂದು ಹೇಳಿದೆ. ಅದೇ ರೀತಿಯಾಗಿ ನಾನು ನನ್ನ ಪತಿಯ ನಂಬಿಕೆಯನ್ನು ಮುರಿಯಲು ಮತ್ತು ಪುರುಷನ ಜೊತೆಗೆ ಸಂಪರ್ಕ ಬೆಳೆಸಲು ನಿರ್ಧರಿಸಿದೆ. ಆದರೆ ಇದರ ಪರಿಣಾಮ ಏನು ಅಂದ್ರೆ ನಾವಿಬ್ರೂ ಸಿಕ್ಕಾಪಟ್ಟೆ ಅಳುತ್ತಿದ್ವಿ ಅದೇ ರೀತಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುತ್ತಿದ್ದೆವು. ಕೊನೆಗೆ ಇಬ್ಬರು ಒಬ್ಬರನ್ನೊಬ್ಬರು ಮರೆತು ಜೀವನದಲ್ಲಿ ಮುಂದುವರೆಯಲು ನಿರ್ಧರಿಸಿದೆವು.

ಅದೇ ರೀತಿಯಾಗಿ 37 ವರ್ಷದ ಇನ್ನೊಬ್ಬ ಮಹಿಳೆ  ತಾವು ಪತಿಗೆ ಮೋಸ ಮಾಡಿರುವುದರ ಬಗ್ಗೆ ಹೇಳಿಕೊಳ್ಳುತ್ತಾರೆ. ನನ್ನ ಪತಿ ನನ್ನ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ ಪ್ರೀತಿ ವಾತ್ಸಲ್ಯ ತೋರಿಸುವುದಿಲ್ಲ ಹೀಗಾಗಿ ಇದರಿಂದ ಬೇಸತ್ತು ಗಂಡನಿಗೆ ಮೋಸ ಮಾಡಲು ಆಕೆ ನಿರ್ಧರಿಸಿದಳು. ಕೊನೆಗೆ ಇದರಿಂದ ಆಕೆ ಪಶ್ಚಾತಾಪ ಪಡುತ್ತಾಳೆ. ಪತಿಯ ಬಳಿ ಎಲ್ಲಾ ವಿಷಯವನ್ನು ಹೇಳಿಕೊಳ್ಳುತ್ತಾಳೆ. ಮಾತನಾಡುವುದಿಲ್ಲ ಆದರೆ ಅವರ ಮದುವೆಯ ಸಂಬಂಧ ಮಾತ್ರ ಬಲವಂತವಾಗಿ ಒಟ್ಟಿಗೆ ಇರುವಂತೆ ಇದೆ ಎಂಬುದಾಗಿ ಆ ಮಹಿಳೆ ಬೇಸರದಿಂದ ಹೇಳಿಕೊಳ್ಳುತ್ತಾಳೆ.

ಇನ್ನು ಇದೇ ವಿಷಯದ ಬಗ್ಗೆ 44 ವರ್ಷದ ವಿವಾಹಿತ ಮಹಿಳೆ ಒಬ್ಬಳು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನನ್ನ ಪತಿ ಬೇರೆಯವರ ಜೊತೆ ಸಂಬಂಧ ಹೊಂದಿದ್ದು ನನಗೆ ಅರಿವಾಯಿತು ನಂತರ ನನ್ನ ಪತಿಯ ಬಳಿ ಮಾತನಾಡುವುದನ್ನೇ ನಿಲ್ಲಿಸಿದೆ ಅಗತ್ಯ ವಿಚಾರಗಳನ್ನು ಕೇವಲ ಮೆಸೇಜ್ ಮಾಡಿ ಮಾತನಾಡುತ್ತಿದ್ದೆ ಆದರೆ ಇಷ್ಟೆಲ್ಲ ಆದ ನಂತರ ವೈದ್ಯರನ್ನು ಸಂಪರ್ಕಿಸಿ ಥೆರಪಿಕೆ ಒಳಗಾಗಲು ಈ ದಂಪತಿಗಳು ನಿರ್ಧರಿಸಿದರಂತೆ. ಅದರೊಂದಿಗೆ ನಿಧಾನವಾಗಿ ಪತಿಯನ್ನು ಆಕೆ ಕ್ಷಮಿಸಿದ್ದಾಳೆ. ಇದೀಗ ತಮ್ಮ ದಾಂಪತ್ಯ ಜೀವನ ಚೆನ್ನಾಗಿ ಸಾಗುತ್ತಿದೆ ಎಂದು ಆಕೆ ಹೇಳಿಕೊಳ್ಳುತ್ತಾಳೆ.

ಇನ್ನೊಬ್ಬ ಮಹಿಳೆ ಆಕೆಗೆ 42 ವರ್ಷ ವಯಸ್ಸು. ಮದುವೆಗೂ ಮುನ್ನ ಆಕೆಯ ಪತಿಯನ ಕಾಲೇಜಿನಲ್ಲಿ ಭೇಟಿ ಮಾಡಿದರಂತೆ. ಅಂದಿನಿಂದಲೇ ಆತನೇ ತನ್ನ ಸರ್ವಸ್ವ ಎಂದು ಭಾವಿಸಿದ್ದರು. ನಂಬಿರುವ ವ್ಯಕ್ತಿ ನಮಗೆ ಮೋಸ ಮಾಡಿದರೆ ಹೇಗಿರುತ್ತೆ ಮತ್ತೆ ಅವರನ್ನು ನಂಬುವುದಕ್ಕೆ ಕಷ್ಟ ಅಲ್ವಾ. ಆತನನ್ನು ಬಿಟ್ಟು ಹೋಗಲು ಆಗದೆ ಜೊತೆಯಲ್ಲಿ ಇರಲು ಆಗದೆ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ.

ಇನ್ನೊಂದು 32 ವರ್ಷದ ಹುಡುಗಿ ಕಳೆದ ಒಂದು ವರ್ಷದಿಂದ ನನಗೂ ನನ್ನ ಗಂಡನ ನಡುವೆ ಏನು ಸರಿಯಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಹಾರುತ್ತಿದ್ದು ಹೊರಗೆ ಹೋದ ಪತಿ ಮೋಸ ಮಾಡುತ್ತಿದ್ದಾರೆ ಇದು ಆಕೆಗೆ ಅನಿಸಿದೆ ನನ್ನ ಗಂಡ ನನ್ನ ನಾ ಪ್ರೀತಿಸದೇ ಇದ್ದರೂ ನಾನು ಅವರನ್ನು ಬಿಟ್ಟು ಹೋಗಲಾರೆ. ಇದಕ್ಕೆ ಕಾರಣ ನನ್ನ ಮಕ್ಕಳಿಗೆ ಆತನೇ ತಂದೆ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ. ಯಾಕೆಂದ್ರೆ ಮಕ್ಕಳು ಇನ್ನು ಚಿಕ್ಕವರು ತಂದೆ ಸರಿ ಇಲ್ಲ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಲು ನನಗೆ ಇಷ್ಟ ಇಲ್ಲ ಎಂದು ಹೇಳುತ್ತಾರೆ.

ಹಾಗಾದ್ರೆ ನಿಜವಾಗಿಯೂ ಮದುವೆಯ ನಂತರ ಆ ಸಂಬಂಧದಲ್ಲಿ ಪ್ರೀತಿ ಕಡಿಮೆ ಆಗುತ್ತಾ? ಮದುವೆಯ ನಂತರ ಗಂಡ ಹೆಂಡತಿ ನಡುವೆ ಇರಬೇಕಾದ ಪ್ರೀತಿ ನಂಬಿಕೆ ಇರುವುದೇ ಇಲ್ಲವಾ? ಇನ್ನೊಂದು ಪುರುಷ ಅಥವಾ ಮಹಿಳೆಯ ಸಂಪರ್ಕ ಮಾಡುವುದು ಅನಿವಾರ್ಯವೇ ? ಇದು ನಿಮ್ಮ ಚಿಂತನೆಗೆ ಬಿಟ್ಟಿದ್ದು.

Comments are closed.